*  ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ತಾಲೂಕಿನ ಚಂದಗೋನಹಳ್ಳಿ-ನಾಟನಹಳ್ಳಿ ಬಳಿ ನಡೆದ ಘಟನೆ*  ಕಾಲುವೆಯಲ್ಲಿ ಈಜಲು ಇಳಿದಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದ ಯುವಕ*  ರವಿಯನ್ನು ರಕ್ಷಿಸಲು ಮುಂದಾದ ಇತರ ಮೂವರೂ ನೀರುಪಾಲು  

ಕೆ.ಆರ್‌.ಪೇಟೆ(ಆ.26): ಹೇಮಾವತಿ ನದಿಯ ಮಂದಗೆರೆ ಬಲದಂಡೆ ನಾಲೆಯಲ್ಲಿ ಈಜಲು ಹೋಗಿ ಕೊಚ್ಚಿಕೊಂಡು ಹೋಗುತ್ತಿದ್ದ ಗೆಳೆಯನನ್ನು ರಕ್ಷಿಸಲು ಹೋಗಿ ಮೂವರು ಗೆಳೆಯರು ಸೇರಿದಂತೆ ನಾಲ್ವರು ಯುವಕರು ಮೃತಪಟ್ಟಿರುವ ಘಟನೆ ತಾಲೂಕಿನ ಚಂದಗೋನಹಳ್ಳಿ-ನಾಟನಹಳ್ಳಿ ಬಳಿ ಮಂಗಳವಾರ ಸಂಜೆ ನಡೆದಿದೆ.

ಮೈಸೂರಿನ ಮೊಗರಹಳ್ಳಿ ಆಟೋ ಡ್ರೈವರ್‌ ರವಿ(27), ಕುಂಬಾರಕೊಪ್ಪಲಿನ ರಾಜು(24), ಲೋಕನಾಯಕ ನಗರದ ಮಂಜು(24) ಮತ್ತು ಚಂದ್ರು(24) ನೀರುಪಾಲಾದ ಯುವಕರು.

ಭಟ್ಕಳ: ಮುರ್ಡೇಶ್ವರದಲ್ಲಿ ಈಜಲಿಳಿದ ನಾಲ್ವರಲ್ಲಿ ಇಬ್ಬರು ನೀರುಪಾಲು

ತಾಲೂಕಿನ ಹೇಮಗಿರಿ ಬಳಿಯ ಚಂದಗೋನಹಳ್ಳಿ ಅಮ್ಮನವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಮೈಸೂರಿನಿಂದ 8 ಮಂದಿ ಯುವಕರು ಬಂದಿದ್ದರು. ಈ ವೇಳೆ ರವಿ ಕಾಲುವೆಯಲ್ಲಿ ಈಜಲು ಇಳಿದಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ರವಿಯನ್ನು ರಕ್ಷಿಸಲು ಮುಂದಾದ ಇತರ ಮೂವರೂ ನೀರುಪಾಲಾಗಿದ್ದಾರೆಎಂದು ಪೊಲೀಸರು ತಿಳಿಸಿದ್ದಾರೆ.