Asianet Suvarna News Asianet Suvarna News

ಬಾಗಲಕೋಟೆ: ಬೈಕ್‌, ಕತ್ತೆಗಳ ಮೂಲಕ ಮರಳು ಸಾಗಣೆ..!

ಇಂಥ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕಿದ್ದ ಪೋಲೀಸ್‌ ಇಲಾಖೆ ಮತ್ತು ಪರಿಸರ ಸಂರಕ್ಷಣಾ ಇಲಾಖೆ ಸಿಬ್ಬಂದಿ ಗಾಢನಿದ್ರೆಯಲ್ಲಿದ್ದರೆ, ಮರಳು ಲೂಟಿ ಮಾತ್ರ ಯಾವುದೇ ಆತಂಕವಿಲ್ಲದೇ ಅವ್ಯಾಹತವಾಗಿ ನಡೆಯುತ್ತಿದೆ.

Transportation of Sand by Bikes and Donkeys at Rabakavi Banahatti in Bagalkot grg
Author
First Published Jun 9, 2023, 10:30 PM IST | Last Updated Jun 9, 2023, 10:30 PM IST

ಶಿವಾನಂದ ಪಿ.ಮಹಾಬಲಶೆಟ್ಟಿ 

ರಬಕವಿ-ಬನಹಟ್ಟಿ(ಜೂ.09):  ಕಳ್ಳ ವ್ಯವಹಾರಕ್ಕೆ ದುರುಳರಿಗೆ ಹತ್ತಾರು ಅವಕಾಶಗಳಿವೆ. ಅದಕ್ಕೆ ಕಾಲಮಾನಕ್ಕೆ ತಕ್ಕಂತೆ ಕಾನೂನು ಬಾಹಿರ ಕಾರ್ಯದಲ್ಲಿ ತೊಡಗಿ ಭರ್ಜರಿ ಹಣ ಗಳಿಸುವತ್ತ ಹತ್ತಾರು ಮಾರ್ಗಗಳನ್ನು ಹುಡುಕುವ ನಿಶಾಚರಿಗಳೊಂದೆಡೆಯಾದರೆ, ಕೃಷ್ಣೆಯ ಒಡಲು ಖಾಲಿಯಾಗುತ್ತಿದ್ದಂತೆ ಹಗಲು ರಾತ್ರಿ ಎನ್ನದೇ ಕೃಷ್ಣೆಯ ಗರ್ಭ ಸೀಳಿ ಚಿನ್ನದ ಬೆಲೆ ಇರುವ ಕಪ್ಪು ಮರಳನ್ನು ಯಾರ ಹೆದರಿಕೆಯೂ ಇಲ್ಲದೇ ಕಳೆದ ಆರೇಳು ದಿನಗಳಿಂದ ಅವ್ಯಾಹತವಾಗಿ ಸಾಗಿಸಿ ಸಂಗ್ರಹಿಸಕೊಂಡು ಮಾರಾಟ ಮಾಡುವ ಮರಳು ಮಾಫಿಯಾ ತಂಡ ಇದೀಗ ಪಾದರಸದಂತೆ ಕ್ರಿಯಾಶೀಲರಾಗಿ ಕಪ್ಪು ಮರಳು ಎತ್ತುವರಿ ಮಾಡುತ್ತಿದ್ದರೆ, ಇತ್ತ ಇಂಥ ದುಷ್ಕೃತ್ಯಗಳಿಗೆ ಕಡಿವಾಣ ಹಾಕಬೇಕಿದ್ದ ಪೋಲೀಸ್‌ ಇಲಾಖೆ ಮತ್ತು ಪರಿಸರ ಸಂರಕ್ಷಣಾ ಇಲಾಖೆ ಸಿಬ್ಬಂದಿ ಗಾಢನಿದ್ರೆಯಲ್ಲಿದ್ದರೆ, ಮರಳು ಲೂಟಿ ಮಾತ್ರ ಯಾವುದೇ ಆತಂಕವಿಲ್ಲದೇ ಅವ್ಯಾಹತವಾಗಿ ನಡೆಯುತ್ತಿದೆ.

ಹೌದು, ಇದು ರಬಕವಿ-ಮಹಿಷವಾಡಗಿ ಸೇತುವೆ ಬಳಿಯಲ್ಲಿ ನಿತ್ಯ ಎಗ್ಗಿಲ್ಲದೇ ನಡೆಯುತ್ತಿರುವ ಮರಳು ಮಾಫಿಯಾದ ಸಂಕ್ಷಿಪ್ತ ಚಿತ್ರಣ. ಇ​ಗ ಬೇಸಿಗೆ ಲಾಲವಾದ್ದರಿಂದ ಕೃಷ್ಣೆಯ ಒಡಲು ಖಾಲಿಯಾಗುತ್ತಿದೆ. ನದಿಯಲ್ಲಿ ನೀರಿನ ಪ್ರಮಾಣ ಸೊಂಟದಾಳದಲ್ಲಿದೆ. ಇದೇ ಮರಳು ಮಾಫಿಯಾ ದಂಧೆಕೋರರಿಗೆ ವರವಾಗಿದ್ದರಿಂದ 60ಕ್ಕೂ ಹೆಚ್ಚು ಕತ್ತೆಗಳು, ನೂರಾರು ದ್ವಿಚಕ್ರ ವಾಹನಗಳ ಮೂಲಕ ಚಿನ್ನದ ಬೆಲೆಯ ಕಪ್ಪು ಮರಳಿಗೆ ಕನ್ನ ಹಾಕುವತ್ತ ದುರುಳರು ನಿರತರಾಗಿದ್ದಾರೆ. ನರೆಯ ಆಸಂಗಿ, ರಬಕವಿಯ ಕತ್ತೆಗಳ ಮಾಲೀಕರು ನದಿ ಗರ್ಭ ಸೀಳಿ ಮರಳು ಸಂಗ್ರಹಣೆಯಲ್ಲಿ ತೊಡಗಿದ್ದಾರೆ. ಒಂದು ಕತ್ತೆ ಒಂದು ಕ್ವಿಂಟಾಲ್‌ಗೂ ಹೆಚ್ಚಿನ ಮರಳು ಸಾಗಣೆ ಮಾಡಬಲ್ಲದು. ಅದೇ ರೀತಿ ನೂರಾರು ಸಂಖ್ಯೆಯ ದ್ವಿಚಕ್ರ ವಾಹನಗಳ ಮೂಲಕವೂ ಕ್ವಿಂಟಾಲ್‌ ತೂಕದ ಮರಳು ಸಾಗಣೆಯಾಗುತ್ತಿದೆ. 60 ರಿಂದ 75 ಕತ್ತೆಗಳು ನೂರಾರು ದ್ವಿಚಕ್ರ ವಾಹನಗಳು ಮರಳು ಸಂಗ್ರಹಣೆಯಲ್ಲಿ ತೊಡಗಿದ್ದರಿಂದ ನಿತ್ಯ ಟನ್‌ಗಟ್ಟಲೇ ಕಪ್ಪ ಬಂಗಾರ ಎಂದೇ ಕರೆಸಿಕೊಳ್ಳುವ ಕರಿ ಮರಳು ಮಾಫಿಯಾ ವಶವಾಗುತ್ತಿದೆ.

ಬಾಗಲಕೋಟೆ: ಬಾರದ ಮುಂಗಾರು ಕೃಷ್ಣಾ, ಮಲಪ್ರಭಾ & ಘಟಪ್ರಭಾ ನದಿಗಳ ಒಡಲು ಖಾಲಿ ಖಾಲಿ!

ಒಡಲು ಭೂಗಳ್ಳರ ಕಣ್ಣಿಗೆ ಬಿದ್ದಿದ್ದು, ಬೇಸಿಗೆ ಸಂದರ್ಭ ನೀರಿನ ಪ್ರಮಾಣ ಕಡಿಮೆಯಾಗಿರುವ ಕಾರಣ ಅಕ್ರಮ ಮರಳು ದಂಧೆಕೋರರಿಗೆ ಇನ್ನು ಅನುಕೂಲವಾಗಿದೆ. ಅಲ್ಲದೆ ಪೊಲೀಸ್‌ ಹಾಗು ಅ​ಕಾರಿಗಳು ನದಿ ಪಾತ್ರಕ್ಕೆ ಕಾರ್ಯದಲ್ಲಿ ನದಿ ಪಾತ್ರಕ್ಕೆ ಬರುತ್ತಿಲ್ಲವೆಂಬ ಧೈರ್ಯದಿಂದ ದಂಧೆಕೋರರು ರಾಜಾರೋಷವಾಗಿ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ.

ರಬಕವಿ ವ್ಯಾಪ್ತಿಯ ತಟದಲ್ಲಿ ಮರಳುಗಾರಿಕೆ ನಡೆಸಲು ಸಾಧ್ಯವಾಗದ ಕಾರಣ ಅಥಣಿ ತಾಲೂಕಿನ ಮಹಿಷವಾಡಗಿ ವ್ಯಾಪ್ತಿಯ ಆಚೆ ದಡಕ್ಕೆ ತೆರಳಿ ಮರಳು ಲೂಟಿಯಾಗುತ್ತಿದೆ. ತಾಂತ್ರಿಕವಾಗಿ ಈ ಪ್ರದೇಶ ಬನಹಟ್ಟಿಪೋಲೀಸ್‌ಠಾಣೆ ವ್ಯಾಪ್ತಿಗೆ ಬರುವುದಿಲ್ಲವಾದರೂ ಕತ್ತೆಗಳು ಮತ್ತು ದ್ವಿಚಕ್ರ ವಾಹನಗಳ ಮೂಲಕ ಸಾಗಣೆ ಮಾಡಲು ಸೇತುವೆ ದಾಟಿ ರಬಕವಿ ವ್ಯಾಪ್ತಿಯ ನದಿ ತಟದ ಮೂಲಕವೇ ಹಗಲು-ರಾತ್ರಿ ಎನ್ನದೇ ನಿರ್ಭಯವಾಗಿ ಈ ದಂಧೆಕೋರರು ಮರಳು ಲೂಟಿಯಲ್ಲಿ ತೊಡಗಿದ್ದಾರೆ. ಇದನ್ನು ತಡೆಗಟ್ಟಬೇಕಾದ ಸಂಬಂದಿತ ಇಲಾಖೆ ಸಿಬ್ಬಂದಿ ಇದ್ದಾರೋ ಇಲ್ಲವೋ ಎಂಬ ಗುಮಾನಿ ಪರಿಸರ ಪ್ರಿಯರಲ್ಲಿ ಪ್ರಶ್ನೆಯಾಗೇ ಕಾಡುತ್ತಿದೆ. ನದಿ ಒಡಲಲ್ಲಿ ಸಂಗ್ರಹಿತ ಮರಳು ಸಾಗಾಣಿಕೆಯಿಂದ ಏನು ಹಾನಿ? ಎಂಬ ಪ್ರಶ್ನೆಗೆ ನದಿಯ ನೀರು ಸ್ವಯಂ ಶುದ್ದೀಕರಣಗೊಳ್ಳಲು ಮರಳು ಬಹು ಮುಖ್ಯ ಪಾತ್ರ ವಹಿಸುತ್ತದೆ. ನದಿ ಕೆಳಭಾಗದ ಪಾತ್ರ ಕೊಚ್ಚಿ ಹೋಗುವುದನ್ನು ತಡೆಗಟ್ಟಲು ಅಲ್ಲದೇ ಮರಳುಗಾರಿಕೆ ಪ್ರದೇಶದ ಬಲಭಾಗದಲ್ಲಿ ಸೇತುವೆ ಇರುವುದರಿಂದ ಪ್ರವಾಹ ಸಂದರ್ಭದಲ್ಲಿ ಯಮಸೆಳೆತದೊಡನೆ ನುಗ್ಗುವ ನೀರಿನ ರಭಸ ತಡೆಯಲು ತನ್ಮೂಲಕ ಸೇತುವೆಗೆ ಗಂಭಿರತರ ಹಾನಿಯಾಗದಂತೆ ತಡೆಯಲು ನದಿಯಾಳದ ಮರಳು ತುಂಬು ಸಹಕಾರಿಯಾಗಿದೆ. ಅಲ್ಲದೇ ಜಲ ಜೀವಿಗಳ ಸಂತಾನೋತ್ಪತ್ತಿ ಸೇರಿದಂತೆ ಸಸ್ಯ,ಪಾಚಿ ಸೃಷ್ಠಿಯಾಗಿ ಜಲಚರಗಳಿಗೆ ಆಹಾರ ಸರಪಳಿ ಸರಾಗವಾಗಿ ಮತ್ತು ನಿರಂತರವಾಗಿ ಸಿಗಲು ಮರಳು ಪ್ರಧಾನ ಪಾತ್ರ ವಹಿಸುತ್ತದೆ.

