ಬೆಳಗಾವಿ: ಬೈಕ್‌ ಸವಾರನಿಂದ ಟ್ರಾಫಿಕ್‌ ನಿರ್ವಹಣೆ, ಸಾರ್ವಜನಿಕರಿಂದ ಮೆಚ್ಚುಗೆ

ಹತ್ತರಗಿ ಐಟಿಐ ಕಾಲೇಜಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಸಾದ ಚೌಗುಲೆ ಎಂಬುವರು ಸಂಚಾರಿ ಪೊಲೀಸರಂತೆ ಗಂಟೆಗಟ್ಟಲೇ ನಡುರಸ್ತೆಯಲ್ಲಿ ನಿಂತು ವಾಹನಗಳನ್ನು ಸರಳ ರೀತಿಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. 
 

Traffic Management by Biker in Belagavi grg

ಬೆಳಗಾವಿ(ಜೂ.01): ನಗರದಲ್ಲಿ ವಾಹನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಇರುತ್ತಾರೆ. ಆದರೆ ಪೊಲೀಸ್‌ ನಿರ್ವಹಿಸಬೇಕಾದ ಕಾರ್ಯವನ್ನು ದ್ವಿಚಕ್ರ ವಾಹನ ಸವಾರ ಗಂಟೆಗಟ್ಟಲೆ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಹತ್ತರಗಿ ಐಟಿಐ ಕಾಲೇಜಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಸದಾಶಿವ ನಗರದ ಪ್ರಸಾದ ಚೌಗುಲೆ ಎಂಬುವರು ಸಂಚಾರಿ ಪೊಲೀಸರಂತೆ ಗಂಟೆಗಟ್ಟಲೇ ನಡುರಸ್ತೆಯಲ್ಲಿ ನಿಂತು ವಾಹನಗಳನ್ನು ಸರಳ ರೀತಿಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. 

ಅತ್ತೆ, ಸೊಸೆ ಇಬ್ಬರಿಗೂ ಗೃಹಲಕ್ಷ್ಮಿ ಯೋಜನೆ ಕೊಡುವಂತೆ ಒತ್ತಾಯ!

ನಗರದ ಕಪಿಲೇಶ್ವರ ಬ್ರಿಡ್ಜ್‌ ಹತ್ತಿರ ಶನಿಮಂದಿರದ ಬಳಿ. ಪ್ರಸಾದ ಚೌಗುಲೆ ಅವರು ಕಾರ್ಯಕ್ರಮಯೊಂದಕ್ಕೆ ತೆರಳುತ್ತಿದ್ದಾಗ ಅತೀ ಹೆಚ್ಚು ಸಂಚಾರ ದಟ್ಟನೆ ಆಗಿದೆ. ಸರತಿ ಸಾಲಿನಲ್ಲಿ ವಾಹನಗಳು ನಿಂತಿರುವುದನ್ನು ಗಮನಿಸಿದ ಪ್ರಸಾದ ಅವರು, ತಕ್ಷಣ 112ಗೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಪೊಲೀಸರು ಒಂದು ಗಂಟೆಯಾದರೂ ಬರದಿದ್ದ ಕಾರಣ ಪ್ರಸಾದ ಅವರೇ ಸಂಚಾರ ದಟ್ಟನೆ ನಿವಾರಿಸಿದರು. ಬಳಿಕ ಸ್ಥಳಕ್ಕೆ ಬಂದ ಸಂಚಾರಿ ಪೊಲೀಸರು ಪ್ರಸಾದನನ್ನು ಅಭಿನಂದಿಸಿದರು.

Latest Videos
Follow Us:
Download App:
  • android
  • ios