ಯಾರು ಸಿಎಂ ಆಗುತ್ತಾರೆ ಎನ್ನುವುದನ್ನು ಸಮಯವೇ ನಿರ್ಧಾರ ಮಾಡುತ್ತದೆ ಕಾಂಗ್ರೆಸ್‌ನಲ್ಲಿ ಅತೀ ಹಿರಿಯ ನಾಯಕರಿದ್ದಾರೆ ಬಿಜೆಪಿಗೆ ಹೋದ 17 ಜನರೂ ನೆಮ್ಮದಿಯಾಗಿಲ್ಲ.  ಮನಸ್ಥಿತಿಗಳೂ  ಬದಲಾಗಿದೆ ಎಂದ ಕೈ ನಾಯಕ

ದಾವಣಗೆರೆ (ಜೂ.28): ಮುಂದಿನ ಮುಖ್ಯಮಂತ್ರಿ ಚರ್ಚೆ ಯಾರೋ ಒಬ್ಬರು ಹುಟ್ಟು ಹಾಕಿದ್ದು, ಅದು ಸರಿಯಲ್ಲ. ಇದು ಇಲ್ಲಿಗೇ ನಿಲ್ಲಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಬೆಂಬಲಿಗರು ಕೂಗಾಡುವುದೂ ಬೇಡ ಎಂದು ಮಾಜಿ ಸಚಿವ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಎಚ್‌.ಎಂ.ರೇವಣ್ಣ ಕಿವಿಮಾತು ಹೇಳಿದ್ದಾರೆ. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿ.ಕೆ.ಶಿವಕುಮಾರ್‌ ಅಥವಾ ಸಿದ್ದರಾಮಯ್ಯ ಇಬ್ಬರಲ್ಲಿ ಯಾರು ಸಿಎಂ ಆಗುತ್ತಾರೆ ಎನ್ನುವುದನ್ನು ಸಮಯವೇ ನಿರ್ಧಾರ ಮಾಡುತ್ತದೆ’ ಎಂದರು.

ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿದ್ದ ತನ್ವೀರ್ ಸೇಠ್​​​ಗೆ ಜಮೀರ್ ಬಿಗ್​ ಶಾಕ್ ...

ಕಾಂಗ್ರೆಸ್‌ನಲ್ಲಿ ಅತೀ ಹಿರಿಯ ನಾಯಕರಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯಂತಹ ಹಿರಿಯರಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ನಾವು ಚುನಾವಣೆಗೆ ಹೋಗೋಣ. ಯಾವುದೇ ಕಾರಣಕ್ಕೂ ಯಾರೇ ಆಗಿರಲಿ ಗೊಂದಲಗಳನ್ನು ಸೃಷ್ಟಿಸುವುದು ಬೇಡ ಎಂದು ಅವರು ತಿಳಿಸಿದರು.

‘ನೆಕ್ಸ್ಟ್‌ಸಿಎಂ’ ಎಂದು ಅಭಿಮಾನಿಗಳ ಜೈಕಾರ ...

ನೆಮ್ಮದಿಯಾಗಿಲ್ಲ : ಬಿಜೆಪಿಗೆ ಹೋದ 17 ಜನರೂ ನೆಮ್ಮದಿಯಾಗಿಲ್ಲ. ಆ ಎಲ್ಲರ ಮನಸ್ಥಿತಿಗಳೂ ಈಗ ಬದಲಾಗಿದೆ. ಆ ಎಲ್ಲರೂ ಕಾಂಗ್ರೆಸ್‌ಗೆ ಮರಳುವುದು, ಬಿಡುವುದರ ಬಗ್ಗೆ ಪಕ್ಷ ತೀರ್ಮಾನ ಕೈಗೊಳ್ಳುತ್ತದೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿ ಎಚ್‌.ಎಂ.ರೇವಣ್ಣ ಪ್ರತಿಕ್ರಿಯಿಸಿದರು.