ವಿರೋಧಾಬಾಸವೆಂಬಂತೆ ಈ ರೀತಿ ಎರ್ರಾಬಿರ್ರಿಯಾಗಿ ಮರಳು ಎತ್ತುವ ಮೂಲಕ ದುರುಳರು ಪರಿಸರಕ್ಕೆ, ನದಿ ಸ್ವಯಂ ಶುದ್ದೀಕರಣ ಮಾಡಿಕೊಳ್ಳುವ ಕ್ರಿಯೆಗೆ ಮತ್ತು ಪ್ರವಾಹ ಸಂದರ್ಭಲ್ಲಿ ನದಿ ರಭಸವಾಗಿ ಹರಿಯುತ್ತ ಸೇತುವೆಗೆ ನೇರ ಅಪ್ಪಳಿಸುವ ಕಾರಣ ಸೇತುವೆಯ ರಕ್ಷಣೆಗೆ ಗಂಭೀರ ಹಾನಿಯಾಗುತ್ತದೆ. ಇದನ್ನು ತಡೆಗಟ್ಟಬೇಕಾದ ಸಂಬಂದಿತ ಸಿಬ್ಬಂದಿ ತಮಗೂ ಇದಕ್ಕೂ ಯಾವ ಸಂಬಂಧವಿಲ್ಲವೆಂಬಂತೆ ಗಾಢ ಕುಂಭಕರ್ಣ ನಿದ್ರೆಯಲ್ಲಿರುವುದರಿಂದ ಮರಳು ಲೂಟಿಕೋರರಿಗೆ ಇನ್ನಷ್ಟುಪುಷ್ಠಿ ಕೊಟ್ಟಂತಾಗಿದೆ. 

ಬಾಗಲಕೋಟೆ: ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಕ್ರೋಶ, ಮಾದಿಗ ಮಹಾಸಭಾದಿಂದ ಹೋರಾಟದ ಎಚ್ಚರಿಕೆ

ಜಿಲ್ಲಾದಿಕಾರಿಗಳು ಮತ್ತು ಜಿಲ್ಲಾ ಪೋಲೀಸ್‌ ವರಿಷ್ಠರು ತಕ್ಷಣ ಎಚ್ಚರಗೊಂಡು ಸ್ಥಳೀಯ ಸಂಬಂದಿತ ಇಲಾಖೆಗಳ ಸಿಬ್ಬಂದಿಗೆ ಆದೇಶಿಸಿ ಈ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಕಡಕ್‌ ಆದೇಶ ನೀಡಬೇಕೆಂಬುದು ಇಲ್ಲಿನ ಪ್ರಜ್ಞಾವಂತ ಪರಿಸರ ಪ್ರೇಮಿಗಳ ಆಗ್ರಹವಾಗಿದೆ. 

ಜಿಲ್ಲಾಡಳಿತ, ತಾಲೂಕಾಡಳಿತ ಹಾಗು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅ​ಕಾರಿಗಳು ಕೂಡಲೇ ಅಕ್ರಮವಾಗಿ ಮರಳು ಸಾಗಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಪರಿಸರವಾದಿಗಳ ಆಶಯಕ್ಕೆ ಇನ್ನಾದರೂ ಸರ್ಕಾರ ಸ್ಪಂದಿಸುವುದೇ ಎಂದು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios