Koppal| ಸಾಲದ ಹಣಕ್ಕಾಗಿ ರೈತನ ಪತ್ನಿ ಹೊತ್ತೊಯ್ಯಲು ಯತ್ನ

*   ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಉಳೇನೂರಿನಲ್ಲಿ ನಡೆದ ಘಟನೆ
*   ಎರಡು ಗುಂಪುಗಳ ನಡುವೆ ಮಾರಾಮಾರಿ 
*   ಈ ಸಂಬಂಧ ಅಟ್ರಾಸಿಟಿ ಹಾಗೂ 30 7 ಕಲಂನಡಿ ಪ್ರಕರಣ ದಾಖಲು

Trying to Take Away  the Farmer Wife for Loan at Karatagi in Koppal grg

ಕಾರಟಗಿ(ನ.18):  ಸಾಲದ(Loan) ಹಣಕ್ಕಾಗಿ ರೈತನ ಪತ್ನಿಯನ್ನೇ ಹೊತ್ತೊಯ್ಯಲು ಯತ್ನಿಸಿದ ಘಟನೆ ಕೊಪ್ಪಳ(Koppal) ಜಿಲ್ಲೆಯ ಕಾರಟಗಿ(Karatagi)  ತಾಲೂಕಿನ ಉಳೇನೂರು ಗ್ರಾಮ ದಲ್ಲಿ ಮಂಗಳವಾರ ಸಂಜೆ ನಡೆದಿದೆ! 

ಉಳೇನೂರು ಗ್ರಾಮದ ಬಸವರಾಜ ಅಗಸರ ಎನ್ನುವ ರೈತ(Farmer) ದಂಪತಿಯಿಂದ ಸಾಲ ವಸೂಲಿಗೆ ತೆರಳಿದ್ದ ತಂಡ ಒತ್ತಡ ಹೇರಿದೆ. ಸಾಲ ವಸೂಲಿಗಾಗಿ ಅವರ ಭೂಮಿಯನ್ನೇ ತಮ್ಮ ವಶಕ್ಕೆ ಪಡೆಯಲು ಯತ್ನಿಸಿದೆ. ಅಲ್ಲದೇ ಆ ರೈತನ ಪತ್ನಿಯನ್ನು ಹೊತ್ತೊಯ್ಯಲು ಮುಂದಾದಾಗ ರೈತನ ಕುಟುಂಬ ಅಡ್ಡಿ ಪಡಿಸಿದೆ. ಎರಡೂ ಗುಂಪುಗಳ ನಡುವೆ ಘರ್ಷಣೆ ನಡೆದಿದೆ.

Loan; ಸಾಲ ತೀರಿಸಲು ಕೆಲಸ ಮಾಡ್ತಿದ್ದ ಕಂಪನಿಯ ಚಿನ್ನ ನುಂಗಿ ನೀರು ಕುಡಿದ!

ಬಸವರಾಜ ಹಾಗೂ ಅಂಬ್ರಮ್ಮ ರೈತ ದಂಪತಿ ಉಮೇಶಪ್ಪ ಎಂಬವರ ಬಳಿ 3 ಲಕ್ಷ ಸಾಲ ಪಡೆದಿದ್ದರು. ಅನೇಕ ತಿಂಗಳಿಂದ ಸಾಲ ಮರುಪಾವತಿ ಮಾಡದ ಕಾರಣ ಉಮೇಶಪ್ಪನ ಪರವಾಗಿ ದೇವರಾಜ ಮತ್ತು ಫಕೀರಪ್ಪ ಸಾಲ ವಸೂಲಿಗಾಗಿ ಆಗಮಿಸಿದ್ದು, ಹಣ ನೀಡದಿದ್ದಾಗ ಭೂಮಿ(Land) ವಶಕ್ಕೆ ಪಡೆಯಲು ರೈತರ ಜಮೀನಿಗೆ ತೆರಳಿದ್ದರು. ಅಂಬ್ರಮ್ಮ ಭೂಮಿ ವಶಕ್ಕೆ ಪಡೆಯಲು ಅಡ್ಡಿ ಪಡಿಸಿದ್ದಾಳೆ. ಈ ವೇಳೆ ಎರಡು ಗುಂಪಿನ ನಡುವೆ ಮಾರಾಮಾರಿ ನಡೆದಿದೆ. ಅಂಬ್ರಮ್ಮ ಳನ್ನು ಹೊತ್ತೊಯ್ಯಲು ಪ್ರಯತ್ನಿಸಿದ್ದಾರೆ. ಇದನ್ನು ಅರಿತ ರೈತ ಬಸವರಾಜ ಪತ್ನಿ ರಕ್ಷಣೆಗೆ ಮುಂದಾಗಿ ಭತ್ತ ಕಟಾವು ಮಾಡುತ್ತಿದ್ದ ಕೂಡುಗೋಲಿನಿಂದ ವಸೂಲಿಗಾರರ ಮೇಲೆ ಮರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು(Police) ತಿಳಿಸಿದ್ದಾರೆ. ಈ ಘರ್ಷಣೆಯಲ್ಲಿ ಬಸವರಾಜ, ಅಂಬ್ರಮ್ಮ ಮತ್ತು ಅವರ ಚಿಕ್ಕ ಮಕ್ಕಳು ಗಾಯಗೊಂಡಿದ್ದು, ಕಾರಟಗಿ ಸಮುದಾಯ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. 

