Asianet Suvarna News Asianet Suvarna News

ಬಳ್ಳಾರಿ: ದನದ ಕೊಟ್ಟಿಗೆಗೆ ಬೆಂಕಿ, ಮೂರು ಹಸುಗಳು ಸಜೀವ ದಹನ

ದನದ ಕೊಟ್ಟಿಗೆಗೆ ಬೆಂಕಿ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರುಳಿಹಾಳು ಗ್ರಾಮದಲ್ಲಿ ನಡೆದ ಘಟನೆ| 7 ಹಸುಗಳು ಪೈಕಿ ಮೂರು ಹಸುಗಳ ಸಾವು| ಬೆಂಕಿ ನಂದಿಸಿ ಇನ್ನುಳಿದ ಹಸುಗಳನ್ನು ಕಾಪಾಡಿದ ಗ್ರಾಮಸ್ಥರು| 

Three Cows Burnt Alive in Ballari Districtgrg
Author
Bengaluru, First Published Oct 4, 2020, 2:30 PM IST
  • Facebook
  • Twitter
  • Whatsapp

ಬಳ್ಳಾರಿ(ಅ.04): ದನದ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ ಮೂರು ಹಸುಗಳು ಸಜೀವವಾಗಿ ದಹನವಾದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರುಳಿಹಾಳು ಗ್ರಾಮದಲ್ಲಿ ನಿನ್ನೆ(ಭಾನುವಾರ) ಮಧ್ಯರಾತ್ರಿ ನಡೆದಿದೆ.

ಸೊಳ್ಳೆ ಕಾಟದಿಂದ ದನಗಳನ್ನ ರಕ್ಷಿಸಲು ಕೊಟ್ಟಿಗೆಯ ಮೂಲೆಯಲ್ಲಿ ಚಿಕ್ಕದಾಗಿ ಬೆಂಕಿ ಹಾಕಲಾಗಿತ್ತು. ಆದರೆ ಮಧ್ಯ ರಾತ್ರಿ ಬೆಂಕಿ ಹೆಚ್ಚಾಗಿ ದನದ ಕೊಟ್ಟಿಗೆಗೆ ಬಿದ್ದು ಈ ಅವಘಡ ಸಂಭವಿದೆ ಎಂದು ತಿಳಿದು ಬಂದಿದೆ.

ಬಳ್ಳಾರಿ: ಪ್ರವಾಹಕ್ಕೆ ಕಿತ್ತು ಹೋದ ಸೇತುವೆ, ಜೆಸಿಬಿ ಮೂಲಕ ಹಳ್ಳ ದಾಟಿದ ಕೂಲಿ ಕಾರ್ಮಿಕರು

ಬೆಂಕಿ ಬಿದ್ದ ದನದ ಕೊಟ್ಟಿಗೆ ರೇವಣ್ಣ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಬೆಂಕಿ ಬಿದ್ದಾಗ ದನದ ಕೊಟ್ಟಿಗೆಯಲ್ಲಿ 7 ಹಸುಗಳು‌ ಇದ್ದವು ಆ ಪೈಕಿ ಮೂರು ಹಸುಗಳು ಸಜೀವವಾಗಿ ಸುಟ್ಟು ಕರಕಲಾಗಿವೆ. ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬೆಂಕಿ ನಂದಿಸಿ ಇನ್ನುಳಿದ ಹಸುಗಳನ್ನು ಕಾಪಾಡಿದ್ದಾರೆ. 
 

Follow Us:
Download App:
  • android
  • ios