Asianet Suvarna News Asianet Suvarna News

Night Curfew in Karnataka: ಪ್ರವಾಸಿಗರಿಗೆ ನಿರಾಸೆ ಮೂಡಿಸಿದ ನಿಷೇಧಾಜ್ಞೆ: ಗೋವಾಕ್ಕೆ ಮುಗಿಬಿದ್ದ ಜನರು

*  ನಿಷೇಧಾಜ್ಞೆ, ವರ್ಷಾಚರಣೆ ಮಾಡಲಾರದೆ ಪ್ರವಾಸಿಗರಿಗೆ ನಿರಾಸೆ
*  ಗೋಕರ್ಣದಲ್ಲಿ ಪ್ರವಾಸಿಗರಿಗೆ ಪ್ರವೇಶ ನಿರಾಕರಣೆ
*  ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಳ
 

Tourists Let Down in Uttara Kannada Due to Night Curfew in Karnataka grg
Author
Bengaluru, First Published Jan 2, 2022, 8:46 AM IST

ಕಾರವಾರ(ಜ.02): ರಾತ್ರಿ ನಿಷೇಧಾಜ್ಞೆ(Night Curfew) ವಿಧಿಸಿದ ಹಿನ್ನೆಲೆಯಲ್ಲಿ ಕಡಲತೀರ, ಪ್ರವಾಸಿ ತಾಣಗಳಲ್ಲಿ ಹೊಸ ವರ್ಷದ ಹರ್ಷಾಚರಣೆ(New Year Celebration) ನಡೆಸಲಾರದೆ ಪ್ರವಾಸಿಗರು(Tourists) ನಿರಾಶರಾದರು. ರಾತ್ರಿ 8 ಗಂಟೆ ಆನಂತರ ಗೋಕರ್ಣಕ್ಕೆ(Gokarna) ಬಂದವರನ್ನು ಮರಳಿ ಕಳುಹಿಸಲಾಯಿತು.

ಹೊಸ ವರ್ಷದ ಆಚರಣೆಗಾಗಿ ಗೋಕರ್ಣ, ಮುರ್ಡೇಶ್ವರಗಳಲ್ಲಿ ತಿಂಗಳ ಹಿಂದೆಯೆ ವಿವಿಧೆಡೆಯ ಪ್ರವಾಸಿಗರು ರೂಂ ಕಾದಿರಿಸಿ, ಪ್ರವಾಸಿ ತಾಣಗಳಿಗೆ ಆಗಮಿಸಿಯೂ ಆಗಿತ್ತು. ಆದರೆ ಹೊಸ ವರ್ಷಕ್ಕೆ ಕೇವಲ ಎರಡು ದಿನ ಇರುವಾಗ ಡಿ. 31ರ ಸಂಜೆ 8 ಗಂಟೆಯಿಂದ ಜ. 1ರ ಬೆಳಗ್ಗೆ 5 ಗಂಟೆಯ ತನಕ ನಿಷೇಧಾಜ್ಞೆ ವಿಧಿಸಲಾಯಿತು. ಅದರಲ್ಲೂ ಕರಾವಳಿಯ ಕಡಲತೀರ, ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಲಾಗಿತ್ತು. ಇದರಿಂದ ಸಾವಿರಾರು ಜನರ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಗೋಕರ್ಣದ ಓಂ ಬೀಚ್‌, ಕುಡ್ಲೆ ಬೀಚ್‌, ಹಾಫ್‌ ಮೂನ್‌ ಬೀಚ್‌, ಮುಖ್ಯ ಕಡಲತೀರ, ಮುರ್ಡೇಶ್ವರ ಬೀಚ್‌, ಕಾಸರಕೋಡ ಬೀಚುಗಳು ಭಣಗುಟ್ಟಿದವು.