ನಕಲಿ ದಾಖಲೆ: 

ರೈತ ಕುಟುಂಬ ಕೇವಲ 3 ಲಕ್ಷ ಸಾಲ ಪಡೆದಿತ್ತು. ಆದರೆ ಸಾಲಗಾರರು ನಕಲಿ ದಾಖಲೆ ಸೃಷ್ಟಿಸಿ 5 ಲಕ್ಷ ಹೆಚ್ಚುವರಿಯಾಗಿ ನೀಡಿದ್ದಾಗಿ ಕಥೆ ಕಟ್ಟಿದ್ದರು ಎಂದು ರೈತ ಕುಟುಂಬ ಆರೋಪಿಸಿ ಇದನ್ನು ನ್ಯಾಯಾಲದಲ್ಲಿ(Court) ಪ್ರಶ್ನಿಸಿದೆ. ಗಂಗಾವತಿ ನ್ಯಾಯಾಲಯ ಯಾವುದೇ ಕಾರಣಕ್ಕೂ ಸಾಲಗಾರರ ಜಮೀನು ವಶಕ್ಕೆ ತೆಗೆದುಕೊಳ್ಳಬಾರದೆಂದು ರೈತ ದಂಪತಿ ಪರವಾಗಿ ತಡೆಯಾಜ್ಞೆ ಅದೇಶ(Order) ನೀಡಿದೆ. ಆದರೂ ಕೂಡ ಸಾಲಗಾರರು ಭೂಮಿ ವಶಕ್ಕೆ ಮುಂದಾ ಗಿದ್ದು ಘರ್ಷಣೆಗೆ ಮುಖ್ಯ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಾಲ ವಾಪಸ್‌ ನೀಡದ್ದಕ್ಕೆ ವಾಹನ ಗುದ್ದಿಸಿ ಕೊಲೆ!

ಎರಡು ತಿಂಗಳ ಹಿಂದೆ ಸಹ ಗಲಾಟೆಯಾಗಿತ್ತು. ರೈತ ದಂಪತಿ ಕಾರಟಗಿ ಪೊಲೀಸರಿಗೆ(Police) ದೂರು(Complaint) ನೀಡಿ ಕ್ರಮಕ್ಕೆ ಮನವಿ ಮಾಡಿದ್ದರು. ಇದೀಗ ಕಾರಟಗಿ ಪೊಲೀಸ್ ಠಾಣೆಯಲ್ಲಿ ರೈತ ದಂಪತಿಗಳ ವಿರುದ್ಧ ಜಾತಿ ನಿಂದನಾ(Caste Abuse) ಪ್ರಕರಣ ದಾಖಲಾಗಿದ್ದರೆ, ಬಸವರಾಜ ದಂಪತಿ ತಮ್ಮ ಮೇಲೆ ಹಲ್ಲೆ ಮಾಡಿ ತನ್ನ ಪತ್ನಿ ಅಂಬ್ರಮ್ಮರನ್ನು ಹೊತ್ತೊಯ್ಯಲು ಪ್ರಯತ್ನಿಸಿ ದವರ ವಿರುದ್ಧ ದೂರು ಸಲ್ಲಿಸಿದ್ದಾರೆ. 

ಡಿವೈಎಸ್ಪಿ ಉಜ್ಜನಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ್ದರು ಜಮೀನು ಕಟಾವು ಮಾಡುವ ವೇಳೆ ಅನೇಕರು ಬಂದು ನನ್ನ ಮೇಲೆ ದಾಳಿ ನಡೆಸಿದ್ದಾರೆ. ಪತ್ನಿಯ ಮೇಲೂ ಹಲ್ಲೆ ನಡೆಸಿ, ಆಕೆಯನ್ನು ಹೊತ್ತೊಯ್ಯಲು ಪ್ರಯತ್ನಿಸಿದರು. ಗಲಾಟೆಯಲ್ಲಿ ನಮಗೆ, ಮಕ್ಕಳಿ ಗೂಯಗಳಾಗಿವೆ. ಈ ಹಿಂದೆಯೂ ನಮ್ಮ ಮೇಲೆ ದಾಳಿ ನಡೆದಿತ್ತು. ಪೊಲೀಸ್ ಠಾಣೆಯಲ್ಲಿ ಕಳೆದ ಕೆಲ ದಿನಗಳ ಹಿಂದೆಯೇ ಪ್ರಕರಣ ದಾಖಲಿಸಿದ್ದೇನೆ ಅಂತ ಉಳೇನೂರಿನ ಹಲ್ಲೆಗೊಳಗಾದ ರೈತ  ಬಸವರಾಜ,
ಉಳೇನೂರಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಸಂಬಂಧ ಅಟ್ರಾಸಿಟಿ ಹಾಗೂ 30 7 ಕಲಂನಡಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಅಂತ ಕಾರಟಗಿ ಠಾಣೆಯ ಪಿಐ ವೀರಭದ್ರಯ್ಯ ಹಿರೇಮಠ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios