Asianet Suvarna News Asianet Suvarna News

ಚಾರ್ಮಾಡಿ ಘಾಟಿಯ ಜಾರುವ ಬಂಡೆಗಳ ಮೇಲೆ ಪ್ರವಾಸಿಗರ ಹುಚ್ಚಾಟ

ಚಾರ್ಮಾಡಿ ಘಾಟ್ ಪ್ರವಾಸಿಗರ ಪಾಲಿನ ಸ್ವರ್ಗ,ಇಲ್ಲಿನ ಪ್ರಕೃತಿಯ ಸೌಂದರ್ಯ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಇಂತಹ ರುದ್ರ ರಮಣೀಯ ತಾಣದಲ್ಲಿ ಪ್ರವಾಸಿಗರು ನಡೆಸುವ ಹುಚ್ಚಾಟ ಇದೀಗ ಎಲ್ಲೆ ಮೀರಿದೆ. ಎಚ್ಚರಿಕೆಯ ನಾಮಪಲಕಗಳು ಇದ್ದರೂ ಕೂಡ ರಸ್ತೆ ಮಧ್ಯೆ ,ಅಪಾಯದ ಸ್ಥಳದಲ್ಲಿ  ಸೆಲ್ಫಿ ತೆಗೆದುಕೊಳ್ಳುತ್ತಿದ್ದು ಅಪಾಯಕ್ಕೆ ಆಹ್ವಾನ ಎನ್ನುವಂತಿದೆ.

tourist doing danger acts in charmadi ghat chikkamagaluru akb
Author
First Published Jun 27, 2022, 1:54 PM IST

ಚಿಕ್ಕಮಗಳೂರು : ಚಾರ್ಮಾಡಿ ಘಾಟ್ ಪ್ರವಾಸಿಗರ ಪಾಲಿನ ಸ್ವರ್ಗ,ಇಲ್ಲಿನ ಪ್ರಕೃತಿಯ ಸೌಂದರ್ಯ ಪದಗಳಲ್ಲಿ ವರ್ಣಿಸಲು ಅಸಾಧ್ಯ, ಮಂಜು ಮುಸುಕಿನ ಹಾದಿ, ಕ್ಷಣಕ್ಷಣಕ್ಕೂ ಪ್ರಕೃತಿಯಲ್ಲಿ  ಬದಲಾವಣೆ, ಒಮ್ಮೆ ಸೂರ್ಯನ ದರ್ಶನವಾದ್ರೆ ಅರೆ ಕ್ಷಣದಲ್ಲಿ ಮಳೆಯ ಸಿಂಚನ. ಇಂತಹ ರುದ್ರ ರಮಣೀಯ ತಾಣದಲ್ಲಿ ಪ್ರವಾಸಿಗರು ನಡೆಸುವ ಹುಚ್ಚಾಟ ಇದೀಗ ಎಲ್ಲೆ ಮೀರಿದೆ. ಎಚ್ಚರಿಕೆಯ ನಾಮಪಲಕಗಳು ಇದ್ದರೂ ಕೂಡ ರಸ್ತೆ ಮಧ್ಯೆ ,ಅಪಾಯದ ಸ್ಥಳದಲ್ಲಿ  ಸೆಲ್ಫಿ ತೆಗೆದುಕೊಳ್ಳುತ್ತಿದ್ದು ಅಪಾಯಕ್ಕೆ ಆಹ್ವಾನ ಎನ್ನುವಂತಿದೆ.

ಬಂಡೆಗಳ ಮೇಲೆ ನಿಂತು ಫೋಟೋ

ಪ್ರವಾಸಿಗರು ಜಾರು ಬಂಡೆಗಳ ಮೇಲೆ ಹತ್ತಿ ಹುಚ್ಚಾಟ ಮಾಡುತ್ತಾ, ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಾ, ಟಿಕ್‍ಟಾಕ್ ಮಾಡ್ತಿರೋ ಘಟನೆ  ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ (Mudigere) ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ನಡೆದಿದೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆಯುದ್ಧಕ್ಕೂ ಜಲಪಾತಗಳಿವೆ. ಅಲ್ಲಿನ ಕಲ್ಲು ಬಂಡೆಗಳ ಮೇಲೆ ನಿರಂತರವಾಗಿ ನೀರು ಬಿದ್ದು ಕಲ್ಲಿನ ಮೇಳೆ ಪಾಚಿ ಬೆಳೆದು ಸಿಕ್ಕಾಪಟ್ಟೆ ಜಾರುತ್ತೆ. ಅಲ್ಲಿಂದ ಬಿದ್ದರೆ ಕೈ-ಕಾಲು ಮುರಿದು ಹೋಗುವುದರಲ್ಲಿ ಅನುಮಾನವಿಲ್ಲ. ಆದರೆ, ಕೆಲ ಹುಚ್ಚು ಪ್ರವಾಸಿಗರು ಅಂತಹ ಜಾರುವ ಬಂಡೆಗಳ ಮೇಲೆ ಹತ್ತಿ ಮೋಜು-ಮಸ್ತಿ ಮಾಡ್ತಿದ್ದಾರೆ. ಈ ಹಿಂದೆ ಕೂಡ ಜಲಪಾತಗಳ ಮೇಲೆ ಹತ್ತಿ ಬಿದ್ದು ಕೈ-ಕಾಲು ಮುರಿದುಕೊಂಡು, ತಲೆ ಒಡೆದುಕೊಂಡವರಿದ್ದಾರೆ. ಕೆಲವರದ್ದು ಪ್ರಾಣವೂ ಹೋಗಿದೆ. ಆದರೂ, ಪ್ರವಾಸಿಗರು ಈ ಹುಚ್ಚಾಟ ಬಿಟ್ಟಿಲ್ಲ. 

Chikkamagaluru: ಚಾರ್ಮಾಡಿ ಘಾಟ್ ರಹಸ್ಯ: ಘಾಟ್ ಕಾಯುವ ತಾಯಿ ಗುಳಿಗಮ್ಮ!

ಚಾರ್ಮಾಡಿ ಘಾಟಿ ರಸ್ತೆ ಅತ್ಯಂತ ಕಿರಿದಾದ ರಸ್ತೆ. ಇಲ್ಲಿ ಎರಡು ವಾಹನಗಳು ಸಲೀಸಾಗಿ ಹೋಗುವುದೇ ಕಷ್ಟ. ಇಂತಹ ಕಿರಿದಾದ ರಸ್ತೆಯಲ್ಲಿ ಪ್ರವಾಸಿಗರು ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಡ್ಯಾನ್ಸ್ ಮಾಡುತ್ತಿದ್ದು ವಾಹನ ಸವಾರರು ತೀವ್ರ ಸಂಕಷ್ಟ ಪಡುವಂತಾಗಿದೆ. ಟ್ರಾಫಿಕ್ ಜಾಮ್ ಆಗಿದ್ದರೂ ಪ್ರವಾಸಿಗರು ಹುಚ್ಚಾಟ ಬಿಡುತ್ತಿಲ್ಲ. ಕೆಲವರಿಗೆ ರಸ್ತೆ ಮಧ್ಯೆ ಟಿಕ್‍ಟಾಕ್ (TikTok) ಮಾಡೋ ಶೋಕಿಯೂ ಇದೆ. ಹಾಗಾಗಿ, ಪ್ರವಾಸಿಗರೇ ಪ್ರವಾಸಿಗರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಪೊಲೀಸರು ಸೂಕ್ರ ಕ್ರಮಕೈಗೊಳ್ಳಬೇಕು. ಇಲ್ಲಿ ಆಗಾಗ್ಗೆ ಗಸ್ತು ತಿರುಗುತ್ತಾ, ಬಂಡೆಗಳ ಮೇಲೆ ಹತ್ತುವವರು, ರಸ್ತೆ ಮಧ್ಯೆ ಟ್ರಾಫಿಕ್ ಜಾಮ್ ಮಾಡುವವರ ವಿರುದ್ಧ ಸೂಕ್ರ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. 

ಚಾರ್ಮಾಡಿ ಘಾಟ್ ಕಾವಲಿಗೆ ನಿಂತಿರುವ ದೇವಿಯ ಪವಾಡ: ವಾಹನ ಸವಾರರಿಗೆ ಮಹಾತಾಯಿ ಶ್ರೀರಕ್ಷೆ!

ಪ್ರವಾಸಿಗರ ಹುಚ್ಚಾಟಕ್ಕೆ ಸ್ಥಳೀಯರ ಆಕ್ರೋಶ

ಮಳೆಗಾಲದಲ್ಲಿ ಈ ಭಾಗದಲ್ಲಿ ಯಥೇಚ್ಛವಾಗಿ ಧಾರಾಕಾರ ಮಳೆ (Heavy Rain) ಸುರಿಯುತ್ತೆ. ಬಂಡೆಗಳ ಮೇಲೆ ನಿಂತು ಒಂದೆರಡು ನಿಮಿಷ ಮೋಜಿ-ಮಸ್ತಿ ಮಾಡುವುದು ಸುಲಭ ಹಾಗೂ ಮಜಾ. ಆದರೆ, ಸ್ವಲ್ಪ ಯಾಮಾರಿ ಜಾರಿ ಬಿದ್ದರೆ ಸುಧಾರಿಸಿಕೊಳ್ಳಲು ತಿಂಗಳುಗಳೇ ಬೇಕಾಗಬಹುದು. ಈ ನಿಟ್ಟಿನಲ್ಲಿ ಪ್ರವಾಸಿಗರು ಕೂಡ ಯೋಚಿಸಬೇಕಿದೆ. ಚಾರ್ಮಾಡಿ ಘಾಟಿಯ ಕಿರಿದಾದ ರಸ್ತೆಗಳಲ್ಲಿ ಬೇಜಾವಾಬ್ದಾರಿ ಚಾಲನೆಗೂ, ಚಾಲಕನ (Driver) ನಿಯಂತ್ರಣ ತಪ್ಪೋ ಅಥವ ಯಾವುದೋ ಕಾರಣಕ್ಕೋ ಅಪಘಾತಗಳು (Accident) ಸಂಭವಿಸಿದಾಗ ಕೊಟ್ಟಿಗೆಹಾರದ (Kottigehara) ಜನ ಅಲ್ಲಿ ಇರುತ್ತಾರೆ. ಆಸ್ಪತ್ರೆಗೆ (Hospital)  ಸೇರಿಸಿದ್ದಾರೆ. ಜೀವ ಉಳಿಸಿದ್ದಾರೆ. ಪ್ರವಾಸಿಗರ ಹುಚ್ಚಾಟಕ್ಕೆ ಕೊಟ್ಟಿಗೆಹಾರದ ಜನ ಕೂಡ ಬೇಸತ್ತಿದ್ದಾರೆ. ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನ ಸವಿಯಿರಿ. ನಾವು ನೂರಾರು ಪ್ರಕರಣ ನೋಡಿದ್ದೇವೆ. ಹುಚ್ಚಾಟಕ್ಕೆ ಕೈಹಾಕಬೇಡಿ ಎಂದು ಸ್ಥಳಿಯರು (Locals) ಕೂಡ ಮನವಿ ಮಾಡಿದ್ದಾರೆ.

Follow Us:
Download App:
  • android
  • ios