ಟಿಪ್ಪು ಸುಲ್ತಾನ್ ನೈಜ ಇತಿಹಾಸ ತಿರುಚಿದ ಗಿರೀಶ್‌ ಕಾರ್ನಾಡ್‌ : ಅಡ್ಡಂಡ ಕಾರ್ಯಪ್ಪ ಆರೋಪ

ತುಮಕೂರಿನಲ್ಲಿ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ
ಮಾರ್ಚ್‌ 4ರಂದು ಸಂಜೆ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕ
ಟಿಪ್ಪು 4 ದೇವಾಲಯಕ್ಕೆ ದತ್ತಿ ನೀಡಿ 80 ದೇವಾಲಯ ಧ್ವಂಸ ಮಾಡಿದ
 

Tippu Sultan distorted real history Girish Karnad Addanda Karyappa allegation sat

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್ 

ತುಮಕೂರು (ಫೆ.22): ರಾಜ್ಯದಲ್ಲಿ ಮೈಸೂರು ಸಾಮ್ರಾಜ್ಯದ ಇತಿಹಾಸದಲ್ಲಿ ಉರಿಗೌಡ ಮತ್ತು ನಂಜೇಗೌಡ ಇತಿಹಾಸದ ವ್ಯಕ್ತಿಗಳೇ ಆಗಿದ್ದಾರೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ಗಿರೀಶ್ ಕಾರ್ನಾಡ್ ಅವರು ಉದ್ದೇಶಪೂರ್ವಕವಾಗಿಯೇ ಟಿಪ್ಪುವನ್ನ ಹೀರೋ ಮಾಡಿದ್ದಾರೆ. ನಮ್ಮ ಸಂಸ್ಕೃತಿಗೆ ಏಟು ಕೊಡುವುದೇ ಆಗಿನ ಎಡ ಪಂತೀಯ ಕಾಂಗ್ರೆಸ್ ಉದ್ದೇಶವಾಗಿತ್ತು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತುಮಕೂರಿನಲ್ಲಿ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಸಾಮ್ರಾಜ್ಯದ ಇತಿಹಾಸದಲ್ಲಿ ಉರಿಗೌಡ ಮತ್ತು ನಂಜೇಗೌಡ ಇತಿಹಾಸದ ವ್ಯಕ್ತಿಗಳೇ ಆಗಿದ್ದಾರೆ. ಅದಕ್ಕೆ ನನ್ನ ಬಳಿ ದಾಖಲೆಗಳಿವೆ. ಗಿರೀಶ್ ಕಾರ್ನಾಡ್ ಅವರು ಉದ್ದೇಶಪೂರ್ವಕವಾಗಿಯೇ ಟಿಪ್ಪುವನ್ನ ಹೀರೋ ಮಾಡಿದ್ದಾರೆ. ತುಘಲಕ್ ಅವನನ್ನ ನಮ್ಮ ಚರಿತ್ರೆ ಹುಚ್ಚು ದೊರೆ ಎಂದರೆ, ಕಾರ್ನಾಡ್ ಅವರು ಆದರ್ಶ ರಾಜ ಅಂತಾ ಹೇಳ್ತಾರೆ. ಔರಂಗಜೇಬ್ ಆದರ್ಶ ರಾಜ ಅಂತಾರೆ. ಈ ಮೂಲಕ ನಮ್ಮ ಸಂಸ್ಕೃತಿಗೆ ಏಟು ಕೊಡುವುದೇ ಆಗಿನ ಎಡ ಪಂತೀಯ ಕಾಂಗ್ರೆಸ್ ನ ಉದ್ದೇಶವಾಗಿತ್ತು ಎಂದು ಆರೋಪಿಸಿದರು.

