ಕೊಡಗು: ಕರ್ತವ್ಯ ಲೋಪ, ಸಂಚಾರಿ ಪೊಲೀಸ್ ಪೇದೆ ಅಮಾನತು
ಸುಜಾತ ಅವರು ಕರ್ತವ್ಯದ ವೇಳೆ ಫೋನಿನಲ್ಲಿ ಮಾತನಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಕರ್ತವ್ಯ ಲೋಪ ಎಸಗಿರುವ ಆರೋಪ ಸುಜಾತ ಅವರು ಮೇಲಿದೆ. ಹೀಗಾಗಿ ಸುಜಾತ ಅವರನ್ನ ಅಮಾನತುಗೊಳಿಸಿ ಆದೇಶಿಸಿದ ಎಸ್‌ಪಿ ರಾಮರಾಜನ್.
ಕೊಡಗು(ಅ.22): ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಸಂಚಾರಿ ಪೊಲೀಸ್ ಸಿಬ್ಬಂದಿ ಅಮಾನತು ಮಾಡಿ ಕೊಡಗು ಎಸ್‌ಪಿ ರಾಮರಾಜನ್ ಅವರು ಆದೇಶ ಹೊರಡಿಸಿದ್ದಾರೆ. ಸುಜಾತ ಎಂಬುವರೇ ಅಮಾನತುಗೊಂಡ ಸಂಚಾರಿ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
ಸುಜಾತ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ(ಶನಿವಾರ) ಕರ್ತವ್ಯಕ್ಕೆ ನಿಯೋಜಿಸಿದ್ದ ಸ್ಥಳದಲ್ಲಿ ಸುಜಾತ ಅವರು ಇರಲಿಲ್ಲ ಎಂದು ಆರೋಪಿಸಲಾಗಿದೆ.
ಗಂಗಾವತಿ: ಜೆಜೆಎಂ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ, ಎಇಇ ಸತೀಶ್ ಸಸ್ಪೆಂಡ್
ಸುಜಾತ ಅವರು ಕರ್ತವ್ಯದ ವೇಳೆ ಫೋನಿನಲ್ಲಿ ಮಾತನಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಿಂದೆಯೂ ಹಲವು ಬಾರಿ ಕರ್ತವ್ಯ ಲೋಪ ಎಸಗಿರುವ ಆರೋಪ ಸುಜಾತ ಅವರು ಮೇಲಿದೆ. ಹೀಗಾಗಿ ಸುಜಾತ ಅವರನ್ನ ಅಮಾನತುಗೊಳಿಸಿ ಎಸ್‌ಪಿ ರಾಮರಾಜನ್ ಅವರು ಆದೇಶಿಸಿದ್ದಾರೆ.