Asianet Suvarna News Asianet Suvarna News

ಕಾಡಾನೆಗಳ ಹಾವಳಿ: ಎತ್ತಿನ ಭುಜಕ್ಕೆ ಪ್ರವಾಸಿಗರ ನಿಷೇಧ

ಮಳೆ ಮಧ್ಯೆ ಚಿಕ್ಕಮಗಳೂರು ಪ್ರವಾಸಿ ತಾಣಗಳನ್ನ ಕಣ್ತುಂಬಿಕೊಳ್ಳುವುದೇ ಒಮದು ಮಜಾ ಇದೆ. ಈಗ ಬಿಟ್ಟುಬಿಡದೇ ಮಳೆಯಾಗುತ್ತಿದ್ದು ಪ್ರವಾಸಿಗರು ಚಿಕ್ಕಮಗಳೂರಿನತ್ತ ಹೊರಟ್ಟಿದ್ದಾರೆ. ಆದ್ರೆ, ಇದೀಗ ಚಿಕ್ಕಮಗಳೂರಿನ ಈ ಸ್ಥಳಕ್ಕೆ ಹೋಗಲು ಪ್ರವಾಸಿಗರಿಗೆ ನಿಷೇಧಿಸಿದೆ.

tourists banned To Chikmagalur  Ettina Bhuja Trekking rbj
Author
First Published Sep 11, 2022, 8:26 PM IST

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

 

ಚಿಕ್ಕಮಗಳೂರು, (ಸೆಪ್ಟೆಂಬರ್.11) : ಮಲೆನಾಡಿನ ಅನೇಕ ಪ್ರದೇಶಗಳಲ್ಲಿ ನಿರಂತರವಾಗಿ ಕಾಡಾನೆ ದಾಳಿ ನಡೆಸುತ್ತಿದ್ದು ಜನರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಎತ್ತಿನ ಭುಜ ವ್ಯಾಪ್ತಿಯಲ್ಲೂ ಆನೆಗಳು ಕಾಣಿಸಿಕೊಂಡಿರುವ ಹಿನ್ನೆಲೆ ಪ್ರಸಿದ್ಧ ಚಾರಣ ಸ್ಥಳವಾದ ಮೂಡಿಗೆರೆ ತಾಲ್ಲೂಕಿನ ಎತ್ತಿನ ಭುಜ ಚಾರಣಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ.

ಪ್ರವಾಸಿಗರಿಗೆ ಎತ್ತಿನ ಭುಜಕ್ಕೆ  ನಿಷೇಧ..
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಲಯದ ಚಾರಣಕ್ಕೆ ಹೆಸರುವಾಸಿಯಾದ ಸ್ಥಳವಾದ ಎತ್ತಿನ ಭುಜ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆಗಳು ಸಂಚರಿಸುತ್ತಿರುವುದರಿಂದ ಅರಣ್ಯ ಇಲಾಖೆಯ ಚಿಕ್ಕಮಗಳೂರು ಪ್ರಾದೇಶಿಕ ವಿಭಾಗ ಎತ್ತಿನ ಭುಜ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.ಕಾಡಾನೆಗಳು ಈ ಭಾಗದಲ್ಲಿ ಸಂಚಾರ ನಡೆಸುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಹಾಗೂ ಸ್ಥಳೀಯರ ಒತ್ತಾಯದ ಮೇರೆಗೆ ಮೇಲಧಿಕಾರಿಗಳ ನಿರ್ದೇಶನದಂತೆ ಎತ್ತಿನ ಮಜ ಚಾರಣವನ್ನು ಪ್ರವಾಸಿಗರಿಗೆ ತಾತ್ಕಾಲಿಕವಾಗಿ ಅರಣ್ಯ ಇಲಾಖೆ ನಿಷೇಧಿಸಿದೆ. 

Chikkamagaluru; ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕಾರ್ಮಿಕ ಕಾಡಾನೆ ದಾಳಿಗೆ ಬಲಿ

ನರಹಂತಕ ಕಾಡಾನೆ ಸೆರೆಗೆ ಪ್ಲಾನ್ 
ಕಳೆದ ಕೆಲವು ದಿನಗಳ ಹಿಂದಷ್ಟೇ ಮೂಡಿಗೆರೆಯಲ್ಲಿ ರಸ್ತೆ ಬದಿಯಲ್ಲೇ ದಾಳಿ ನಡೆಸಿದ ಕಾಡಾನೆಯು ಓರ್ವ ಕೃಷಿ ಕಾರ್ಮಿಕನನ್ನು ಕಾಲಿನಿಂದ ತುಳಿದು ಬಲಿ ಪಡೆದುಕೊಂಡಿತ್ತು. ಘಟನಾ ಸಂಬಂಧ ವ್ಯಾಪಕವಾದ ವಿರೋಧ ಸ್ಥಳೀಯರಿಂದ ವ್ಯಕ್ತವಾಗಿತ್ತು. ನಿರಂತರವಾಗಿ ನಡೆಯುತ್ತಿರುವ ಆನೆ ದಾಳಿಯನ್ನು ಖಂಡಿಸಿ ಮುಡಿಗೆರೆಯ ಅರಣ್ಯ ಇಲಾಖೆಯ ಮುಂದೆ ಸಾರ್ವಜನಿಕರು ಮೃತ ದೇಹವಿಟ್ಟು ಪ್ರತಿಭಟನೆ ನಡೆಸಿದ್ದರು.

ಪ್ರತಿಭಟನೆಯ ಕಾವು ತೀವುಗೊಂಡು ಸಿಟ್ಟಿಗೆದ್ದ ಕೆಲ ಪ್ರತಿಭಟನಾಕಾರರು ಡಿವೈಎಸ್ಪಿ ಕಾರು ಪಲ್ಟಿ ಹೊಡೆಸಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ಮುಖಾಂತರ ಪ್ರತಿಭಟನಾಕಾರರನ್ನು ಚದುರಿಸುವ ಕೆಲಸವನ್ನು ಮಾಡಿದರು. ಈಗಾಗಲೇ ಒಂದು ಕಾಡಾನೆ ಸೆರೆಗೆ ಸರ್ಕಾರ ಅನುಮತಿ ನೀಡಿದೆ. ನರಹಂತಕ ಕಾಡಾನೆ ಭೈರನ್ನ ಸೆರೆ ಹಿಡಿಯುಲು ಇಲಾಖೆ ಕಾರ್ಯತಂತ್ರ ರೂಪಿಸಿದೆ. ನರಹಂತಕ ಎರಡು ಕಾಡಾನೆಗಳು ಸಂಚರಿಸುವ ಸ್ಥಳದಾಗಿರುವ ಹಿನ್ನಲೆಯಲ್ಲಿ ಪ್ರವಾಸಿಗರಿಗೆ ತಾತ್ಕಲಿಕೆ ನಿಷೇಧ ಹೇರಿದ್ದು ಕಾಡಾನೆ ಸೆರೆಯ ನಂತರ ಪ್ರವಾಸಿಗರಿಗೆ ಅವಕಾಶ ನೀಡೋ ಸಾಧ್ಯತೆ ಹೆಚ್ಚಳವಾಗಿದೆ.

Follow Us:
Download App:
  • android
  • ios