Shantharam Siddhi Photo: ಬಸ್ ನಿಲ್ದಾಣದಲ್ಲಿ ಕುಳಿತ ಫೋಟೋ ವೈರಲ್, ಶಾಂತರಾಮ ಸಿದ್ದಿ ಬೇಸರ

ಶುಕ್ರವಾರ ರಾತ್ರಿ 8 ಗಂಟೆಯಾಗುತ್ತಿದ್ದಂತೆ ಬೀಚುಗಳಿಗೆ ಆಗಮಿಸಿದ್ದ ಪ್ರವಾಸಿಗರು ಹಾಗೂ ಸ್ಥಳೀಯರನ್ನು ಪೊಲೀಸರು ವಾಪಸ್‌ ಕಳುಹಿಸಿದರು. ಹೊಸ ವರ್ಷದ ಸಿದ್ಧತೆ ಮಾಡಿಕೊಂಡವರು ನಿರಾಶರಾಗಿ ಹೋಟೆಲ್‌(Hotel), ರೆಸಾರ್ಟ್‌(Resort) ರೂಂಗಳಲ್ಲೇ ಇರುವಂತಾಯಿತು. ಬಹಿರಂಗವಾಗಿ ಹೊಸ ವರ್ಷಾಚರಣೆ ನಡೆಸಲಾರದ ಪ್ರವಾಸಿಗರು ತಮ್ಮ ತಮ್ಮ ಹೋಟೆಲ್‌, ರೆಸಾರ್ಟ್‌ಗಳಲ್ಲೇ ಸಂಭ್ರಮಪಟ್ಟರು.

ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಿದ ಪೊಲೀಸರು:

ಗೋಕರ್ಣದಲ್ಲಿ ರಾತ್ರಿ 8 ಗಂಟೆ ಹಾಗೂ ಆನಂತರ ಬಂದ ಪ್ರವಾಸಿಗರಿಗೆ ಗೋಕರ್ಣಕ್ಕೆ ಪ್ರವೇಶ ನೀಡದೆ ಮರಳಿ ಕಳುಹಿಸಲಾಯಿತು. ಗೋಕರ್ಣದಲ್ಲಿ ರೂಂ ಕಾಯ್ದಿರಿಸಿದವರನ್ನು ಹೊರತುಪಡಿಸಿ ಉಳಿದ 200ಕ್ಕೂ ಹೆಚ್ಚು ಜನರನ್ನು ವಾಪಸ್‌ ಕಳುಹಿಸಲಾಯಿತು. ಪೊಲೀಸರು(Police) ಹಾಗೂ ಪ್ರವಾಸಿಗರ ನಡುವೆ ಇದು ವಾಗ್ವಾದಕ್ಕೂ ಕಾರಣವಾಯಿತು. ಪ್ರವಾಸಿಗರು ಗುಂಪು ಗುಂಪಾಗಿ ಬಂದು ಕಡಲತೀರದಲ್ಲಿ ಮದ್ಯಸೇವಿಸಿ(Alcohol) ಅಲ್ಲಿಯೇ ಮಲಗುವುದರಿಂದ ಸಮಸ್ಯೆ ಉಂಟಾಗುತ್ತಿದೆ. ನಿಷೇಧಾಜ್ಞೆ ವಿಧಿಸಲಾಗಿದೆ. ಇದರಿಂದ ವಾಪಸ್‌ ಕಳುಹಿಸಲಾಯಿತು ಎಂಬ ಮಾತುಗಳು ಕೇಳಿಬಂತು.

ಮುರ್ಡೇಶ್ವರದಲ್ಲಿ ಶುಕ್ರವಾರ ರಾತ್ರಿ 8 ಗಂಟೆಗೆಲ್ಲ ಪ್ರವಾಸಿ ಚಟುವಟಿಕೆ ಸ್ಥಗಿತಗೊಂಡವು. ಪೊಲೀಸರು ಬೀಚುಗಳಲ್ಲಿ(Beach) ಇದ್ದವರನ್ನು ಮರಳಿ ಕಳುಹಿಸಿದರು. ಅಂಗಡಿ ಮಂಗಟ್ಟುಗಳನ್ನು ಸಹ ಬಂದ್‌ ಮಾಡಲಾಯಿತು. ಸಾವಿರಾರು ಜನರಿಂದ ತುಂಬಿ ತುಳುಕಬೇಕಿದ್ದ ಮುರ್ಡೇಶ್ವರದಲ್ಲಿ ಸದ್ದುಗದ್ದಲೇ ಇರಲಿಲ್ಲ.

