Asianet Suvarna News Asianet Suvarna News

Raichur: TLBC ನೀರು ಮಾಫಿಯಾ, ರೈತರಿಗೆ ದ್ರೋಹ: ವೀರನ​ಗೌ​ಡ

ಮುನಿರಾಬಾದ್‌ನ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಮಾಫಿಯಾ ನಡೆಯುತ್ತಿದೆ. ಸರ್ಕಾರಗಳು, ಜನಪ್ರತಿನಿಧಿಗಳು, ನೀರಾವರಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಲವು ದಶಕಗಳಿಂದ ರೈತರಿಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡ ಹೇಳಿದರು.

TLBC water mafia Injustice to raichur farmers says veeranagowda rav
Author
First Published Nov 29, 2022, 11:34 PM IST

ರಾಯಚೂರು (ನ.29) : ಮುನಿರಾಬಾದ್‌ನ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಮಾಫಿಯಾ ನಡೆಯುತ್ತಿದೆ. ಸರ್ಕಾರಗಳು, ಜನಪ್ರತಿನಿಧಿಗಳು, ನೀರಾವರಿ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಲವು ದಶಕಗಳಿಂದ ರೈತರಿಗೆ ದ್ರೋಹ ಬಗೆಯುತ್ತಾ ಬರುತ್ತಿದ್ದು, ಇದರ ವಿರುದ್ಧ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡ ಎಚ್ಚರಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರೇಳು ದಶಕಗಳಿಂದ ತುಂಗಭದ್ರಾ ಜಲಾಶಯದಿಂದ ಟಿಎಲ್‌ಬಿಸಿಗೆ ನೀರು ಹರಿಸಲಾಗುತ್ತಿದ್ದು, ಕಾಲುವೆ ಕೆಳಭಾಗದ ವ್ಯಾಪ್ತಿಗೆ ಬರುವ ಸಿರವಾರ, ಮಾನ್ವಿ ಹಾಗೂ ರಾಯಚೂರು ತಾಲೂಕುಗಳ ರೈತರ ಜಮೀನುಗಳಿಗೆ ನೀರು ಹರಿಸುವುದೇ ಆಡಳಿತ ವರ್ಗಕ್ಕೆ ಸವಾಲಾಗಿ ಮಾರ್ಪಟ್ಟಿದೆ. ನೀರು ಹಂಚಿಕೆ, ಸಂಗ್ರಹ, ಹಳೆ ಪದ್ಧತಿಯಲ್ಲಿಯೇ ನೀರು ಹರಿಸುವ ಲೆಕ್ಕಾಚಾರ, ಪ್ರಭಾವಿಗಳ ಹಿಡಿತ, ತಪ್ಪು ಮಾಹಿತಿ ಸೇರಿದಂತೆ ವಿವಿಧ ವಿಷಯದಲ್ಲಿ ಮೋಸ ಮಾಡುತ್ತಾ ಬರಲಾಗುತ್ತಿದೆ. ಟಿಎಲ್‌ಬಿಸಿಗೆ 5000 ಕ್ಯುಸೆಕ್‌ ನೀರನ್ನು ಬಿಡಲಾಗುವುದು. ಅದರಲ್ಲಿ 2500 ಸಾವಿರ ಕ್ಯುಸೆಕ್‌ಗಿಂತಲೂ ಕಡಿಮೆ ಪ್ರಮಾಣದಲ್ಲಿ ನೀರನ್ನು ರಾಯಚೂರಿಗೆ ಹರಿಸುತ್ತಿದ್ದು, ವಡ್ರಟ್ಟಿವಿಭಾಗದಿಂದಲೆಯೇ ಕೆಳಭಾಗಕ್ಕೆ ಅನ್ಯಾಯವಾಗುತ್ತಿದೆ ಎಂದು ದೂರಿದರು.

ರಾಯಚೂರು ಗೌಸ್ ಪ್ರಕರಣ: ಇ​ನ್ನೊ​ಬ್ಬರು ಬೆದ​ರಿಕೆ ಹಾಕಿ​ದರೆ ಬೇಲ್‌ ರದ್ದತಿ ಇಲ್ಲ: ಹೈಕೋರ್ಟ್

ಹಲವು ದಶಕಗಳಿಂದ ನೀರು ಸರಬರಾಜಿನಲ್ಲಿ ನಿರಂತರ ದ್ರೋಹ, ನವಲಿ ಸಮೀಪ ಸಮನಾಂತರ ಜಲಾಶಯ ನಿರ್ಮಾಣದ ವಿಷಯದಲ್ಲಿಯೂ ವಿಳಂಬ ದೋರಣೆ ಮಾಡುತ್ತಿದ್ದು, ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಜನವರಿ ಎರಡನೇ ವಾರದ ಬಳಿಕ ರೈತರ ಬೃಹತ್‌ ಸಮಾವೇಶ, ಬೆಂಗಳೂರು ಚಲೋ ಹಾಗೂ ಕಾನೂನು ಹೋರಾಟವನ್ನು ಸಹ ರೂಪಿಸಲಾಗುತ್ತಿದೆ ಎಂದು ಹೇಳಿದರು.

ಅವೈಜ್ಞಾನಿಕ:

ನಾರಾಯಣಪುರ ಜಲಾಶಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದ ಐಐಸಿ ಸಭೆಯನ್ನು ತೆಗೆದುಕೊಂಡ ತೀರ್ಮಾನಗಳು ಅವೈಜ್ಞಾನಿಕತೆಯಿಂದ ಕೂಡಿವೆ. ತಕ್ಷಣದಿಂದಲೆಯೇ ನೀರು ಹರಿಸುವುದನ್ನು ನಿಲ್ಲಿಸಿದ್ದು, ಇದರಿಂದಾಗಿ ರೈತರು ಬೆಳೆದಿರುವ ಮೆಣಸಿನಕಾಯಿ, ಹತ್ತಿ, ತೋಟಗಾರಿಕೆ, ಕಾಯಿಪಲ್ಲೆ ಬೆಳೆಗಳಿಗೆ ನೀರಿಲ್ಲದಂತಾಗಿವೆ. ಕೂಡಲೇ ಕಾಲುವೆಗೆ ನೀರು ಹರಿಸಬೇಕು. ಇಲ್ಲವಾದಲ್ಲಿ ರೈತರು ಅನುಭವಿಸುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಅಕ್ರಮ ಬಿಲ್‌ ಆರೋಪದ ಕಾಮಗಾರಿಗಳ ಪರಿಶೀಲಿಸಿದ ಶಶಿಧರ್ ಕುರೇರ್

Follow Us:
Download App:
  • android
  • ios