ಕಮ್ಯೂನಿಸಂ ಸಿದ್ಧಾಂತದಿಂದ ದೇಶಕ್ಕೆ ದುಷ್ಪರಿಣಾಮ: ಅಡ್ಡಂಡ ಕಾರ್ಯಪ್ಪ

4 ದೇವಾಲಯಕ್ಕೆ ದತ್ತಿ- 80 ದೇವಾಲಯ ಧ್ವಂಸ: ಟಿಪ್ಪು ನಿಜ ಕನಸುಗಳು ನಾಟಕ ಬಿಜೆಪಿಯ ಕಥಾನಕ ಅಲ್ಲ. ಇದು ಟಿಪ್ಪು ಕಥಾನಕ, ‌ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಖಳನಾಯಕನನ್ನ ಖಳನಾಯಕನಾಗಿ ತೋರಿಸಬೇಕು.  ಟಿಪ್ಪು ನಾಲ್ಕು ದೇವಸ್ಥಾನಗಳಿಗೆ ದತ್ತಿ ಕೊಟ್ಟು, 80 ದೇವಸ್ಥಾನಗಳನ್ನ ಒಡೆದುಹಾಕಿದ. ಹೀಗಾಗಿ 80 ದೇವಸ್ಥಾನಗಳನ್ನ ಒಡೆದಿದ್ದನ್ನು ಹೇಳಬೇಕಾಗುತ್ತದೆ. ಸಾವಿರಾರು ಜನರನ್ನ ಕೊಂದಿದ್ದನ್ನೂ, ಮತಾಂತರ ಮಾಡಿದ್ದನ್ನೂ ಹೇಳಬೇಕಾಗುತ್ತದೆ. ಆ ಸಮುದಾಯದ ಕೆಲವರ ಮನಸ್ಥಿತಿಯೇ ಹಾಗಿದೆ. ‌ಅವರು ಶಿಶುನಾಳ ಷರೀಫರನ್ನ ಗೌರವಿಸಲಾರರು. ಅವರು ಮತಾಂಧ ಟಿಪ್ಪುವನ್ನೇ ಗೌರವಿಸ್ತಾರೆ. ಯಾಕಂದ್ರೆ ಹಿಂದುಸ್ತಾನವನ್ನ ಇಸ್ಲಾಂ ರಾಷ್ಟ್ರ ಮಾಡಲು ಹೊರಟವರೇ ಅವರಿಗೆ ಪ್ರೀತಿ ಪಾತ್ರರು. ಭಾವೈಕ್ಯತೆಯನ್ನ ಸಾರಿದ ಶಿಶುನಾಳ ಶರೀಪರು, ಅಬ್ದುಲ್ ಕಲಾಂ ಅವರಿಗೆ ಪ್ರೀತಿ ಪಾತ್ರರಲ್ಲ ಎಂದರು.

ಮಾ.4ರಂದು ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ: ತುಮನಾಟಕ ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಅಡ್ಡಂಡ ಮನವಿ ಮಾಡಿದರು.‌ ಪ್ರತಿ ಟಿಕೆಟ್ ಗೆ 100ರೂ ನಿಗದಿ ಮಾಡಲಾಗಿದೆ. ಈ ಹಿಂದೆ ನಾಟಕ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಹಾಕಿದವರು ಓಡಿ ಹೋದರು. ಸೂಕ್ತ ದಾಖಲೆ ಒದಗಿಸಲಾದ ಬಳಿಕ ಪಲಾಯನ ಮಾಡಿದರು. ಹಿಂದಿನ ಸರ್ಕಾರಗಳು ಟಿಪ್ಪುವನ್ನು ಹೀರೋ ಎಂದು ಬಿಂಬಿಸಿವೆ. ಆದರೆ  ಟಿಪ್ಪು ನಿಜವಾದ ಖಳನಾಯಕ. ಆತನ ನಿಜ ಕನಸುಗಳನ್ನು ನಾಟಕದಲ್ಲಿ ಅನಾವರಣ ಮಾಡಲಾಗಿದೆ.  ಸತ್ಯದ ಅನಾವರಣವೇ ಈ ನಾಟಕದ ಉದ್ದೇಶ. ಸಾಕಷ್ಟು ಚರ್ಚೆ ಹುಟ್ಟು ಹಾಕಿರುವ ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ಮಾರ್ಚ್ 2ನೇ ತಾರೀಕು ಸಂಜೆ 6 ಗಂಟೆಗೆ ತುಮಕೂರಿನಲ್ಲಿ ನಾಟಕ ಪ್ರದರ್ಶ‌ನವಾಗಲಿದೆ. ನಗರದ ಗುಬ್ಬಿ ವೀರಣ್ಣ ರಂಗಮಂದಿರಲ್ಲಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.

