* ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ನಡೆದ ಘಟನೆ* ಒಂದೇ ದಿನದ ಅಂತರದಲ್ಲೇ ಕೊರೋನಾದಿಂದ ಅಕ್ಕ-ತಮ್ಮ ಸಾವು * ಹೃದಯಾಘಾತದಿಂದ ತಂದೆ ಬೇರಿ ಸ್ಮಿತ್ ನಿಧನ
ಹೊಸಪೇಟೆ(ಜೂ.06): ಎಂಟು ದಿನಗಳ ಅಂತರದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಒಂದೇ ದಿನದ ಅಂತರದಲ್ಲೇ ಅಕ್ಕ-ತಮ್ಮ ಕೊರೋನಾದಿಂದ ಮೃತಪಟ್ಟಿದ್ದರು. ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿದ್ದ ತಂದೆ ಬೇರಿ ಸ್ಮಿತ್ (70) ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ.
ಒಂದೇ ದಿನದ ಅಂತರದಲ್ಲಿ ಕೊರೋನಾಗೆ ಅಕ್ಕ-ತಮ್ಮ ಬಲಿ
ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗಿದ್ದ ಕ್ಯಾರೋಲಿನ್ ಲೂಸಿಯಾ ಸ್ಮಿತ್ (45) ಹಾಗೂ ತಮ್ಮ ಸಾವಿಯೋ ಸ್ಮಿತ್(42) ಇಬ್ಬರೂ ಒಂದು ದಿನದ ಅಂತರದಲ್ಲಿ ಕೊರೋನಾದಿಂದ ಮೃತಪಟ್ಟಿದ್ದರು.
ಇದೀಗ ಇವರ ತಂದೆ ಸಹ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಡೀ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
