ಮೈಸೂರು(ಜ.28): ಮೈಸೂರು, ಮಂಡ್ಯ ಭಾಗದಲ್ಲಿ ಚಿರತೆ, ಹುಲಿಗಳ ಹಾವಳಿ ಹೆಚ್ಚಿದ್ದು, ಇದೀಗ ಹುಣಸೂರಿನಲ್ಲಿ ಎರಡು ಹುಲಿಗಳು ಕದಾಡಿದ್ದು, ಒಂದು ಹೆಣ್ಣುಹುಲಿ ಮೃತಪಟ್ಟಿದೆ.

ಹುಣಸೂರು ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಹುಲಿಗಳ ನಡುವಿನ ಕಾದಾಟದಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಿದೆ. ಉದ್ಯಾನದ ನಾಗರಹೊಳೆ ಬೀಟ್‌ನ ಚಿಕ್ಕಪಾಲ ಬಳಿ ಘಟನೆ ನಡೆದಿದ್ದು, 6 ರಿಂದ 7 ವರ್ಷದ ಹೆಣ್ಣು ಹುಲಿ ಮೃತಪಟ್ಟಿದೆ. ಹುಲಿಯ ಕುತ್ತಿಗೆಯಲ್ಲಿ ಬಲವಾದ ಗಾಯಗಳಾಗಿದ್ದು, ಹುಲಿಗಳ ನಡುವೆ ಗಡಿಗಾಗಿ ಇನ್ನಿತರ ಕಾರಣಗಳಿಗೆ ಇಂತಹ ಕಾದಾಟ ನಡೆದಿರಬಹುದು ಎನ್ನಲಾಗಿದೆ.

Video: ಹುಲಿ ಯಾಮಾರಿಸಲು ಸತ್ತವನಂತೆ ನಾಟಕ, ಸಾವಿನ ದವಡೆಯಿಂದ ಪಾರಾದ!

ಘಟನೆ ಸಂಭವಿಸಿ ಮೂರು ದಿನಗಳಾಗಿದ್ದು, ಹುಲಿಯ ದೇಹ ಕೊಳೆಯುತ್ತಿದೆ. ಮಾ.17ರಂದು ವನ್ಯಜೀವಿ ಪಶುವೈದ್ಯರೊಂದಿಗೆ ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದೆಂದು ಸಿಎಫ್‌ ನಾರಾಯಣಸ್ವಾಮಿ ಮಾಹಿತಿ ನೀಡಿದರು.