ತಿಪಟೂರು (ಸೆ.18): ತಾಲೂಕಿನ ಕೆ. ಕರೀಕೆರೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಸೆ.30ರಂದು ಚುನಾವಣೆ ನಡೆಯಲಿದೆ. 

ಸೆ. 20ರಿಂದ 22 ರವರೆಗೆ ನಾಮಪತ್ರ ಹಾಕುವಿಕೆ, ಸೆ. 23ರಂದು ಪರಿಶೀಲನೆ, 24 ರಂದು ವಾಪಸ್ಸು ಪಡೆಯಲು ಅವಕಾಶವಿದ್ದು ಅವಶ್ಯಕತೆಯಿದ್ದರೆ ಸೆ. 30 ರಂದು ಚುನಾವಣೆ ನಡೆಯಲಿದೆ.

 7 ಸಾಮಾನ್ಯ ಸ್ಥಾನ, 2 ಮಹಿಳೆ ಮೀಸಲು, 2 ಹಿಂದುಳಿದ ವರ್ಗ ಎ ಮೀಸಲು, ಒಂದು ಪರಿಶಿಷ್ಟಜಾತಿ, ಒಂದು ಪರಿಶಿಷ್ಟಪಂಗಡದ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ರಿಟರ್ನಿಂಗ್‌ ಆಪೀಸರ್‌ ಪಿ. ಶಂಕರಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿರಾ ಬೈ ಎಲೆಕ್ಷನ್‌ಗೆ ಕಾಂಗ್ರೆಸ್ ರಣಕಹಳೆ: ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಉಸ್ತುವಾರಿ ನೇಮಕ

ಇನ್ನು ತುಮಕೂರಿನ ಶಿರಾ ಕ್ಷೇತ್ರದ ಅಭ್ಯರ್ಥಿ ನಿಧನದಿಂದ ಇಲ್ಲಿಯೂ ಶಿಘ್ರ ಚುನಾವಣೆ ನಡೆಯಲಿದ್ದು, ಎಲ್ಲಾ ಪಕ್ಷಗಳು ಬಿರುಸಿನಿಂದ ತಯಾರಿ ನಡೆಸುತ್ತಿವೆ. ಎಲ್ಲಾ ಪಕ್ಷಗಳಲ್ಲಿಯೂ ಕೂಡ ಗೆಲುವಿಗಾಗಿ ಮಾಸ್ಟರ್ ತಂತ್ರಗಾರಿಕೆ ನಡೆಯುತ್ತಿದೆ. ಚುನಾವಣೆಗಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯೂ ಕೂಡ ಬಹುತೇಕ ಕೊನೆಯ ಹಂತಕ್ಕೆ ಬಂದಿದೆ.