ಹೋಟೆಲ್ ಸಿಬ್ಬಂದಿಗೆ ಅಂಟಿದ ಕೊರೋನಾ: ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಟೆನ್ಷನ್..!
ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ಸಿಬ್ಬಂದಿಗೆ ಟೆನ್ಷನ್| ಸೀಮಿಕೇರಿ ಬೈಪಾಸ್ ರಸ್ತೆಯಲ್ಲಿನ ಹೊಟೇಲ್‌ನ ಮೂವರು ಸಿಬ್ಬಂದಿಗೆ ಕೊರೊನಾ ದೃಢ| ಹೊಟೇಲ್‌ನಲ್ಲಿ ಉಪಹಾರ,ಚಹಾ ಸೇವಿಸದಂತೆ ತೋಟಗಾರಿಕೆ ವಿವಿಯ ಮಹಾವಿದ್ಯಾಲಯದ ಸಿಬ್ಬಂದಿಗೆ ಸೂಚನೆ|
ಬಾಗಲಕೋಟೆ(ಜೂ.17): ನಗರದಲ್ಲಿ ಮೂವರು ಹೋಟೆಲ್ ಸಿಬ್ಬಂದಿಗೆ ಮಹಾಮಾರಿ ಕೊರೋನಾ ವೈರಸ್ ವಕ್ಕರಿಸಿದೆ. ಇದರಿಂದ ನಗರದಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದ ಸಿಬ್ಬಂದಿಗೂ ಟೆನ್ಷನ್ ಆರಂಭವಾಗಿದೆ.
ಹೊಟೇಲ್‌ನಲ್ಲಿ ಉಪಹಾರ, ಚಹಾ ಸೇವಿಸದಂತೆ ತೋಟಗಾರಿಕೆ ವಿವಿಯ ಮಹಾವಿದ್ಯಾಲಯದ ಸಿಬ್ಬಂದಿಗೆ ಡೀನ್ ಡಾ ಹೆಚ್. ಬಿ. ಪಾಟೀಲ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ, ಗುತ್ತಿಗೆ ಸಿಬ್ಬಂದಿ ಯಾವುದೇ ಹೊಟೇಲ್‌ನಲ್ಲಿ ಉಪಹಾರ ಸೇವಿಸದಂತೆ ಸೂಚನೆ ನೀಡಿದ್ದಾರೆ.
ಭಾರತ-ಚೀನಾ ಯುದ್ಧವಾಗ್ತಿದ್ದಾಗ ಪ್ರಧಾನಿ ಲಂಡನ್‌ನಲ್ಲಿ ವಿಹರಿಸ್ತಿದ್ರು: ರಾಹುಲ್‌ಗೆ ಕೋಟ ಟಾಂಗ್
ಹೀಗಾಗಿ ನಗರದ ಉದ್ಯಾನಗಿರಿಯಲ್ಲಿರೋ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಿಬ್ಬಂದಿಗೆ ಆತಂಕ ಎದುರಾಗಿದೆ. ತೋಟಗಾರಿಕೆ ವಿವಿ ಬಳಿಯಿರುವ ಹೋಟೆಲ್ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿದೆ. ಹೀಗಾಗಿ ವಿವಿ ಸುತ್ತಮುತ್ತ ಇರುವ ಗ್ರಮಸ್ಥರಲ್ಲೂ ಆತಂಕ ಮನೆ ಮಾಡಿದೆ.