Asianet Suvarna News Asianet Suvarna News

ಬಂಟ್ವಾಳ: ಪಿಲಿಗೊಬ್ಬು ಸ್ಪರ್ಧಾ‌ ಕಾರ್ಯಕ್ರಮದಲ್ಲಿ ಮಿಂಚಿದ ಏಷ್ಯಾನೆಟ್ ಸುವರ್ಣ ನ್ಯೂಸ್ ಹುಲಿ..!

ಸುವರ್ಣ ನ್ಯೂಸ್ ಒಂದು ರಾಷ್ಟ್ರೀಯವಾದ ಚಾನೆಲ್‌ ಹಾಗಾಗಿ ಹೆಮ್ಮೆಯಿಂದ ಬರೆಯಿಸಿಕೊಂಡಿದ್ದೇವೆ  ಎಂದು ಅಭಿಮಾನದಿಂದ ಹೇಳಿಕೊಂಡ ನಾಗರಾಜ್ 

Tiger Disguise in The Name of Asianet Suvarna News in Piligobbu Competition Program in Bantwal grg
Author
First Published Oct 5, 2022, 10:30 PM IST

ಮೌನೇಶ ವಿಶ್ವಕರ್ಮ

ಬಂಟ್ವಾಳ(ಅ.05): ಆ ವೇದಿಕೆಯಲ್ಲಿ ಹುಲಿಗಳ ಅಬ್ಬರ ಜೋರಾಗಿಯೇ ಇತ್ತು. ಎಲ್ಲದರ ನಡುವೆ ಒಂದು ಹುಲಿಯ ಆರ್ಭಟ ಜೋರಾಗಿದ್ದು, ಎಲ್ಲರ ದೃಷ್ಟಿಯೂ ಅದರತ್ತ ಹರಡಿತ್ತು. ಆ ಹುಲಿಯ ಮೈಮೇಲೆ "ಏಷ್ಯಾನೆಟ್ ಸುವರ್ಣ ನ್ಯೂಸ್" ಎಂದು ಲಾಂಛನ ಸಹಿತ ಬರೆಯಲಾಗಿತ್ತು. ಈ ದೃಶ್ಯ ಕಂಡು ಬಂದದ್ದು ಬಿರುವೆರ್ ಕುಡ್ಲ ಬಂಟ್ವಾಳ‌ ಘಟಕದ ಆಶ್ರಯದಲ್ಲಿ, ಭುವನೇಶ್ ಪಚ್ಚಿನಡ್ಕರವರ ನೇತೃತ್ವದಲ್ಲಿ ಬಿ.ಸಿ.ರೋಡಿನ‌ ಸ್ಪರ್ಶ‌ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಪಿಲಿಗೊಬ್ಬು ಸ್ಪರ್ಧಾ‌ ಕಾರ್ಯಕ್ರಮದಲ್ಲಿ.   

ಕಲ್ಲಡ್ಕದ ನಾಗಸುಜ್ಞಾನ ತಂಡ ನಾಗರಾಜ್‌ರವರ ನೇತೃತ್ವದಲ್ಲಿ ಸ್ಪರ್ಧಿಸಿದ್ದು, ಕಲ್ಲಡ್ಕದ ಹುಲಿಗಳು ಭಾರೀ ಸ್ಪರ್ಧೆಯನ್ನು ನೀಡಿತ್ತು. ವೇದಿಕೆಯಲ್ಲಿ ಸುಮಾರು 15 ಕ್ಕೂ ಮಿಕ್ಕಿ ಹುಲಿಗಳು ಕುಣಿಯುತ್ತಿದ್ದರೆ, ಒಂದು ಹುಲಿಯ ಮುಂಭಾಗದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಎಂದು ಬರೆಯಲಾಗಿತ್ತು. ಈ ಕುರಿತಾಗಿ ತಂಡದ ಮುಖ್ಯಸ್ಥ ನಾಗರಾಜ್ ಅವರಲ್ಲಿ ಪ್ರಶ್ನಿಸಿದಾಗ, ಸುವರ್ಣ ನ್ಯೂಸ್ ಒಂದು ರಾಷ್ಟ್ರೀಯವಾದ ಚಾನೆಲ್‌ ಹಾಗಾಗಿ ಹೆಮ್ಮೆಯಿಂದ ಬರೆಯಿಸಿಕೊಂಡಿದ್ದೇವೆ  ಎಂದು ಅಭಿಮಾನದಿಂದ ಹೇಳಿಕೊಂಡಿದ್ದಾರೆ. 

ಅತ್ಯಂತ ಮೋಸ, ಮರುತನಿಖೆಯಾಗಲಿ: ಪರೇಶ್ ಮೇಸ್ತಾ ಸಾವು, ಸಿಬಿಐ ವರದಿಗೆ ಮುತಾಲಿಕ್ ಕಿಡಿ

ಈ ಪಿಲಿಗೊಬ್ಬು ಸ್ಪರ್ಧೆಯನ್ನು ಬೆಳಿಗ್ಗೆ ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಅಪರಾಹ್ನ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅನೇಕ ಚಿತ್ರನಟರು, ಕಿರುತೆರೆ ನಟರು ಕಾರ್ಯಕ್ರಮದಲ್ಲಿ ‌ಭಾಗವಹಿಸಿ‌ ಮೆರುಗು ತಂದರು.
 

Follow Us:
Download App:
  • android
  • ios