ಉಪ್ಪಿನಂಗಡಿ ಸಮೀಪದ ಶಿರಾಡಿ ಗ್ರಾಮದ ಪರವರ ಕೊಟ್ಯ ಎಂಬಲ್ಲಿ ರಾ.ಹೆ. 75ರಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಂಗಳೂರು(ಡಿ.21): ಉಪ್ಪಿನಂಗಡಿ ಸಮೀಪದ ಶಿರಾಡಿ ಗ್ರಾಮದ ಪರವರ ಕೊಟ್ಯ ಎಂಬಲ್ಲಿ ರಾ.ಹೆ. 75ರಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕುಟುಂಬದ ಮೂವರು ಮೃತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಮಂಡ್ಯದ ನಿವಾಸಿಗಳಾದ ನಾರಾಯಣ ರಾವ್‌ (66), ನೀತು (35), ನಿಧಿ (15 ) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮಂಡ್ಯದ ವೈದ್ಯಾಧಿಕಾರಿ ಡಾ. ಚಂದ್ರಶೇಖರ್‌ (40) ಹಾಗೂ ಕಾವೇರಿ (60) ಎಂದು ಗುರುತಿಸಲಾಗಿದೆ.

ಮಂಜೂರಾದ ಹಣ ಬಿಡುಗಡೆಗೆ ಒತ್ತಾಯ, ಮಂಗಳಮುಖಿಯರಿಂದ ಆತ್ಮಹತ್ಯೆ ಬೆದರಿಕೆ.

ಮಂಡ್ಯದಿಂದ ಬಂದಿದ್ದ ಇವರು ಕಾರ್ಕಳ, ಧರ್ಮಸ್ಥಳ ಪ್ರವಾಸವನ್ನು ಮುಗಿಸಿ ವಾಪಸ್‌ ಹೋಗುತ್ತಿದ್ದಾಗ ಬೃಹತ್‌ ಗಾತ್ರದ ಕಬ್ಬಿಣದ ಪೈಪುಗಳನ್ನು ಹೇರಿಕೊಂಡು ಸಾಗುತ್ತಿದ್ದ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಇವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಮಗುಚಿ ಬಿದ್ದಿದೆ. ಇದರ ಪರಿಣಾಮ ಅಪ್ಪಚ್ಚಿಯಾದ ಕಾರಿನಲ್ಲಿ ಸಿಲುಕಿದ ನಾರಾಯಣ ರಾವ್‌, ನೀತು, ನಿಧಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಅಸುನೀಗಿದರು. ಡಾ.ಚಂದ್ರಶೇಖರ್‌ ಹಾಗೂ ಕಾವೇರಿ ಗಂಭೀರವಾಗಿ ಗಾಯಗೊಂಡಿದ್ದು ಅವರ ಪೈಕಿ ಓರ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆದ್ದಾರಿ ಸಂಚಾರಕ್ಕೆ ತಡೆಯುಂಟಾಗಿದ್ದು, ಕ್ರೇನ್‌ ಮೂಲಕ ಲಾರಿಯನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದ್ದು, ಆ ಬಳಿಕ ಹೆದ್ದಾರಿ ಸಂಚಾರ ಪುನರಾರಂಭಗೊಳ್ಳಲಿದೆ.

'ಹಿಂದೂ ರಾಷ್ಟಮಾಡಲು ಯತ್ನ, ಜನರ ಮೇಲೆ BJP ಪ್ಯಾಸಿಸ್ಟ್‌ ಸಂಸ್ಕೃತಿ'

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೇಪ್ರಸಾದ್‌, ಡಿವೈಎಸ್ಪಿ ದಿನಕರ ಶೆಟ್ಟಿ, ವೃತ್ತ ನಿರೀಕ್ಷಕ ನಾಗೇಶ ಕದ್ರಿ, ಠಾಣಾ ಎಸ್‌ಐ ಈರಯ್ಯ ಭೇಟಿ ನೀಡಿದ್ದಾರೆ.

ಎರಡು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆ: ಅಪಘಾತ ಸಂಭವಿಸಿದಾಕ್ಷಣ ಉಭಯ ದಿಕ್ಕಿನಿಂದಲೂ ವಾಹನ ಸಂಚಾರ ತಡೆ ಹಿಡಿಯಲಾಯಿತು. ಸ್ಥಳಕ್ಕೆ ಧಾವಿಸಿದ ನೆಲ್ಯಾಡಿ ಹೊರ ಠಾಣಾ ಪೊಲೀಸರಾದ ಎಎಸ್‌ಐ ಯೋಗೀಂದ್ರ, ಎಚ್‌.ಸಿ. ಹರಿಶ್ಚಂದ್ರ, ಸ್ಥಳೀಯರಾದ ಸುಭಾಷ್‌, ಸರ್ವೋತ್ತಮ ಗೌಡ ಮೊದಲಾದವರು ಬಹಳಷ್ಟುಶ್ರಮಪಟ್ಟು ಕಾರಿನಲ್ಲಿ ಸಿಲುಕಿದ್ದ ಡಾ . ಚಂದ್ರಶೇಖರ್‌ ಮತ್ತವರ ಅತ್ತೆ ಕಾವೇರಿ ಅವರನ್ನು ಹೊರತರಲು ಸಫಲರಾದರು. ಬಳಿಕ ಕ್ರೇನ್‌ ಸಹಾಯದಿಂದ ಲಾರಿಯನ್ನು ಸರಿಸಿ ಕಾರಿನಲ್ಲಿ ಸಿಲುಕಿದ್ದ ಮೂವರ ಮೃತದೇಹಗಳನ್ನು ಹೊರತೆಗೆಯಲಾಯಿತು. ಮೃತ ನಾರಾಯಣ ರಾವ್‌ ಅವರು ಡಾ . ಚಂದ್ರಶೇಖರ್‌ ಅವರ ಮಾವ ಆಗಿದ್ದು, ನೀತು ಪತ್ನಿ ಮತ್ತು ನಿಧಿ ಮಗಳಾಗಿದ್ದಾರೆ.