Asianet Suvarna News Asianet Suvarna News

Omicron Threat: ಕೊರೋನಾ ಆತಂಕದ ಮಧ್ಯೆ ಬೀಚ್‌, ಜಲಪಾತಗಳಲ್ಲಿ ಮುಗಿಬಿದ್ದ ಜನ

*  ಹೊಸ ವರ್ಷ, ಕ್ರಿಸ್‌ಮಸ್‌-ಉತ್ತರ ಕನ್ನಡದಲ್ಲಿ ಪ್ರವಾಸಿಗರ ಅಬ್ಬರ
*  ದೇಗುಲ, ಬೀಚ್‌, ಜಲಪಾತಗಳಲ್ಲಿ ಜನಸಂದಣಿ
*  ಆಟೋ, ಟ್ಯಾಕ್ಸಿಗೂ ಬೇಡಿಕೆ, ವ್ಯಾಪಾರ ಚುರುಕು
 

People Visit Tourist Places Amid the Corona Anxiety in Uttara Kannada grg
Author
Bengaluru, First Published Dec 27, 2021, 7:05 AM IST

ಕಾರವಾರ(ಡಿ.27): ಕ್ರಿಸ್‌ಮಸ್‌(Christmas) ಹಾಗೂ ಹೊಸ ವರ್ಷದ(New Year Celebration) ನಡುವೆ ವೀಕೆಂಡ್‌ ಸಹ ಬಂದಿರುವುದರಿಂದ ಉತ್ತರ ಕನ್ನಡ(Uttara Kannada) ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

ಕೋವಿಡ್‌​​​​- 19(Covid-19), ಒಮಿಕ್ರೋನ್‌(Omicron) ಆತಂಕದ ನಡುವೆಯೂ ಪ್ರವಾಸಿಗರು(Tourists) ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಹೋಟೆಲ್, ರೆಸಾರ್ಟ್‌, ಕಾಟೇಜ್‌ಗಳು ಭರ್ತಿಯಾಗಿವೆ. ಸಂಜೆಯಾಗುತ್ತಿದ್ದಂತೆ ಬೀಚುಗಳಲ್ಲಿ(Beach) ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿದ್ದಾರೆ. ಗೋಕರ್ಣದ ಓಂ ಬೀಚ್‌, ಕುಡ್ಲೆ ಬೀಚ್‌, ಹಾಫ್‌ಮೂನ್‌ ಬೀಚ್‌, ಮುಖ್ಯ ಕಡಲತೀರದಲ್ಲಿ ಪ್ರವಾಸಿಗರ ದಟ್ಟಣೆ ಹೆಚ್ಚಿದೆ. ಮುರ್ಡೇಶ್ವರ, ಕಾಸರಕೋಡ ಬೀಚ್‌ಗಳಲ್ಲೂ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.

Uttara Kannada: 'ಒಮಿಕ್ರೋನ್‌ ಸೋಂಕಿತ ದೇಶದಿಂದ ಆಗಮಿಸುವವರಿಗೆ ಮುದ್ರೆ'

ಸಾತೊಡ್ಡಿ, ಮಾಗೋಡ, ಉಂಚಳ್ಳಿ, ವಿಭೂತಿ ಫಾಲ್ಸ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಯಾಣ, ಸಿಂಥೇರಿ ರಾಕ್ಸ್‌, ಭೀಮನಗುಡ್ಡ, ಬನವಾಸಿ ಮತ್ತಿತರ ಪ್ರವಾಸಿ ತಾಣಗಳಲ್ಲೂ ಜನರು ಕಂಡುಬರುತ್ತಿದ್ದಾರೆ.
ಕೋವಿಡ್‌ ಮುಂಜಾಗರೂಕತಾ ಕ್ರಮವಾಗಿ ಸರ್ಕಾರಿ ಗುಂಪು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌ ಹಾಕಿದೆ. ಇದರಿಂದ ಹೊಸ ವರ್ಷದ ಹರ್ಷಾಚರಣೆ ರಂಗು ಕಳೆದುಕೊಂಡಿದೆ. ಆದರೆ ಪ್ರವಾಸಿಗರಿಗೆ ಕಡಿವಾಣ ಹಾಕಿಲ್ಲ. ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. ಈ ಕಾರಣಕ್ಕಾಗಿ ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಕೊರೋನಾದಿಂದ(Coronavirus) ನೆಲಕಚ್ಚಿದ್ದ ಪ್ರವಾಸೋದ್ಯಮ ಗರಿಗೆದರಿದೆ. ಪ್ರವಾಸಿ ತಾಣಗಳ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಚುರುಕುಗೊಂಡಿದೆ. ಆಟೋ, ಟ್ಯಾಕ್ಸಿಗಳಿಗೂ ಬೇಡಿಕೆ ಹೆಚ್ಚಿದೆ.

