ಮಂಗಳೂರು(ಫೆ.29): ಮಂಗಳೂರು-ಮಂಗಳೂರು ಜಂಕ್ಷನ್‌ ಮತ್ತು ಪಣಂಬೂರು ಹಾಗೂ ಮಂಗಳೂರು ಜಂಕ್ಷನ್‌ ಮತ್ತು ಜೋಕಟ್ಟೆನಡುವೆ ಹಳಿ ದ್ವಿಗುಣ ಸಂಬಂಧಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗದ ರೈಲು ಸಂಚಾರದಲ್ಲಿ ಮಾ.3 ತನಕ ವ್ಯತ್ಯಯವಾಗಲಿದೆ.

ಮುಂಬಯಿ ಸಿಎಸ್‌ಎಂಟಿ- ಮಂಗಳೂರು ಜಂಕ್ಷನ್‌ ದಿನಂಪ್ರತಿ ಓಡುವ ಎಕ್ಸ್‌ಪ್ರೆಸ್ (ನಂ.12133) ಪ್ರಯಾಣ ಸುರತ್ಕಲ್‌ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಫೆ.28 ರಿಂದ ಮಾಚ್‌ರ್‍ 2 ತನಕ ರದ್ದುಗೊಳ್ಳಲಿದೆ.

ರಸ್ತೆ ಇಲ್ಲದೆ ಶವ ಹೊತ್ತು ಸಾಗಿದ ಸ್ಥಳೀಯರು..!

ಮಂಗಳೂರು ಜಂಕ್ಷನ್‌- ಸಿಎಸ್‌ಎಂಟಿ ದಿನಂಪ್ರತಿ ಸಂಚರಿಸುವ ಎಕ್ಸ್‌ಪ್ರೆಸ್ (ನಂ.12134) ಫೆ.29 ರಿಂದ ಮಾಚ್‌ರ್‍ 3 ತನಕ ಮಂಗಳೂರು ಜಂಕ್ಷನ್‌ ಮತ್ತು ಸುರತ್ಕಲ್‌ ನಡುವಿನ ಸಂಚಾರ ರದ್ದುಪಡಿಸಲಾಗಿದ್ದು, ಸುರತ್ಕಲ್‌ ನಿಲ್ದಾಣದಿಂದ ನಿಗದಿತ ವೇಳಾಪಟ್ಟಿಯಂತೆ ಹೊರಡಲಿದೆ.

ಮಂಗಳೂರು ಸೆಂಟ್ರಲ್- ಲೋಕಮಾನ್ಯ ತಿಲಕ್‌ ಟರ್ಮಿನಸ್‌ ದಿನಂಪ್ರತಿ ಸಂಚರಿಸುವ ಮತ್ಸೃಗಂಧ ಎಕ್ಸ್‌ಪ್ರೆಸ್‌ (ನಂ.12620) ಮಂಗಳೂರು ಸೆಂಟ್ರಲ್‌ ಮತ್ತು ಸುರತ್ಕಲ್‌ ನಡುವಿನ ಸಂಚಾರ ಭಾಗಶಃ ರದ್ದುಪಡಿಸಲಾಗಿದ್ದು, ಸುರತ್ಕಲ್‌ನಿಂದ ನಿಗದಿತ ವೇಳಾಪಟ್ಟಿಯಂತೆ ಹೊರಡಲಿದೆ.

ಮಂಗಳೂರು-ಬೆಂಗಳೂರು ರಾತ್ರಿ ರೈಲು ಬುಕ್ಕಿಂಗ್‌ ರದ್ದು

ಮಡ್ಗಾಂವ್‌- ಮಂಗಳೂರು ಸೆಂಟ್ರಲ್- ಮಡ್ಗಾಂವ್‌ (ನಂ.70105/ 70106) ಡೆಮು ಪ್ಯಾಸೆಂಜರ್‌ ತೋಕೂರುನಲ್ಲಿ ಮಾ.3 ರಂದು ತಡೆಹಿಡಿಯಲ್ಪಡಲಿದ್ದು, ತೋಕೂರು ಮತ್ತು ಮಂಗಳೂರು ಸೆಂಟ್ರಲ್‌ ನಡುವೆ ಸಂಚಾರ ಸ್ಥಗಿತಗೊಳ್ಳಲಿದೆ. 70106 ನಂ. ರೈಲು ಮಂಗಳೂರು ಸೆಂಟ್ರಲ್‌ ಮತ್ತು ತೋಕೂರು ನಡುವಿನ ಸಂಚಾರ ರದ್ದುಗೊಳ್ಳಲಿದ್ದು, ತೋಕೂರಿನಿಂದ ನಿಗದಿತ ವೇಳಾಪಟ್ಟಿಯಂತೆ ಹೊರಡಲಿದೆ.