ಬಾಗಲಕೋಟೆ[ಆ.15]: ಭೀಕರ ಪ್ರವಾಹ ಕರುನಾಡಿನ 17 ಜಿಲ್ಲೆಗಳಲ್ಲಿ ಆತಂಕದ ವಾತಾವರಣ ನಿರ್ಮಿಸಿತ್ತು. ಕಂಗಾಲಾದ ಜನ ಮನೆ, ಜಾನುವಾರುಗಳನ್ನು ಕಳೆದು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಹೀಗಿದ್ದರೂ ಆಸರೆ ಕಳೆದುಕೊಂಡ ಜನರು ದೇಶಪ್ರೇಮ ಮರೆತಿಲ್ಲ. 73ನೇ ಸ್ವಾತಂತ್ರ್ಯ ದಿನದಂದು ಗ್ರಾಮವಿಡೀ ನೀರಿನಿಂದ ಆವೃತವಾಗಿದ್ದರೂ, ನೀರಿನಲ್ಲೇ ನಿಂತು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆ; ಲಡಾಕ್‌ಗೆ ಧೋನಿ ಭೇಟಿ; ಕೇಂದ್ರಾಡಳಿತದಲ್ಲಿ ಹೊಸ ಸಂಚಲನ!

ಹೌದು ಬಾಗಲಕೋಟೆ ಜಿಲ್ಲೆಯ ತ್ರಿವೇಣಿ ಸಂಗಮದ ನಾಡು, ಬಸವಣ್ಣನ ಐಕ್ಯತಾಣವಾದ ಕೂಡಲಸಂಗಮದಲ್ಲಿ ನೆರ ಪ್ರವಾಹದ ಮಧ್ಯೆ ಯುವಕರು ಧ್ವಜಾರೋಹಣ ಮಾಡಿದ್ದಾರೆ. ಕೂಡಲಸಂಗಮ ಗ್ರಾಮ ಮುಳುಗಡೆಯಾಗಿ ಎದೆಮಟ್ಟಕ್ಕಿದ್ದ ನೀರಿನ ಮಧ್ಯೆಯೂ ಧ್ವಜಾರೋಹಣ ನೆರವೇರಿಸಿ ದೇಶಭಕ್ತಿ ಮೆರೆದಿದ್ದಾರೆ.

ಕ್ರಾಂತಿರಂಗ ಸ್ವಯಂ ಸೇವಾ ಸಂಸ್ಥೆ ಯುವಕರು ಅದ್ಯಕ್ಷ ತೀಥ೯ಲಿಂಗ್ ಬೆಳಗಲ್ ಸಮ್ಮುಖದಲ್ಲಿ ಗ್ರಾಮದ ಯುವಕರಿಂದ ಧ್ವಜಾರೋಹಣ ನಡೆಸಿ, ರಾಷ್ಟ್ರಗೀತೆ ಹಾಡಿ, ದೇಶಭಕ್ತಿ ಘೋಷಣೆಗಳನ್ನ ಕೂಗಿದ್ದಾರೆ. ಅಲ್ಲದೇ ದೇಶ ಮೊದಲು, ನಂತ್ರ ನಾವು ಎಂಬ ಘೋಷಣೆ ವಿಶೇಷವಾಗಿ ಗಮನ ಸೆಳೆಯಿತು.