ಸುಸ​ಜ್ಜಿ​ತ​ವಾ​ಗಿಲ್ಲ ತಾಣ​ಗ​ಳು:

ಪ್ರವಾಸಿಗರೇನೋ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಆದರೆ ಲಾಕ್‌ಡೌನ್‌(Lockdown) ಅವಧಿಯಲ್ಲಿ ಮುಚ್ಚಲಾಗಿದ್ದ ಪ್ರವಾಸಿ ತಾಣಗಳು ಇನ್ನೂ ಸುಸಜ್ಜಿತವಾಗಿಲ್ಲ. ಕಾರವಾರದ ಯುದ್ಧ ನೌಕೆ ವಸ್ತು ಸಂಗ್ರಹಾಲಯದ ಸುತ್ತ 2 ವರ್ಷಗಳಿಂದ ಗಿಡಗಂಟಿಗಳು ಬೆಳೆದು ಕುರುಚಲು ಕಾಡು ನಿರ್ಮಾಣವಾಗಿದೆ. ಉದ್ಯಾನ ರಂಗು ಕಳೆದುಕೊಂಡಿದೆ. ರಾಕ್‌ ಗಾರ್ಡನ್‌ ಕೂ​ಡಾ ಸರಿಯಾದ ನಿರ್ವಾಹಣೆ ಇಲ್ಲದೆ ಅಂದ ಕಳೆದುಕೊಂಡಿದೆ. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಟ್ಟು, ವಿವಿಧ ಸೌಲಭ್ಯಗಳನ್ನು ಕಲ್ಪಿಸಬೇಕಾದ ಅಗತ್ಯತೆ ಇದೆ. ಇಲ್ಲದಿದ್ದಲ್ಲಿ ಪ್ರವಾಸಿಗರು ಹಿಡಿಶಾಪ ಹಾಕುತ್ತ ತೆರಳುವ ಪರಿಸ್ಥಿತಿ ಉಂಟಾಗಲಿದೆ.

ಕ್ರಿಸ್‌ಮಸ್‌ ಜತೆಗೆ ವೀಕೆಂಡ್‌ ಕೂಡ ಬಂದಿದೆ. ಹೊಸ ವರ್ಷ ಬೇರೆ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳ ವೀಕ್ಷಣೆಗೆ ಆಗಮಿಸಿದ್ದೇನೆ ಅಂತ ಪ್ರವಾಸಿಗ ಶಂಕರರಾವ್‌ ತಿಳಿಸಿದ್ದಾರೆ. 

ISIS ಭೀತಿ: ಮುರ್ಡೇಶ್ವರಕ್ಕೆ ಪ್ರವಾಸಿಗರ ಸಂಖ್ಯೆ ಕುಸಿತ

ಮತ್ತೆ ನಂದಿ ಬೆಟ್ಟ ಬಂದ್‌: ಹೊಸ ವರ್ಷಾಚರಣೆಗೆ ಬ್ರೇಕ್‌..!

ಚಿಕ್ಕಬಳ್ಳಾಪುರ: ಹೊಸ ವರ್ಷದ(New Year) ಮೊದಲ ದಿನದಂದು ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ(Nandi Hills) ಬಂದು ಮೋಜು, ಮಸ್ತಿಯಲ್ಲಿ ತೊಡಗಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮುಳಗಿ ತೇಲುತ್ತಿದ್ದ ಪ್ರವಾಸಿಗರಿಗೆ, ಯುವ ಪ್ರೇಮಿಗಳಿಗೆ ಜಿಲ್ಲಾಡಳಿತ ಬಿಗ್‌ ಶಾಕ್‌ ಕೊಟ್ಟಿದೆ.

ಸಾಮಾನ್ಯವಾಗಿ ಜಿಲ್ಲಾಡಳಿತ ವರ್ಷದ ಕೊನೆಯ ದಿನ ಅಂದರೆ 30 ಅಥವಾ 31ರ ಸಂಜೆ 3 ರಿಂದ ಹೊಸ ವರ್ಷದ ಮೊದಲ ಜನ ಅಂದರೆ ಜನವರಿ 1ರ ಬೆಳಗ್ಗೆ 6 ಗಂಟೆಯವರೆಗೂ ಮಾತ್ರ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸುತ್ತಿದ್ದ ಜಿಲ್ಲಾಡಳಿತ ಇದೀಗ ಕೊರೋನಾ(Coronavirus) ಮೂರನೇ ಅಲೆಯ ಒಮಿಕ್ರೋನ್‌(Omicron) ಆತಂಕದ ಹಿನ್ನಲೆಯಲ್ಲಿ ಜನವರಿ 1ರಂದು ಕೂಡ ಸಂಪೂರ್ಣ ಗಿರಿಧಾಮವನ್ನು ಬಂದ್‌ಗೊಳಿಸಲು ಜಿಲ್ಲಾಡಳಿತ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಆಗಾಗಿ ನಂದಿಗಿರಿಧಾಮದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಯೋಜನೆ ರೂಪಿಸಿಕೊಂಡಿದ್ದವರು, ಪ್ರವಾಸಕ್ಕೆ(Tour) ಬುಕ್ಕಿಂಗ್‌ ಮಾಡಿದವರು ತಮ್ಮ ಯೋಜನೆ ಬದಲಿಸಿಕೊಳ್ಳುವುದು ಅನಿರ್ವಾಯವಾಗಿದೆ.
 

Follow Us:
Download App:
  • android
  • ios