ತುಮಕೂರು: ಬೆಳ್ಳಂಬೆಳಗ್ಗೆ ಓಬಳಾಪುರ ಬಳಿ ಭೀಕರ ಅಪಘಾತ, ಸ್ಥಳದಲ್ಲೇ ಮೂವರ ದುರ್ಮರಣ

ಮೃತರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಗುಡ್ಡೆಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Three Killed due to Bike Tractor Accident in Tumakuru grg

ತುಮಕೂರು(ಜ.07):  ಟ್ರಾಕ್ಟರ್‌ಗೆ ದ್ವಿಚಕ್ರ ವಾಹನವೊಂದು ಡಿಕ್ಕಿ‌ ಹೊಡೆದ ಪರಿಣಾಮ ಮೂವರು ಬೈಕ್‌ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಓಬಳಾಪುರ ಬಳಿ ಇಂದು(ಮಂಗಳವಾರ) ಬೆಳಗ್ಗೆ ನಡೆದಿದೆ.  ಮೃತರನ್ನ ಮಹಮದ್ ಆಸೀಫ್(12), ಮಮ್ತಾಜ್(38) ಹಾಗೂ ಶಾಖೀರ್ ಹುಸೇನ್(48) ಎಂದು ಗುರುತಿಸಲಾಗಿದೆ. 

ಕೊರಟಗೆರೆ ರಸ್ತೆ ಓಬಳಾಪುರ ಗೇಟ್ ಬಳಿ ಇಂದು ಬೆಳಗ್ಗೆ 6:30ರ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.  ಟ್ರಾಕ್ಟರ್‌ನ ಟ್ರೈಲರ್‌ಗೆ ದ್ವಿಚಕ್ರ ವಾಹನ ಗುದ್ದಿದ ಪರಿಣಾಮ ಈ ದುರ್ಘಟನೆ ನಡೆದಿದೆ. 

ಪ್ರವಾಸದಿಂದ ಮರಳುವಾಗ ಕಾರಿಗೆ ಟ್ರಕ್ ಡಿಕ್ಕಿ, ಅಪಘಾತದಲ್ಲಿ ಇಬ್ಬರು ಬಿಜೆಪಿ ನಾಯಕರು ಮೃತ

ಮೃತರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿಯ ಗುಡ್ಡೆಹಳ್ಳಿ ಮೂಲದವರು ಎಂದು ತಿಳಿದು ಬಂದಿದೆ. ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios