Asianet Suvarna News Asianet Suvarna News

ಸಫಾರಿ ವಾಹನ ಎಳೆದಾಡಿದ ಹುಲಿ: ವಿಡಿಯೋ ವೈರಲ್‌

ಬನ್ನೇರುಘಟ್ಟ ಉದ್ಯಾನದಲ್ಲಿ ಘಟನೆ| ಹುಲಿ ರಂಜನ್‌ ಕೃತ್ಯ| ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌| ಇದೊಂದು ಹಳೆಯ ವಿಡಿಯೋ ವೈರಲ್‌ ಮಾಡಿದ ಪ್ರವಾಸಿಗರು| 

Tiger Attack on Safari vehicle in Bannerghatta Biological Park grg
Author
Bengaluru, First Published Jan 16, 2021, 8:11 AM IST

ಆನೇಕಲ್‌(ಜ.16): ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಫಾರಿ ಆವರಣದಲ್ಲಿ ಹುಲಿಯೊಂದು ಪ್ರವಾಸಿಗರನ್ನು ಕರೆದೊಯ್ದಿದ್ದ ವಾಹನವನ್ನು ಎಳೆದಾಡಿದ್ದ ವಿಡಿಯೋ ಈಗ ವೈರಲ್‌ ಆಗಿದೆ.

"

2020ರ ನವೆಂಬರ್‌ 22ರಂದು ಈ ದೃಶ್ಯವನ್ನು ಜೆಸ್ವಿನ್‌ ಹೆಸರಲ್ಲಿ ಯು ಟ್ಯೂಬ್‌ಗೆ ಅಪ್‌ಲೋಡ್‌ ಆಗಿದ್ದು, ಜನವರಿ ಮೊದಲ ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿತ್ತು. ಮತ್ತೆ ಈ ವಿಡಿಯೋ ಮಾಧ್ಯಮಗಳ ಮೂಲಕ ಪ್ರಚಾರ ಪಡೆಯುತ್ತಿದೆ. ಸಫಾರಿಯ ಹುಲಿ ಆವರಣದಲ್ಲಿ ಗಂಡು ಹುಲಿ ರಂಜನ್‌ ಹಲವಾರು ಬಾರಿ ಈ ರೀತಿ ವರ್ತಿಸುತ್ತಿದೆ.

ಡಿಯೋ ಸೆರೆಯಾದ ದಿನ ಸಫಾರಿ ವಾಹನ ಝೈಲೋ ಪ್ರವಾಸಿಗರನ್ನು ಕರೆದೊಯ್ದಿತ್ತು. ಆ ಸಮಯದಲ್ಲಿ ವಾಹನದ ಎಂಜಿನ್‌ ಆಫ್‌ ಆಗಿದ್ದು, ಮತ್ತೆ ಚಾಲು ಆಗಲಿಲ್ಲ. ಈ ವೇಳೆ ಹುಲಿ ರಂಜನ್‌ ವಾಹನ ಮುಂಭಾಗದ ಬಂಪರನ್ನು ಕಚ್ಚಿ ಎಳೆಯಲು ಯತ್ನಿಸಿದೆ. ವಾಹನದಲ್ಲಿದ್ದ ಪ್ರವಾಸಿಗರು ಈ ಅಪರೂಪದ ಘಟನೆಯನ್ನು ಸೆರೆ ಹಿಡಿದು ನ.22ರಂದು ಯೂ ಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

ಕಡ್ಡಿ ಬಳಸಿ ಕಿವಿ ಕೆರೆದುಕೊಂಡ ಆನೆ: ವಿಡಿಯೋ ವೈರಲ್‌

ಇದೇ ರೀತಿ ಸಿಂಹವೊಂದು ಸಫಾರಿ ವಾಹನದ ಚಕ್ರ ಕಚ್ಚಲು ಪ್ರಯತ್ನಿಸಿದ್ದ ಘಟನೆ ಹಾಗೂ ಕರಡಿ ಸಫಾರಿಯಲ್ಲಿ ವಾಹನದ ಕಿಟಕಿ ಹಿಡಿದು ನಿಂತಿರುವ ವಿಡಿಯೋ ಸಹ ಸೆರೆಯಾಗಿತ್ತು. ಇದೊಂದು ಸಹಜ ಕುತೂಹಲ ಮೂಡಿಸುವ ಸಂಗತಿ ಎಂದು ಹೆಸರು ತಿಳಿಸಲು ಇಚ್ಛಿಸದ ಅಧಿಕಾರಿ ಹೇಳಿದರು.

ಇದೆಲ್ಲ ಸಾಮಾನ್ಯ: ವನಶ್ರೀ

ವಿಡಿಯೋ ಕುರಿತು ಮಾತನಾಡಿದ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್‌ ಸಿಂಗ್‌, ಇದೊಂದು ಹಳೆಯ ವಿಡಿಯೋ. ಪ್ರವಾಸಿಗರು ಈಗ ವೈರಲ್‌ ಮಾಡಿದ್ದಾರೆ. ಸಫಾರಿ ವಾಹನದ ಬ್ಯಾಟರಿ ಸಮಸ್ಯೆ ಇದ್ದ ಕಾರಣ ನಮ್ಮ ರೆಸ್ಕ್ಯೂ ಟೀಮ್‌ ಕೂಡಲೆ ಹೋಗಿ ವಾಹನವನ್ನು ಅಲ್ಲಿಂದ ಸುರಕ್ಷಿತವಾಗಿ ಹೊರ ತಂದಿದೆ. ಸಫಾರಿಯಲ್ಲಿ ಇಂತಹ ಘಟನೆಗಳು ಸಾಮಾನ್ಯ. ಪ್ರವಾಸಿಗರು ಇದರಿಂದ ಚಲಿತರಾಗಬೇಕಿಲ್ಲ. ದಿನ ನಿತ್ಯ ಮಾಂಸ ಸಾಗಿಸುವ ವಾಹನ, ನಮ್ಮ ಸಿಬ್ಬಂದಿ ವಾಹನಗಳು ಬಂದಾಗ ಹುಲಿ, ಸಿಂಹ, ಚಿರತೆ ಹಾಗೂ ಹಣ್ಣು ತರಕಾರಿ ಬಂದಾಗ ಕರಡಿಗಳು ವಾಹನಗಳ ಸಮೀಪ ಬರುತ್ತವೆ ಎಂದು ಸ್ಪಷ್ಟನೆ ನೀಡಿದರು.
 

Follow Us:
Download App:
  • android
  • ios