ಮಂಜೂರಾದ ಹಣ ಬಿಡುಗಡೆಗೆ ಒತ್ತಾಯ, ಮಂಗಳಮುಖಿಯರಿಂದ ಆತ್ಮಹತ್ಯೆ ಬೆದರಿಕೆ
ಮಂಜೂರಾಗಿರುವ ಹಣ ನೀಡದಿದ್ದರೆ, ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಂಗಳಮುಖಿಯರು ಅಳಲು ತೋಡಿಕೊಂಡಿದ್ದಾರೆ. ಮಂಗಳಮುಖಿಯರ ಸಂಘದ ಅಧ್ಯಕ್ಷೆ ಸಲ್ಮಾ ನೇತೃತ್ವದಲ್ಲಿ 15 ಕ್ಕು ಹೆಚ್ಚು ಮಂಗಳಮುಖಿಯರು ಪ್ರತಿಭಟನೆ ನಡೆಸಿ ನಗರಸಭೆ ಅಧಿಕಾರಿ ಆರೀಫ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಕೋಲಾರ(ಡಿ.21): ನಗರಸಭೆ ಅಧಿಕಾರಿ ಆರೀಫ್ 8 ವರ್ಷದಿಂದ ಮನೆ ನಿರ್ಮಿಸಿಕೊಳ್ಳಲು ಲೋನ್ ಮಂಜೂರಾಗಿರುವ ಹಣ ನೀಡದೆ ವಂಚಿಸುತ್ತಿದ್ದಾರೆ. ಹಣ ನೀಡದಿದ್ದರೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಂಗಳಮುಖಿಯರು ಅಳಲು ತೋಡಿಕೊಂಡಿದ್ದಾರೆ.
ಚಿಂತಾಮಣಿ ನಗರದ ನಗರಸಭೆ ಕಚೇರಿ ಮುಂಭಾಗದಲ್ಲಿ ಶುಕ್ರವಾರ ಮಂಗಳಮುಖಿಯರ ಸಂಘದ ಅಧ್ಯಕ್ಷೆ ಸಲ್ಮಾ ನೇತೃತ್ವದಲ್ಲಿ 15ಕ್ಕು ಹೆಚ್ಚು ಮಂಗಳಮುಖಿಯರು ಪ್ರತಿಭಟನೆ ನಡೆಸಿ ನಗರಸಭೆ ಅಧಿಕಾರಿ ಆರೀಫ್ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ನಗರಸಭೆ ಅಧಿಕಾರಿ ವಿರುದ್ಧ ಆರೋಪ
ಸಲ್ಮಾ ಮಾತನಾಡಿ, ತಂದೆ ತಾಯಿ ಇಲ್ಲ ದೇವರು ಶಾಪಗ್ರಸ್ಥರಾಗಿ ಮಾಡಿದ್ದು ಕೇಳಿ ಬಿಕ್ಷೆ ಬೇಡಿ ಬಾಡಿಗೆ ಮನೆಯಲ್ಲಿ ವಾಸವಾಗಿ ಜೀವನ ಪೋಷಿಸಿಕೊಳ್ಳುತ್ತಿದ್ದೇವೆ. ಸರ್ಕಾರ ಮನೆ ನಿರ್ಮಿಸಿಕೊಳ್ಳಲು 1.20 ಲಕ್ಷ ಹಣ ಈಗಾಗಲೇ ಕೊಟ್ಟಿದೆ. ಉಳಿದ 50 ಸಾವಿರ ಹಣ ನೀಡದೇ ಅಧಿಕಾರಿ ಆರೀಫ್ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
'ಹಿಂದೂ ರಾಷ್ಟಮಾಡಲು ಯತ್ನ, ಜನರ ಮೇಲೆ BJP ಪ್ಯಾಸಿಸ್ಟ್ ಸಂಸ್ಕೃತಿ'
ಪೌರಯುಕ್ತ ಹರೀಶ್ ತಂದೆ ತಾಯಿಯಂತೆ ಸಮಸ್ಯೆ ಕೇಳಿ ಸರ್ಕಾರದ ಸೌಲಭ್ಯ ದೊರಕಿಸಿದ್ದಾರೆ. ಮನೆ ನಿರ್ಮಿಸಿಕೊಳ್ಳಲು ನಿವೇಶನ ಪತ್ರ ಕೊಡುವುದಾಗಿ ಪೌರಯುಕ್ತರು ಮತ್ತು ನ್ಯಾಯಾಧೀಶರು ಮಾತುಕೊಟ್ಟಿದ್ದಾರೆ. ಆದ್ದರಿಂದ ಪೌರಯುಕ್ತರನ್ನು ವರ್ಗಾವಣೆ ಮಾಡದಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯ
ಎಲ್ಲಾ ಮಂಗಳಮುಖಿಯರಿಗೂ ನಿವೇಶನ ಕಲ್ಪಿಸಲು ಸರ್ಕಾರಿ ಜಾಗ ಗುರ್ತಿಸಿ ಪೌರಯುಕ್ತ ಹರೀಶ್ ಮಂಜೂರು ಮಾಡಿದ್ದಾರೆ. ಹಲವಾರು ವರ್ಷಗಳಿಂದ ನಗರಸಭೆಯಲ್ಲಿ ಬೇರುಬಿಟ್ಟಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಬಡವರಿಗೆ ಸೂರು ಕಲ್ಪಿಸಬೇಕೆಂದು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಹರೀಶ್ ರನ್ನು ಉಳಿಸುವಂತೆ ಮನವಿ ಮಾಡಿದ್ದಾರೆ.
ಮಂಗಳಮುಖಿಯರಾದ ಸುಭದ್ರನಾಯಕ್, ಅನಿತ, ನಿಶಾ, ಪ್ರಿಯ, ತುಳಸಿ, ಪಲ್ಲವಿ, ಉನ್ನಿಸಾ, ಪೂನಂ, ಹನಿಷಾ, ಲವಲಿ , ವಿಜಿ ,ಅಶ್ವಿನಿ , ಮಂಜುಳ, ಕಾವ್ಯ ಇದ್ದರು.