ಗೆಳೆಯರಿಗೆ ವಿವಾಹ ಮಹೋತ್ಸವ ಆಮಂತ್ರಣ ಪತ್ರಿಕೆ ಕೊಡುವುದಕ್ಕಾಗಿ ತೆರಳುವ ವೇಳೆ ಅಪಘಾತ| ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದ ಘಟನೆ| ಈ ಸಂಬಂಧ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲು|
ಮಸ್ಕಿ(ಜ.20): ವಿವಾಹ ಆಮಂತ್ರಣ ಪತ್ರಿಕೆ ವಿತರಿಸಲು ವಾಹನದ ಮೇಲೆ ತೆರಳುತ್ತಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರಭಾಗದಲ್ಲಿ ಜರುಗಿದೆ. ತಾಲೂಕಿನ ಅಡವಿಬಾವಿ ಗ್ರಾಮದ ರಜೀಯಾ ಬೇಗಂ(23), ಅರುಣಾಕ್ಷಿ(22) ಹಾಗೂ ವೀರೇಶ(23) ಅಪಘಾತದಲ್ಲಿ ಮೃತಪಟ್ಟವರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಜೀಯಾ ಬೇಗಂ ಇದೇ ಜ. 24 ರಂದು ಮದುವೆ ನಿಶ್ಚಯಗೊಂಡಿದ್ದು, ಗೆಳೆಯರೆಲ್ಲರಿಗೂ ವಿವಾಹ ಮಹೋತ್ಸವ ಆಮಂತ್ರಣ ಪತ್ರಿಕೆಯನ್ನು ಕೊಡುವುದಕ್ಕಾಗಿ ಉಳಿದ ಸ್ನೇಹಿತರಾದ ಅರುಣಾಕ್ಷಿ, ವಿರೇಶ ಜೊತೆ ಬೈಕ್ ಮೇಲೆ ಹೋಗುತ್ತಿದ್ದರು.
ಲಾರಿ ಹರಿದು 15 ವಲಸೆ ಕಾರ್ಮಿಕರ ಸಾವು!
ಈ ಸಮಯದಲ್ಲಿ ಸವಾರ ವೀರೇಶ ವೇಗವಾಗಿ ಬೈಕ್‌ನ್ನು ಚಲಾಯಿಸಿ ಹೆದ್ದಾರಿ ಪಕ್ಕದಲ್ಲಿದ್ದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ತೀವ್ರವಾಗಿ ಗಾಯಗೊಂಡ ಮೂವರು ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
