ಬೆಂಗಳೂರು(ಫೆ.21): ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದ ಸಮಾವೇಶ ಆಯೋಜನೆ ಹಿನ್ನೆಲೆಯಲ್ಲಿ ಅರಮನೆ ಮೈದಾನ ಕಡೆ ಸಾಗುವ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ.
ಕಾರ್ಯಕ್ರಮಕ್ಕೆ ಬರುವ ವಾಹನಗಳು ಹೀಗೆ ಸಾಗಬೇಕು

*ಮೈಸೂರು ಭಾಗ: ನಾಯಂಡನಹಳ್ಳಿಯಲ್ಲಿ ಎಡ ತಿರುವು ಪಡೆದು ಸುಮನಹಳ್ಳಿ, ತುಮಕೂರು ರಸ್ತೆ, ಗೊರಗುಂಟೆಪಾಳ್ಯ ಜಂಕ್ಷನ್‌ ಮೂಲಕ ಹೆಬ್ಬಾಳ, ಜಯಮಹಲ್‌ ಸಾಗಿ ಅರಮನೆ ಮೈದಾನಕ್ಕೆ ಬರಬೇಕು
*ತುಮಕೂರು ಕಡೆ: ಗೊರಗುಂಟೆಪಾಳ್ಯ ಜಂಕ್ಷನ್‌, ಬಿಇಎಲ್‌, ಹೆಬ್ಬಾಳ, ಜಯಮಹಲ್‌ ರಸ್ತೆ ಮೂಲಕ ಮೈದಾನ ತಲುಪಬೇಕು.

*ಕನಕಪುರ ಭಾಗ- ಬನಶಂಕರಿ ದೇವಾಲಯ ಬಸ್‌ ನಿಲ್ದಾಣದಲ್ಲಿ ಬಲ ತಿರುವು ಪಡೆದು ಜಯನಗರದ 4ನೇ ಹಂತ, ಸೌತ್‌ ಎಂಡ್‌ ವೃತ್ತ, ಮಿನರ್ವ ವೃತ್ತ, ಟೌನ್‌ಹಾಲ್‌, ಚಾಲುಕ್ಯ, ವಸಂತ ನಗರ ಅಂಡರ್‌ ಪಾಸ್‌, ಜಯಮಹಲ್‌ ರಸ್ತೆ ಮೂಲಕ ಮೈದಾನಕ್ಕೆ ಬರಬೇಕು.

*ಬನ್ನೇರುಘಟ್ಟ ಕಡೆ: ಡೈರಿ ವೃತ್ತದಲ್ಲಿ ಎಡ ತಿರುವು ಪಡೆದು ಲಾಲ್‌ ಬಾಗ್‌ ಮುಖ್ಯದ್ವಾರ, ಮಿನರ್ವ ವೃತ್ತ, ಟೌನ್‌ಹಾಲ್‌, ಚಾಲುಕ್ಯ, ವಸಂತ ನಗರ ಅಂಡರ್‌ ಪಾಸ್‌, ಜಯಮಹಲ್‌ ರಸ್ತೆ ಮೂಲಕ ಮೈದಾನಕ್ಕೆ ಬರಬೇಕು.

ಪಂಚಮಸಾಲಿ ಮಹಾ ಸಮಾವೇಶ! 10 ಲಕ್ಷ ಮಂದಿ ನಿರೀಕ್ಷೆ

*ಹೊಸೂರು ಕಡೆ: ಮಡಿವಾಳ ಚೆಕ್‌ ಪೋಸ್ಟ್‌ ಎಡ ತಿರುವು ಪಡೆದು ಡೈರಿ ವೃತ್ತ, ಟೌನ್‌ಹಾಲ್‌, ಚಾಲುಕ್ಯ, ವಸಂತ ನಗರ ಅಂಡರ್‌ ಪಾಸ್‌, ಜಯಮಹಲ್‌ ರಸ್ತೆ ಮೂಲಕ ಮೈದಾನಕ್ಕೆ ಬರಬೇಕು.

*ಹಳೇ ಮದ್ರಾಸ್‌ ರಸ್ತೆ: ಕೆ.ಆರ್‌.ಪುರ ತೂಗು ಸೇತುವೆ, ಹೆಣ್ಣೂರು ಜಂಕ್ಷನ್‌, ನಾಗವಾರ, ಹೆಬ್ಬಾಳ, ಜಯಮಹಲ್‌ ಮೂಲಕ ಮೈದಾನ ಸೇರುವುದು.

*ಬಳ್ಳಾರಿ ಕಡೆ: ಬಳ್ಳಾರಿ ರಸ್ತೆ, ದೇವನಹಳ್ಳಿ, ಚಿಕ್ಕಜಾಲ, ಹುಣಸಮಾರನಹಳ್ಳಿ, ಹೆಬ್ಬಾಳ, ಜಯಮಹಲ್‌ ಮೂಲಕ ಮೈದಾನ.

*ದೊಡ್ಡಬಳ್ಳಾಪುರ ಕಡೆ: ಯಲಹಂಕ ಬೈಪಾಸ್‌ ಜಂಕ್ಷನ್‌, ಬಳ್ಳಾರಿ ರಸ್ತೆ, ಹೆಬ್ಬಾಳ, ಜಯಮಹಲ್‌ ಮೂಲಕ ಮೈದಾನ.

ಕಾರು-ಬೈಕ್‌ಗಳಲ್ಲಿ ಬರುವವರು

ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಆಗಮಿಸುವವರು ರಮಣ ಮಹರ್ಷಿ ರಸ್ತೆ ತ್ರಿಪುರ ವಾಸಿನಿ ಆವರಣ ಗೇಟ್‌ ನಂ.2ರ ಹಾಗೂ ಜಯಮಹಲ್‌ ರಸ್ತೆ ಮೂಲಕ ಮೈದಾನ ಪ್ರವೇಶಿಸಬೇಕು. ಅನಂತರ ತ್ರಿಪುರ ವಾಸಿನಿ ಆವರಣದಲ್ಲಿ ವಾಹನ ನಿಲುಗಡೆ ಮಾಡಬೇಕು.

ವಾಹನ ನಿಲುಗಡೆ ನಿಷೇಧ ಪ್ರದೇಶಗಳು

ರಮಣ ಮಹರ್ಷಿ ರಸ್ತೆ, ಸರ್‌.ಸಿ.ವಿ.ರಾಮನ್‌, ಬಳ್ಳಾರಿ, ಹೆಬ್ಬಾಳ ಮೇಲ್ಸೇತುವೆ, ಜಯಮಹಲ್‌, ತರಳಬಾಳು, ಎಂ.ವಿ.ಜಯರಾಮನ್‌ , ಅರಮನೆ, ಅರಮನೆ ಕ್ರಾಸ್‌, ಪಿಆರ್‌ಟಿಸಿ ಜಂಕ್ಷನ್‌ನಿಂದ ವಾಟರ್‌ ಟ್ಯಾಂಕ್‌ ಜಂಕ್ಷನ್‌, ಟಿ.ಚೌಡಯ್ಯ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.

ಗಣ್ಯರ ವಾಹನಗಳು

ಗಣ್ಯರ ವಾಹನಗಳು ರಮಣ ಮಹರ್ಷಿ ರಸ್ತೆ ಮೂಲಕ ಕೃಷ್ಣ ವಿಹಾರ ಮೈದಾನದಲ್ಲಿ ನಿಲುಗಡೆ ಮಾಡಬೇಕು.

ಪರ್ಯಾಯ ರಸ್ತೆಗಳು:

ಕಾರ್ಯಕ್ರಮದ ವೇಳೆ ಅರಮನೆ ಮೈದಾನದ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗುವ ಕಾರಣ ಈ ರಸ್ತೆಗಳಿಗೆ ಪರ್ಯಾಯ ರಸ್ತೆಗಳಲ್ಲಿ ಸಾಗಬೇಕು ಎಂದು ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಡಾ. ಬಿ.ಆರ್‌.ರವಿಕಾಂತೇಗೌಡ ಮನವಿ ಮಾಡಿದ್ದಾರೆ.