ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್: ಸಾಲ ತೀರಿಸಲಾಗದೆ ಗ್ರಾಮ ತೊರೆದ 100ಕ್ಕೂ ಹೆಚ್ಚು ಕುಟುಂಬಗಳು
ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್ ಮೇರೆ ಮೀರಿದೆ. ಇವರ ಕಿರುಕುಳ ತಾಳಲಾರದೆ ಚಾಮರಾಜನಗರ ಜಿಲ್ಲೆಯ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ.
ವರದಿ: ಪುಟ್ಟರಾಜು.ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ (ಜ.10): ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ ಟಾರ್ಚರ್ ಮೇರೆ ಮೀರಿದೆ. ಇವರ ಕಿರುಕುಳ ತಾಳಲಾರದೆ ಚಾಮರಾಜನಗರ ಜಿಲ್ಲೆಯ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ. ಒಬ್ಬ ಬಾಲಕನಂತು ನಮ್ಮಮ್ಮನನ್ನು ಚಾಪೆ ಹಾಸಿ ಸಾಲ ಕಟ್ಟು ಅಂತಾರೆ ಸಾರ್ ಕೈ ಮುಗಿದು ಕೇಳ್ಕೊಳ್ತೀನಿ ನನ್ನ ಒಂದು ಕಿಡ್ನಿ ಮಾರೋಕ್ಕೆ ಪರ್ಮಿಷನ್ ಕೊಡ್ಸಿ ಸರ್ ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸಿ ಹೆಂಗೋ ಬದುಕೊಂಡು ಹೋಗ್ತೀವಿ ಅಂತಿದ್ದಾನೆ. ಹಾಗಿದ್ರೆ ನೀವೇ ಊಹಿಸಬಹುದು ಇವರ ಟಾರ್ಚರ್ ಯಾವ ರೀತಿ ಇದೆ ಅಂತ. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.
ಹೌದು ಕೆಲವು ಮೈಕ್ರೋಫೈನಾನ್ಸ್ ಕಂಪನಿಗಳು ಬಡ ಜನರ ರಕ್ತ ಹೀರುತ್ತಿವೆ. ಯಾವುದೇ ಭದ್ರತೆ ಇಲ್ಲದೆ ಕೇವಲ ಒಂದು ಆಧಾರ್ ಕಾರ್ಡ್ ಜೆರಾಕ್ಸ್ ಪಡೆದು ಸುಲಭವಾಗಿ ಸಾಲ ನೀಡುತ್ತಿವೆ. ಸುಲಭವಾಗಿ ಸಾಲ ಸಿಗುತ್ತೆ ಎಂಬ ಕಾರಣಕ್ಕೆ ಕೂಲಿಕಾರ್ಮಿಕರು, ಮಹಿಳೆಯರು ತಮ್ಮ ಇವರ ಸಾಲದ ಜಾಲಕ್ಕೆ ಬಿದ್ದು ದೈನಂದಿನ ವ್ಯವಹಾರಗಳಿಗೆ ಸಾಲ ಪಡೆಯುತ್ತಿದ್ದಾರೆ. ಬಡ್ಡಿಯೊಂದಿಗೆ ವಾರದ ಕಂತು ತಿಂಗಳ ಕಂತು ಹೀಗೆ ಸಾಲ ತೀರಿಸುತ್ತಾರೆ ಆದರೆ ಸಾಲ ಮರುಪಾವತಿ ಮಾಡುವುದು ಒಂದು ದಿನ ತಡವಾದರೂ ಹೊತ್ತಲ್ಲದ ಹೊತ್ತಿನಲ್ಲಿ ಕಿರುಕುಳ ನೀಡುತ್ತಿದ್ದಾರೆ ಬಡ್ಡಿ ಗೆ ಬಡ್ಡಿ ಸೇರಿಸಿ ಸಾಲ ಜಾಸ್ತಿಯಾಗಿ ಇವರ ಕಿರುಕುಳ ತಡೆಯಲಾರದೆ ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ.
ಚಾಮರಾಜನಗರದಲ್ಲಿ ಭಾರೀ ಕಳ್ಳತನ: ಮುಕ್ಕಾಲು ಕೆಜಿ ಚಿನ್ನ, 5.5 ಲಕ್ಷ ನಗದು, 15 ಕೆಜಿ ಬೆಳ್ಳಿ ದೋಚಿದ ಕಳ್ಳರು!
ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ತಲೆಮರೆಸಿಕೊಂಡಿವೆ ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆ ಕರೆದೊಯ್ದಿವೆ ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕಾಗುತ್ತಿದೆ. ಇನ್ನೂ ಈ ಖಾಸಗಿ ಮೈಕ್ರೋಫೈನಾನ್ಸ್ ಕಂಪನಿಗಳ ಯಾವ ಪರಿ ಇದೆ ಅಂದರೆ ಬಾಯಿಗೆ ಬಂದಂತೆ ಬಯ್ತಾರಂತೆ ರಾತ್ರಿವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಬಯ್ತಾರಂತೆ ಅಶ್ಲೀಲವಾಗಿ ನಿಂದಿಸ್ತಾರಂತೆ. ಹಾಗಾಗಿ ಇಲ್ಲೊಬ್ಬ ಬಾಲಕ ನಿಮ್ಮ ಕೈ ಮುಗಿದು ಕೇಳಿಕೊಳ್ತಿನಿ ನನ್ನ ಕಿಡ್ನಿ ಮಾರೋಕೆ ಪರ್ಮಿಷನ್ ಕೊಡಿಸಿ ಸರ್ ..ಸರ್ಕಾರ ಪರ್ಮಿಷನ್ ಕೊಟ್ರೆ ನನ್ನ ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸ್ತೀನಿ ಮೈಕ್ರೋಫೈನಾನ್ಸ್ ನವರ ಕಾಟ ತಡೆಯೋಕೆ ಆಗ್ತಿಲ್ಲ ಅಂತ ಕಣ್ಣೀರು ಇಡುತ್ತಿದ್ದಾನೆ..
ಇನ್ನೂ ಈ ಬಗ್ಗೆ ಪ್ರತಿಕ್ರಿಯೊಸಿರೋ ಜಿಲ್ಲಾಧಿಕಾರಿ ಶಿಲ್ಪಾನಾಗ್ ಯಾರೂ ಊರು ಖಾಲಿ ಮಾಡಬೇಡಿ, ನಾವು ನಿಮ್ಮ ಜೊತೆ ಇದ್ದೇವೆಮ ಕಿರುಕುಳ ನೀಡಿದರೆ ಡಿ.ಸಿ. ಕಛೇರಿ, ಎ.ಸಿ. ಕಛೇರಿ, ತಹಸೀಲ್ದಾರ್ ಕಛೇರಿ ಅಥವಾ ಗ್ರಾಮ ಪಂಚಾಯ್ತಿ ಕಛೇರಿಗೆ ಮಾಹಿತಿ ನೀಡಿ ನಮ್ಮ ಗಮನಕ್ಕೆ ತನ್ನಿ ಸಮಸ್ಯೆ ಪರಿಹರಿಸ್ತೀವಿ ಎಂದು ಆಭಯ ನೀಡಿದ್ದಾರೆ. ಹೀಗಾಗಲೆ ನಾಲ್ಕು ಅಧಿಕಾರಿಗಳ ತಂಡ ರಚಿಸಲಾಗಿದ್ದು ಯಾವ ಹಣಕಾಸು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅವುಗಳಲ್ಲಿ ಅಧಿಕೃತ ಮತ್ತು ಅನಧಿಕೃತ ಸಂಸ್ಥೆಗಳು ಎಷ್ಟು, ಗ್ರಾಮ ತೊರೆದಿರುವ ಕುಟುಂಬಗಳು ಎಷ್ಟು ತಿಳಿದು ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ.
ಚಾಮರಾಜನಗರ: ಬಂಡೀಪುರ ಕಾಡಲ್ಲಿ 2912 ಕಿಮಿ ಫೈರ್ ಲೈನ್!
ಒಟ್ಟಾರೆ ಇದು ಚಾಮರಾಜನಗರ ಜಿಲ್ಲೆಯೊಂದರೆ ಕಥೆಯಲ್ಲ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಮೈಕ್ರೋಫೈನಾನ್ಸ್ ಕಂಪನಿಗಳು ಜನರಿಗೆ ಇನ್ನಿಲ್ಲದಂತೆ ಕಿತ್ತು ತಿನ್ನುತ್ತಿವೆ. ರಾಜ್ಯ ಸರ್ಕಾರದ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ ಈ ಕಿರುಹಣಕಾಸು ಸಂಸ್ಥೆಗಳ ಕಾರ್ಯನಿರ್ವಹಣೆಗೆ ಕಡಿವಾಣ ಹಾಕುವ ನೀತಿ ರೂಪಿಸಬೇಕಿದೆ.