ಪುಸ್ತಕ ಮಾರಾಟಕ್ಕೂ ಅನುಮತಿ ಸಿಕ್ಕಿದೆ: ಟಿಪ್ಪು ನಿಜ ಕನಸುಗಳು ಪುಸ್ತಕ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸುಮಾರು 12 ಆವ್ರತ್ತಿಗಳು ಮುದ್ರಣ ಆಗಿದೆ.  40 ಸಾವಿರ ಪ್ರತಿಗಳು ಮಾರಾಟ ಆಗಿವೆ. ಇಷ್ಟು ಕಡಿಮೆ ಇಷ್ಟು ಪ್ರತಿಗಳು ಮಾರಾಟವಾಗಿರೋದು ಚಾರಿತ್ರಿಕ ದಾಖಲೆ. ಪೊಲೀಸರ ಸಲಹೆಯಂತೆ ಒಳಾಂಗಣ ವೇದಿಕೆಯಲ್ಲಿ ಪ್ರದರ್ಶನ ಮಾಡಲಾಗ್ತಿದೆ. ನಾನು ಶಾಂತಿ ಪ್ರಿಯ. ಶಾಂತಿಯುತವಾಗಿ ಪ್ರದರ್ಶನ ಆಗಲಿ ಅನ್ನೋದೇ ನನ್ನ ಆಶಯ. ಇದರಿಂದ ಬಿಜೆಪಿಗೆ ಲಾಭ ಆಗುತ್ತದೆ ಅಥವಾ ಕಾಂಗ್ರೆಸ್ ಗೆ ನಷ್ಟ ಆಗುತ್ತದೆ ಎಂದು ಲೆಕ್ಕ ಹಾಕಿ ಕೂರುವ ವ್ಯಾಪಾರಿ ನಾನಲ್ಲ. ನಾನೊಬ್ಬ ರಂಗಭೂಮಿ ಕಲಾವಿದ. ನಾಟಕ ಮಾಡೋದಷ್ಟೇ ನನ್ನ ಕೆಲಸ ಎಂದು ಹೇಳಿದರು.

ಟಿಪ್ಪು ನಿಜ ಕನಸುಗಳು ಪುಸ್ತಕ ಮೇಲಿದ್ದ ತಡೆಯಾಜ್ಞೆ ತೆರವು, ಕೋರ್ಟ್‌ನಲ್ಲಿ ಕಾರ್ಯಪ್ಪಗೆ ಬೃಹತ್ ಗೆಲುವು!

ವಿಶ್ವನಾಥ್ ಹಳ್ಳಿ ಹಕ್ಕಿಯಲ್ಲ ಹಾರುವ ಹಕ್ಕಿ: ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಮನೆಯಲ್ಲಿ ಊಟ ಮಾಡುವ ಹಳ್ಳಿಹಕ್ಕಿಯಲ್ಲ ಅದು ಹಾರೋ ಹಕ್ಕಿ. ಆ ಹಾರೋಹಕ್ಕಿಗೆ ಒಂದು ರಾತ್ರಿ ಕನಸು ಬಿದ್ದಿದೆ. ನನ್ನ ಸ್ಥಾನಕ್ಕೆ ಅಡ್ಡಂಡ ಬರ್ತಾರೆ ಅಂತ. ಯಾವಾಗ ಆ ಕನಸು ಬಿತ್ತೋ ಮೈಸೂರು ಪತ್ರಕರ್ತರನ್ನ ಭೇಟಿಯಾದರು. ಅವರು ಕೋಗಿಲೆ ಇದ್ದಂತೆ, ಬೇರೆಯವರು ಕಟ್ಟಿದ ಗೂಡಲ್ಲಿ ಮೊಟ್ಟೆ ಇಡ್ತಾರೆ. ಅವರ ಎಂಎಲ್ಸಿ ಪೋಸ್ಟ್ ಅಲುಗಾಡುತ್ತಿದೆ ಎಂದು‌‌‌ ತುಮಕೂರಿನಲ್ಲಿ ಅಡ್ಡಂಡ ಕಾರ್ಯಪ್ಪ ತಿರುಗೇಟು  ನೀಡಿದರು.

Latest Videos
Follow Us:
Download App:
  • android
  • ios