ನಾಳೆ, ನಾಡಿದ್ದು ಸಿದ್ದಾಪುರದಲ್ಲಿ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

ನಾಮಧಾರಿ, ಬಿಲ್ಲವ, ಈಡಿಗ, ಸಮಾಜದ ಬೇಡಿಕೆಗಳಾದ ಈಡಿಗ ಸಮುದಾಯದ ಎಲ್ಲ ಉಪಪಂಗಡಗಳನ್ನು ಪರಿಶಿಷ್ಟವರ್ಗಕ್ಕೆ ಸೇರಿಸಬೇಕು ಇನ್ನಿತರ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಳೆ ನಾಡಿದ್ದು ದ್ದಾಪುರದಲ್ಲಿ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದಾರೆ. 

Tomorrow Pranavananda Swamiji Padayatra at Siddapur rav

ಸಿದ್ದಾಪುರ (ಜ.18) : ಬ್ರಹ್ಮಶ್ರೀ ನಾರಾಯಣ ಗುರುಶಕ್ತಿ ಪೀಠ ಕಲಬುರಗಿ ಜಿಲ್ಲೆಯ ಪೀಠಾಧೀಶ ಶ್ರೀ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಮಂಗಳೂರಿನಿಂದ ಬೆಂಗಳೂರು ವರೆಗೆ ನಡೆಯಲಿರುವ ಪಾದಯಾತ್ರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಜನವರಿ 18 ಮತ್ತು 19ರಂದು ನಡೆಯಲಿದೆ ಎಂದು ಸಿದ್ದಾಪುರ ತಾಲೂಕಿನ ಪಾದಯಾತ್ರೆ ಸಮಿತಿ ತಿಳಿಸಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕನ್ನೇಶ್ವರ ನಾಯ್ಕ ಮಾತನಾಡಿ, ಐತಿಹಾಸಿಕ ಪಾದಯಾತ್ರೆಯಲ್ಲಿ ನಾಮಧಾರಿ, ಬಿಲ್ಲವ, ಈಡಿಗ, ಸಮಾಜದ ಬೇಡಿಕೆಗಳಾದ ಈಡಿಗ ಸಮುದಾಯದ ಎಲ್ಲ ಉಪಪಂಗಡಗಳನ್ನು ಪರಿಶಿಷ್ಟವರ್ಗಕ್ಕೆ ಸೇರಿಸಬೇಕು. ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿ .500 ಕೋಟಿ ಮೀಸಲಿಡುವುದು, ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ನಡೆಯಲಿರುವ ಪಾದಯಾತ್ರೆ ಜನವರಿ 18ರ ಸಂಜೆ ತಾಲೂಕಿನ ಮನ್ಮನೆಗೆ ಬರಲಿದ್ದು, ಜನವರಿ 19ರಂದು ಕಾವಂಚೂರು, ಅಕ್ಕುಂಜಿ, ಸಿದ್ದಾಪುರ ಪಟ್ಟಣ, ಕೊಂಡ್ಲಿ ಜಾತ್ರೆ ಮೈದಾನದಲ್ಲಿ ಜಾಗೃತಿ ಸಭೆ ನಡೆಯಲಿದೆ. ಈ ಸಭೆಯ ಸಾನಿಧ್ಯವನ್ನು ಚಿತ್ತಾಪುರ ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ವಹಿಸಿದ್ದಾರೆ. ಸಿಗಂದೂರು ಧರ್ಮದರ್ಶಿ ರಾಮಪ್ಪ ಉದ್ಘಾಟಿಸಲಿದ್ದಾರೆ. ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕನ್ನೇಶ್ವರ ನಾಯ್ಕ ಅಧ್ಯಕ್ಷತೆ ವಹಿಸಿದ್ದಾರೆ.

ಬಿಲ್ಲವರ 3 ಬೇಡಿಕೆ ಈಡೇರಿಸಿದರೆ ಪಾದಯಾತ್ರೆ ವಾಪಸ್‌: ಪ್ರಣವಾನಂದ ಶ್ರೀ

ಗೌರವಾಧ್ಯಕ್ಷ ವೀರಭದ್ರ ನಾಯ್ಕ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜದ ಪ್ರಮುಖರಾದ ಭೀಮಣ್ಣ ನಾಯ್ಕ, ಕೆ.ಜಿ. ನಾಯ್ಕ ಹಣಜಿಬೈಲ…, ಆನಂದ ನಾಯ್ಕ ಹೊಸೂರ, ಹೊನ್ನಗೋಡ ರತ್ನಾಕರ, ಸಿ.ಎಫ್‌. ನಾಯ್ಕ, ರವೀಂದ್ರ ನಾಯ್ಕ, ಡಾ. ವೆಂಕಟೇಶ ನಾಯ್ಕ, ಕೆ.ಜಿ. ನಾಗರಾಜ, ವಿ.ಎನ್‌. ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮನ್ಮನೆ, ಉಲ್ಲಾಸ ನಾಯ್ಕ ಅಂಕೋಲಾ, ನಾಗರಾಜ ನಾಯ್ಕ ಬೇಡ್ಕಣಿ, ಎಂ.ಎಚ್‌. ನಾಯ್ಕ, ಈಶ್ವರ ನಾಯ್ಕ ಮನ್ಮನೆ, ಶ್ರೀ ಮತಿ ಚಂದ್ರಕಲಾ ನಾಯ್ಕ, ದಿವಾಕರ ನಾಯ್ಕ ಹೆಮ್ಮನಬೈಲ…, ರವಿಕುಮಾರ ನಾಯ್ಕ, ಸುಧೀರ ನಾಯ್ಕ ಕೊಂಡ್ಲಿ, ಬಿ.ಜಿ. ನಾಯ್ಕ ಹಲಗೇರಿ, ಎನ್‌.ಜಿ. ಕುಮಾರ, ಪಿ.ವಿ. ನಾಯ್ಕ ಬೇಡ್ಕಣಿ, ಹಿತೇಂದ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಕರಮನೆ, ಎಸ್‌.ಎಂ. ನಾಯ್ಕ, ಕೆ.ಆರ್‌. ವಿನಾಯಕ, ಮೋಹನ ನಾಯ್ಕ ಕೊಂಡ್ಲಿ, ಗೌರವ ಉಪಸ್ಥಿತಿಯಲ್ಲಿ ಸಮಾಜದ ಹಲವು ಪ್ರಮುಖ ಗಣ್ಯರು ಉಪಸ್ಥಿತರಿರುವರು.

