ಕೋಲಾರ(ಮಾ.21): ತಾಲೂಕಿನ ಚೌಡದೇನಹಳ್ಳಿ ಗ್ರಾಮದ ಕೋಳಿ ಸಾಕಾಣಿಕೆದಾರರೊಬ್ಬರು ತಾವು ಸಾಕಿದ ಕೋಳಿಗಳನ್ನು ಸಕಾಲಕ್ಕೆ ಕೋಳಿ ಕಂಪನಿಯವರು ಖರೀದಿಸಲಿಲ್ಲ ಎಂದು ತಾವೇ ಕೋಳಿ ಒಂದಕ್ಕೆ 20 ರೂಗಳಂತೆ ಮಾರಾಟ ಮಾಡಿದ್ದಾರೆ.

ಕೊರೊನಾ ವೈರಸ್‌ ಹರಡುವ ಭೀತಿ ಹಿನ್ನೆಲೆಯಲ್ಲಿ ಕೋಳಿಗಳ ಮಾರಾಟವಾಗುತ್ತಿಲ್ಲ. ಕೋಳಿ ವ್ಯಾಪಾರ ಸ್ಥಗಿತಗೊಂಡಿರುವುದರಿಂದ ಕಂಪನಿಗಳು ಸಾಕಾಣಿಕೆ ಕೇಂದ್ರಗಳಿಂದ ತೆಗೆದುಕೊಂಡು ಹೋಗುತ್ತಿಲ್ಲ.

ದಿನಕ್ಕೆ 1000ಕ್ಕೂ ಹೆಚ್ಚು ಮಾಸ್ಕ್ ತಯಾರಿಸ್ತಿದ್ದಾರೆ KSRTC ನೌಕರರು..!

ನೂರು ರು.ಗೆ 5 ಕೋಳಿಗಳನ್ನು ಮಾರಾಟ ಮಾಡುತ್ತಿದ್ದನ್ನು ಕಂಡ ಸುತ್ತಮುತ್ತ ಗ್ರಾಮಸ್ಥರು ನೂರಾರು ಕೋಳಿಗಳನ್ನು ಖರೀದಿಸಿದರು. ಕೊರೋನಾ ವೈರಸ್‌ ಭೀತಿಯ ನಡುವೆಯೇ ಹಕ್ಕಿ ಜ್ವರವೂ ಹರಡುತ್ತಿರುವುದರಿಂದ ಕೋಳಿ ಬೆಲೆ ಪಾತಾಳಕ್ಕೆ ಕುಸಿದಿದೆ.