ಬೈಲಕುಪ್ಪೆ (ಅ.02):  ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಟಿಬೆಟ್‌ ನಿರಾಶ್ರಿತರ ಶಿಬಿರದಲ್ಲಿ ಚೀನಾ ವಸ್ತುಗಳನ್ನು ಸುಟ್ಟುಹಾಕುವ ಮೂಲಕ ಬಹಿಷ್ಕರಿಸಲಾಯಿತು. ಈ ಮೂಲಕ ಭಾರತದ ಜತೆಗೆ ಕಾಲುಕೆರೆದು ಗಡಿತಂಟೆಯಲ್ಲಿ ತೊಡಗಿರುವ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಬೈಲಕುಪ್ಪೆಯ ಟಿಬೆಟ್‌ ಮಾರುಕಟ್ಟೆಪ್ರದೇಶದಲ್ಲಿ ನ್ಯಾಷನಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಟಿಬೆಟ್‌ ಸಂಘಟನೆ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಂಘಟನೆ ಮುಖಂಡ ಸೋನಂ ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಚೀನಾ ವಸ್ತುಗಳನ್ನು ದಹಿಸುವ ಮೂಲಕ ಹಾಗೂ ಆನ್‌ಲೈನ್‌ ಆಂದೋಲನದ ಮೂಲಕ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ನಮ್ಮ ವಿರೋಧವನ್ನು ದಾಖಲಿಸುತ್ತಿದ್ದೇವೆ ಎಂದು ತಿಳಿಸಿದರು.

ಲಡಾಖ್‌ಗೆ ಮಾನ್ಯತೆ ಇಲ್ಲ: ಗಡಿ ಸಂಘರ್ಷದ ಬಳಿಕ ಚೀನಾ ಉದ್ಧಟತನ! ...

ದೇಶದಲ್ಲಿ 5 ಪ್ರಮುಖ ಟಿಬೆಟ್‌ ಎನ್‌ಜಿಓಗಳು ಈ ಆಂದೋಲವನ್ನು ಚುರುಕುಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಚೀನಾದಲ್ಲಿ 2022ರಲ್ಲಿ ಒಲಿಂಪಿಕ್ಸ್‌ ನಡೆಸುವುದಕ್ಕೂ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಹೇಳಿದರು.