ಕೋಲಾರ(ಮಾ.21): ರಾಜ್ಯದಲ್ಲಿ ಕೊರೊನಾ ವೈರಸ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಅಂತರ್‌ ರಾಜ್ಯ ಸಂಪರ್ಕದ ಹಲವು ರೈಲುಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು ಅದರಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಬಂಗಾರಪೇಟೆ ಮೂಲಕ ಹಾದು ಹೋಗುವ ಡಬಲ್‌ ಡೆಕ್ಕರ್‌ ರೈಲು ಸಂಚಾರವನ್ನು ಶುಕ್ರವಾರದಿಂದ ರದ್ದು ಮಾಡಿದೆ. ಡಬಲ್‌ ಡೆಕ್ಕರ್‌ ರೈಲು ಸಂಪೂರ್ಣ ಹವಾನಿಯಂತ್ರಿತ ರೈಲಾಗಿವುದರಿಂದ ರದ್ದುಪಡಿಸಿದೆ.

ರಾಜ್ಯ ಸೇರಿದಂತೆ ದೇಶದಲ್ಲಿ ಕೊರೊನಾ ವೈರಸ್‌ ಸೋಂಕು ಹೆಚ್ಚಾಗುತ್ತಿದ್ದು ಜನರಲ್ಲಿ ಅದರ ಬಗ್ಗ ತಿಳಿವಳಿಕೆ ಮೂಡಿಸಲು ಜನ ಬೀಡಿದ ಪ್ರದೇಶಗಳಾದ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಎಲ್‌ ಇಡಿ ಪರದೇಗಳ ಮೂಲಕ ಅರಿವು ಮೂಡಿಸಲಾಯಿತು.

ಕೊರೋನಾ ಆತಂಕ: 100 ರೂಪಾಯಿಗೆ 5 ಕೋಳಿ, ನೂರಾರು ಕೋಳಿ ಮಾರಾಟ

ಕೋಲಾರ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಕೊರೊನಾ ವೈರಸ್‌ ಸೋಂಕು ಪತ್ತೆಯಾಗದಿದ್ದರೂ ಹಲವರ ಮೇಲೆ ನಿಗಾವಹಿಸಲಾಗಿದೆ. ಜನರಲ್ಲಿ ಅರಿವು ಮೂಡಿಸುವ ಮೂಲಕ ಸೋಂಕು ಹರಡದಂತೆ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸಲು ಶುಕ್ರವಾರ ಮಾಹಿತಿ ಮತ್ತು ಶಿಕ್ಷಣ ಸಂಪರ್ಕ ಇಲಾಖೆ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಂಟಿಯಾಗಿ ಪಟ್ಟಣದ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಪರದೆ ಮೇಲೆ ಕಿರುಚಿತ್ರದ ಮೂಲಕ ಜಾಗೃತಿ ಮೂಡಿಸಲಾಯಿತು.

ಸುಳ್ಳುಸುದ್ದಿ ಪ್ರಚಾರ

ಅಲ್ಲದೆ ಕೆಜಿಎಫ್‌ ಜೈನ್‌ ಕಾಲೇಜಿನ ವಿದ್ಯಾರ್ಥಿಗಳ ತಂಡ ಮುಂಬಯಿಗೆ ಪ್ರವಾಸಕ್ಕೆ ತೆರಳಿದ್ದು ಅವರೆಲ್ಲರೂ ಕಳೆದ ರಾತ್ರಿ ರೈಲಿನಲ್ಲಿ ಪಟ್ಟಣಕ್ಕೆ ಆಗಮಿಸಿದಾಗ ಅವರನ್ನೆಲ್ಲಾ ನಿಲ್ದಾಣದಲ್ಲೆ ತಪಾಸಣೆ ಮಾಡಿ, ಔಷಧ ಸಿಂಪಡಿಸಿ ಕಳುಹಿಸಲಾಯಿತು.

BSNLನಿಂದ 1 ತಿಂಗಳು ಉಚಿತ ಬ್ರಾಡ್ ಬ್ಯಾಂಡ್!

ಆದರೆ ಈ ವಿದ್ಯಾರ್ಥಿಗಳ ಪೈಕಿ ಮೂವರಲ್ಲಿ ಪಾಸಿಟ್ಯೂವ್‌ ಕಂಡು ಬಂದಿದ್ದು ಅವರನ್ನು ಕೂಡಲೇ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಸುಳ್ಳು ಸುದ್ದಿಯನ್ನು ವಾಟ್ಸ್‌ಆ್ಯಪ್‌ ಗ್ರೂಪ್‌ ಗಳಲ್ಲಿ ಹರಿದು ಬಿಟ್ಟಿದ್ದರಿಂದ ಮೊದಲೇ ಕೊರೊನಾ ವೈರಸ್‌ ಬಗ್ಗೆ ಆತಂಕದಲ್ಲಿದ್ದ ಸಾರ್ವಜನಿಕರಲ್ಲಿ ಮತ್ತಷ್ಟುಗಾಬರಿಯಾಗುವಂತೆ ಮಾಡಿತು.