ಕ್ಷೇತ್ರದಲ್ಲಿ .1,900 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಶುಕ್ರವಾರ (ಮಾ.17) ಆಗಮಿಸುತ್ತಿದ್ದು ನಗರದ ಪಟ್ಟಣಶೆಟ್ಟಿಲೇಔಟ್‌ನಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಹೊನ್ನಾಳಿ (ಮಾ.17) : ಕ್ಷೇತ್ರದಲ್ಲಿ .1,900 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಶುಕ್ರವಾರ (ಮಾ.17) ಆಗಮಿಸುತ್ತಿದ್ದು ನಗರದ ಪಟ್ಟಣಶೆಟ್ಟಿಲೇಔಟ್‌ನಲ್ಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಅಧಿಕಾರಿಗಳ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನ ಎಲ್ಲಾ ಇಲಾಖೆಗಳ ವ್ಯಾಪ್ತಿಯ ಕಾಮಗಾರಿಗಳ ವಿವರ ನಾಮಫಲಕಗಳಲ್ಲಿ ನಮೂದಿಸಬೇಕು, ವರದಿಯನ್ನು ಉಪವಿಭಾಗಾಧಿಕಾರಿಗಳಿಗೆ ಕೊಟ್ಟು ಅನುಮೋದನೆ ಪಡೆಯಬೇಕು. ಎಲ್ಲಾ ಇಲಾಖೆಗಳ ಅರ್ಹ ಫಲಾನುಭವಿಗಳು ಸಮಾರಂಭದಲ್ಲಿ ಉಪಸ್ಥಿತಿಯಲ್ಲಿರಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

Vijayasankalpa yatre: ‘ಕೈ’ಯಿಂದ ಸೋಲೋ ಗ್ಯಾರಂಟಿ ಕಾರ್ಡ್‌ ಹಂಚಿಕೆ: ಡಿವಿ ಸದಾನಂದಗೌಡ

40ಸಾವಿರ ಮಂದಿ ನಿರೀಕ್ಷೆ:

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ(MP Renukacharya) ಮಾತನಾಡಿ, ಶುಕ್ರವಾರ ಮಧ್ಯಾಹ್ನ ಪಟ್ಟಣದ ಖಾಸಗಿ ಬಸ್‌ನಿಲ್ದಾಣ ಸಮೀಪದಲ್ಲಿರುವ ಪಟ್ಟಣಶೆಟ್ಟಿಲೇಔಟ್‌ನಲ್ಲಿ .1,900 ಕೋಟಿ ರು.ವೆಚÜ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ದು ಈಗಾಗಲೇ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕಂದಾಯ ಸಚಿವ ಆರ್‌.ಅಶೋಕ್‌, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್‌, ಸಂಸದ ಜಿ.ಎಂ.ಸಿದ್ದೇಶ್ವರ ಸೇರಿ ಹಲವು ಸಚಿವರು ಸಮಾರಂಭಕ್ಕೆ ಆಗಮಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಸಾವಿರಾರು ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸವಲತ್ತುಗಳ ವಿತರಿಸಲಾಗುವುದು ಎಂದರು. ಅವಳಿ ತಾಲೂಕುಗಳಿಂದ ಸುಮಾರು 40 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ಉಪಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್‌ ತಿರುಪತಿ ಪಾಟೀಲ್‌, ನ್ಯಾಮತಿ ತಹಸೀಲ್ದಾರ್‌ ಮನೋಹರ್‌, ತಾ.ಪಂ. ಇಒ ರಾಮಾಭೋವಿ ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಸಿದ್ಧತೆ ಪರಿಶೀಲನೆ; ಸಂಜೆ ಮನರಂಜನೆ ಕಾರ್ಯಕ್ರಮ

ಹೊನ್ನಾಳಿ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಸಮೀಪದ ಖಾಸಗಿ ಲೇಔಟ್‌ನಲ್ಲಿ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಶಾಸಕ ರೇಣುಕಾಚಾರ್ಯ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ತಾಲೂಕು ಅಧಿಕಾರಿಗಳೊಂದಿಗೆ ಗುರುವಾರ ಪರಿಶೀಲನೆ ನಡೆಸಿದರು. ಖಾಸಗಿ ಲೇ ಔಟ್‌ನಲ್ಲಿ ಅದ್ಧೂರಿ ಪೆಂಡಾಲ್‌ ಹಾಕಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಸಹಸ್ರಾರು ಜನರಿಗೆ ಊಟದ ವ್ಯವಸ್ಥೆ. ಶುಕ್ರವಾರ ಸಂಜೆ 7ಗಂಟೆಗೆ ಬೆಂಗಳೂರಿನ ನಟರಾಜ್‌ ಎಂಟರ್‌ಟೈನರ್‌ರಿಂದ ಮನರಂಜನೆ ಕಾರ್ಯಕ್ರಮ, ಹೆಸರಾಂತ ಹಿನ್ನೆಲೆ ಗಾಯಕ ವಿಜಯಪ್ರಕಾಶ್‌ ಸಾರಥ್ಯದಲ್ಲಿ ಸಂಗೀತ ರಸಮಂಜರಿ, ಅನೇಕ ಹೆಸರಾಂತ ಗಾಯಕ -ಗಾಯಕಿಯವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದ ಯಡಿಯೂರಪ್ಪ ಪರಮಾಪ್ತ..!

ಮುಖ್ಯಮಂತ್ರಿಯವರ ಭೇಟಿ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್‌್ತ ವ್ಯವಸ್ಥೆ ಮಾಡಿದ್ದು, ಭದ್ರತೆಗಾಗಿ ಇಬ್ಬರು ಡಿವೈಎಸ್ಪಿ ಗಳು ಸೇರಿದಂತೆ ಸುಮಾರು 350 ಮಂದಿ ವಿವಿಧ ಹಂತದ ಪೊಲೀಸ್‌ ಸಿಬ್ಬಂದಿಯ ನಿಯೋಜಿಸಲಾಗಿದೆ. 2 ಕೆಎಸ್‌ಆರ್‌ಪಿ ಮತ್ತು 3 ಡಿಎಆರ್‌ ಪೊಲೀಸ್‌ ತುಕಡಿಗಳ ನಿಯೋಜಿಸಲಾಗಿದೆ.