Omicron Threat: ಕೊರೋನಾ ಆತಂಕದ ಮಧ್ಯೆ ಬೀಚ್‌, ಜಲಪಾತಗಳಲ್ಲಿ ಮುಗಿಬಿದ್ದ ಜನ

ಕಾಸರಕೋಡ ಬೀಚ್‌, ಕಾರವಾರದ ಟಾಗೋರ್‌ ಬೀಚ್‌ ಹಾಗೂ ಜಿಲ್ಲೆಯ ಇತರ ಪ್ರವಾಸಿ ತಾಣಗಳಲ್ಲೂ ಹೊಸ ವರ್ಷಾಚರಣೆಯ ಸಡಗರ ಕಂಡುಬರಲಿಲ್ಲ.

ಗೋವಾದತ್ತ ಪ್ರವಾಸಿಗರು:

ಉತ್ತರ ಕನ್ನಡದಲ್ಲಿ(Uttara Kannada) ನಿಷೇಧಾಜ್ಞೆ ವಿಧಿಸಿದ್ದರಿಂದ ಪ್ರವಾಸಿಗರು ಗೋವಾಕ್ಕೆ(Goa) ತೆರಳಿದರು. ಗೋವಾದಲ್ಲಿ ಯಾವುದೆ ನಿಷೇಧಾಜ್ಞೆ ಇಲ್ಲದೆ ಇರುವುದರಿಂದ ಹೊಸ ವರ್ಷಾಚರಣೆಗೆ ಜನತೆ ಗೋವಾಕ್ಕೆ ಮುಗಿಬಿದ್ದರು.

ದೇವಸ್ಥಾನಗಳಲ್ಲಿ ಭಕ್ತರ ಹೆಚ್ಚಳ

ಹೊಸ ವರ್ಷಾಚರಣೆಗಾಗಿ ಪ್ರವಾಸಿಗರು ಆಗಮಿಸಿದ್ದರಿಂದ ಗೋಕರ್ಣ ಹಾಗೂ ಮುರ್ಡೇಶ್ವರ(Murdeshwar) ದೇವಾಲಯಗಳಲ್ಲಿ(Temples) ಭಕ್ತರ(Devotees) ಸಂಖ್ಯೆ ಎಂದಿಗಿಂತ ಸ್ವಲ್ಪ ಹೆಚ್ಚಿತ್ತು. ಗೋಕರ್ಣ ಮಹಾಬಲೇಶ್ವರ ದೇವಾಲಯ ಹಾಗೂ ಮುರ್ಡೇಶ್ವರ ದೇವಾಲಯಗಳಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ದೇವರ ದರ್ಶನ ಪಡೆದರು. ಇಡಗುಂಜಿ ವಿನಾಯಕ ದೇವಾಲಯ, ಶಿರಸಿ ಮಾರಿಕಾಂಬೆ, ಉಳವಿ ಚೆನ್ನಬಸವೇಶ್ವರ ಮತ್ತಿತರ ದೇವಾಲಯಗಳಲ್ಲೂ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಿತ್ತು. ನಾಡಿನ ಬೇರೆ ಬೇರೆ ಕಡೆಗಳಿಂದ ಆಗಮಿಸಿದ ಪ್ರವಾಸಿಗರು ಶನಿವಾರ ದೇವಾಲಯಗಳಿಗೆ ಭೇಟಿ ನೀಡಿದರು.
 

Follow Us:
Download App:
  • android
  • ios