 

ಸಮಾರಂಭದಲ್ಲಿ ಪುನಿತ್‌ ರಾಜಕುಮಾರ ಆಶ್ರಮಧಾಮದ ಮುಖ್ಯಸ್ಥರಾದ ನಾಗರಾಜ ನಾಯ್ಕ, ರಾಷ್ಟ್ರ ಪ್ರಶಸ್ತಿ ವಿಜೇತ ಈಶ್ವರ ನಾಯ್ಕ ಹಸವಂತೆ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಎಂ.ಬಿ. ನಾಯ್ಕ ಕಡಕೇರಿ, ಕಲಾವಿದೆ ಅರ್ಚನಾ ಸುರೇಶ ನಾಯ್ಕ ತೆಂಗಿನಮನೆ, ಕಲಾವಿದ ನಾಗರಾಜ ನಾಯ್ಕ ಬರಬರ, ರಂಗಭೂಮಿ ಸಂಗೀತ ನಿರ್ದೇಶಕ ಶ್ರೀಧರ ಮಾವಿನಗುಂಡಿ, ಸಂಗೀತ ಕಲಾವಿದ ಗಣಪತಿ ನಾಯ್ಕ ಕೊಂಡ್ಲಿ, ಪ್ರಗತಿಪರ ಕೃಷಿಕ ಹನುಮಂತ ಪರಶುರಾಮ ಕುಣಜಿ, ಯಕ್ಷಗಾನ ಕಲಾವಿದ ನಂದನ ನಾಯ್ಕ ಅಕಿಶಿನಗೋಡು ಅವರನ್ನು ಸನ್ಮಾನಿಸಲಾಗುವುದು.

ಜನವರಿ 20ರಂದು ಮುಂಜಾನೆ 8 ಗಂಟೆಗೆ ಹೊರಡುವ ಪಾದಯಾತ್ರೆ ಶಿರಳಗಿ ಮೂಲಕ ಸೊರಬ ತಾಲೂಕಿನ ಮೂಲಕ ಮುಂದುವರಿಯಲಿದೆ ಎಂದರು.

ಕೊಂಡ್ಲಿ ಐತಿಹಾಸಿಕ ಜಾತ್ರೆ ಮೈದಾನದಲ್ಲಿ ಸಂಜೆ ನಡೆಯುವ ಜಾಗೃತಿ ಸಮಾವೇಶಕ್ಕೆ ಹಾಗೂ ಮನ್ಮನೆ ಯಿಂದ ನಡೆಯುವ ಪಾದಯಾತ್ರೆಯಲ್ಲಿ ಡೊಳ್ಳು ಕುಣಿತ, ಮಹಿಳೆಯರ ಪೂರ್ಣಕುಂಭ ಮೇಳ ಹಾಗೂ ಇತರ ಸಾಂಸ್ಕೃತಿಕ ಕಲಾ ತಂಡಗಳು ಪಾದಯಾತ್ರೆ ಮೆರಗು ಹೆಚ್ಚಿಸಲಿವೆ. ಸಮಾಜ ಬಾಂಧÜವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು-ಮನ ಧನದಿಂದ ಸಹಕಾರ ನೀಡಬೇಕು ಎಂದು ಗೌರವಾಧ್ಯಕ್ಷ ವೀರಭದ್ರ ನಾಯ್ಕ ವಿನಂತಿ ಸಿದ್ದಾರೆ.

ಸ್ಥಾನಮಾನಕ್ಕಾಗಿ ಕೋಟ ಹಾಗೂ ಸುನೀಲ್ ಸಮುದಾಯವನ್ನು ಬಲಿ ಕೊಟ್ಟಿದ್ದಾರೆ: ಪ್ರಣವಾನಂದ ಸ್ವಾಮೀಜಿ

ಸುದ್ದಿಗೋಷ್ಠಿಯಲ್ಲಿ ಪಾದಯಾತ್ರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಾಯಕ ಕೊಂಡ್ಲಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕಾವಂಚೂರ, ಸಂಚಾಲಕ ರವಿ ಕುಮಾರ ಕೊಠಾರಿ, ಸಮಿತಿಯ ಗಾಂಧೀಜಿ ಆರ್‌. ನಾಯ್ಕ, ಅನಿಲ್‌ ಕೊಠಾರಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios