ಮಳೆಗಿಂತ ಸಿಡಿಲ ಆರ್ಭಟ ಜಾಸ್ತಿ| ಕಳೆದೆರಡು ದಿನಗಳಿಗೆ ಹೋಲಿಸಿದೆ ರಾಜ್ಯದಲ್ಲಿ ಇದೀಗ ಮಳೆಯಬ್ಬರ ಕಡಿಮೆ| ಗದಗ, ಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಲ್ಲಿ ಸಾಧಾರಣ ಮಳೆ|
ಹುಬ್ಬಳ್ಳಿ(ಏ.25): ರಾಜ್ಯದ ಐದು ಜಿಲ್ಲೆಗಳಲ್ಲಿ ಶನಿವಾರವೂ ಮಳೆ ಮುಂದುವರಿದಿದ್ದು, ಸಿಡಿಲು ಬಡಿದು ಗದಗದಲ್ಲಿ ಮೂವರು ಬಲಿಯಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಗದಗದ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಹೊರ ವಲಯದ ತೋಪಿನ ದುರಗಮ್ಮ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಹುಣಸೆ ಮರದ ಕೆಳಗೆ ಮಳೆಯಿಂದ ರಕ್ಷಣೆ ಪಡೆಯಲು ನಿಂತಿದ್ದ ಕಡಕೋಳ ಗ್ರಾಮದ ಕುಮಾರ ದೇವಕ್ಕ ಮಾದರ (25), ಶರಣಪ್ಪ ಮಾಲಿಂಗಪ್ಪ ಅಡವಿ (35), ಶಿರಹಟ್ಟಿ ಪಟ್ಟಣದ ಮಾರುತಿ ಗೋಶೆಲ್ಲೆನವರ (48) ಮೃತರು. ನಾಲ್ವರು ಗಾಯಗೊಂಡಿದ್ದು, ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಲ್ಕು ದಿನಗಳ ಕಾಲ ಮುನ್ಸೂಚನೆ : ಹವಾಮಾನ ಇಲಾಖೆ
ಕಳೆದೆರಡು ದಿನಗಳಿಗೆ ಹೋಲಿಸಿದೆ ರಾಜ್ಯದಲ್ಲಿ ಇದೀಗ ಮಳೆಯಬ್ಬರ ಕಡಿಮೆಯಾಗಿದ್ದರೂ ಸಿಡಿಲ ಆರ್ಭಟ ಜೋರಾಗಿಯೇ ಇದೆ. ಗದಗ, ಚಿಕ್ಕಬಳ್ಳಾಪುರ,ಕೋಲಾರ, ಬೆಂಗಳೂರು, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಲ್ಲಿ ಸಾಧಾರಣ ಮಳೆಯಾಗಿದೆ.
