Asianet Suvarna News Asianet Suvarna News

ಭಾರತ-ಚೀನಾ ಯುದ್ಧವಾಗ್ತಿದ್ದಾಗ ಪ್ರಧಾನಿ ಲಂಡನ್‌ನಲ್ಲಿ ವಿಹರಿಸ್ತಿದ್ರು: ರಾಹುಲ್‌ಗೆ ಕೋಟ ಟಾಂಗ್

ಹಿಂದೆ ಭಾರತ ಚೀನಾ ಮಧ್ಯೆ ಯುದ್ಧವಾದಾಗ ಭಾರತದ ಪ್ರಧಾನಿ ಲಂಡನ್ ನಲ್ಲಿ ವಿಹರಿಸ್ತಿದ್ರು. ಹಿಮಾಲಯನ್ ಬ್ಲಂಡರ್ಸ್ ಎನ್ನುವ ಪುಸ್ತಕದಲ್ಲಿ ಸೈನಿಕರೊಬ್ಬರು ಹೇಳಿದ್ದನ್ನು ಬರೆಯಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

Kota srinivas poojary taunts rahul gandhi about his reaction over clash between india and china
Author
Bangalore, First Published Jun 17, 2020, 2:33 PM IST

ಬಾಗಲಕೋಟೆ(ಜೂ.17): ಹಿಂದೆ ಭಾರತ ಚೀನಾ ಮಧ್ಯೆ ಯುದ್ಧವಾದಾಗ ಭಾರತದ ಪ್ರಧಾನಿ ಲಂಡನ್ ನಲ್ಲಿ ವಿಹರಿಸ್ತಿದ್ರು. ಹಿಮಾಲಯನ್ ಬ್ಲಂಡರ್ಸ್ ಎನ್ನುವ ಪುಸ್ತಕದಲ್ಲಿ ಸೈನಿಕರೊಬ್ಬರು ಹೇಳಿದ್ದನ್ನು ಬರೆಯಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಭಾರತ-ಚೀನಾ ಗಡಿಯಲ್ಲಿ ಸೈನಿಕರ ಮಧ್ಯೆ ಸಂಘರ್ಷ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಮೌನವೇಕೆ ಎಂದು ರಾಹುಲ್ ಟ್ವಿಟ್ ಗೆ ತಿರುಗೇಟು ಕೊಟ್ಟಿದ್ದಾರೆ. ಸೈನಿಕ ಕೊನೆಯ ಸೀಸ ಚೀನಾದತ್ತ ಎಸೆಯುವಲ್ಲಿ ಪ್ರಜ್ಞೆ ತಪ್ಪಿ ಬಿದ್ದಾಗ ಈ ದೇಶದ ಪ್ರಧಾನಿ ಲಂಡನ್ ನಲ್ಲಿ ವಿಹರಿಸ್ತಿದ್ರು ಎಂದಿದ್ದಾರೆ.

ಕೊರೋನಾ ಸಾವಿನ ಪ್ರಮಾಣ 'ಗುಜರಾತ್ ಮಾಡೆಲ್' ಎಂದ ರಾಹುಲ್ ಗಾಂಧಿ!

ದಳವಾಯಿ ಎನ್ನುವ ಸೈನಿಕ ಹಿಮಾಲಯನ್ ಬ್ಲಂಡರ್ಸ್ ಎನ್ನುವ ಪುಸ್ತಕ ಬರೆದಿದ್ದಾರೆ. ಅವತ್ತಿನ ಭಾರತವಲ್ಲ,ಇದು ನರೇಂದ್ರ ಮೋದಿ ಭಾರತ ಅನ್ನೋದು ಜನಕ್ಕೆ ಅರ್ಥವಾಗಬೇಕು. ಇಡೀ ವಿಶ್ವವೇ ಭಾರತ ಬೆಂಬಲಕ್ಕೆ ನಿಲ್ಲುತ್ತೆ. ಚೀನಾಗೆ ಭಾರತ ತಕ್ಕ ಪಾಠ ಕಲಿಸುವ ತಾಕತ್ತು ಇದೆ. 

ದಳವಾಯಿಯಾದ ನಾನು ಬರೆದ ಈ ಪುಸ್ತಕ ಓದಿದ ಮೇಲೂ ನೆಹರೂ ಕುಟುಂಬದ ಬಗ್ಗೆ ಗೌರವವಿದ್ದರೆ ನಿಮ್ಮ ರಾಷ್ಟ್ರ ಭಕ್ತಿಗೆ ದಿಕ್ಕಾರ ಎಂದು ಸೈನಿಕ ಬರೆದಿದ್ದಾನೆ. ಇದನ್ನು ನಾನು ಹೇಳಿಲ್ಲ ಯೋಧನೊಬ್ಬ ಹೇಳಿದ ಮಾತಿದು. ಅವತ್ತಿನ ಭಾರತವಲ್ಲ,ಇದು ರಾಷ್ಟ್ರ ಭಕ್ತ ನರೇಂದ್ರ ಮೋದಿ ಭಾರತ ಎಂದು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟಿದ್ದಾರೆ.

Fact check: ನಟ ಸುಶಾಂತ್ ಸಿಂಗ್ ರಜಪೂತ್‌ ಅವ್ರನ್ನು ಕ್ರಿಕೆಟರ್ ಎಂದ್ರಾ ರಾಹುಲ್ ಗಾಂಧಿ..?

ಹೈಕಮಾಂಡ್ ಬಿಎಸ್ವೈ ಕಟ್ಟಿ ಹಾಕುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಕಟ್ಟುವೂ ಇಲ್ಲ,ಪಟ್ಟವೂ ಇಲ್ಲ. ಇಡೀ ಪಕ್ಷ ಒಂದಾಗಿದೆ. ವಿಧಾನ ಪರಿಷತ್ ನಾಮನಿರ್ದೇಶನ ನೇಮಕದಲ್ಲಿ ಯಾವ ಗೊಂದಲವೂ ಇಲ್ಲ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪ  ಯಾವ ಗೊಂದಲ ಇಲ್ಲದೆ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ಸುಗಮಗೊಳಿಸುವ ವಿಶ್ವಾಸವಿದೆ. ಕೋರ್ ಕಮಿಟಿಯಲ್ಲಿ ಎಲ್ಲರೂ ತಮ್ಮ ತಮ್ಮ ಬೇಡಿಕೆಯಿಟ್ಟಿದ್ದಾರೆ..

ಎಲ್ಲಾ ಬೇಡಿಕೆ ಗಮನಿಸಿ,ಎಲ್ಲರನ್ನು ಸಮಾಧಾನಪಡಿಸುವಲ್ಲಿ ಹೈಕಮಾಂಡ್ ಮಾಡುತ್ತೆ. ಕಾದು ನೋಡೋಣ,ಖುಷಿ ಪಡೋಣ ಎಂದು ಬಾಗಲಕೋಟೆಯಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮತ್ತೆ ಮತ್ತೆ ತಪ್ಪು ಮಾಡುವುದು ಹುಚ್ಚುತನ; ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ!

ಒಂದು ಕಾಲದಲ್ಲಿ ಕಾಶ್ಮೀರದಲ್ಲಿರೋ ಉಗ್ರಗಾಮಿಗಳು ಘೋಷಣೆ ಹಾಕ್ತಿದ್ರು. ಭಾರತೀಯರೇ, ನಿಮ್ಮ ತಾಯಿಯ ಎದೆಹಾಲು ನೀವು ಕುಡದಿದ್ದರೆ‌‌ ಬನ್ನಿ ಕಾಶ್ಮೀರದ ಲಾಲ್ ಚೌಕ್ ನಲ್ಲಿ ಧ್ವಜ ಹಾರಿಸಿ ನೋಡೋಣ ಎಂದು ಸವಾಲ್ ಹಾಕ್ತಿದ್ರು. ಇವತ್ತೇನಾಯ್ತು, ನರೇಂದ್ರ ಮೋದಿ ಪ್ರಧಾನಿಯಾದ ನಂತ್ರ ಭಾರತೀಯ ಜನತಾ ಪಾರ್ಟಿ ಕೈಗೆ ಅಧಿಕಾರ ಸಿಕ್ಕ ನಂತ್ರ ತ್ರಿವರ್ಣ ದ್ವಜ ಆ ಚೌಕ್ ನಲ್ಲಿ ಅಲ್ಲ, ಇಡೀ ಕಾಶ್ಮೀರದ ಸರ್ಕಾರಿ ಕಚೇರಿಯಲ್ಲಿ ಹಾರುತ್ತಿದೆ. ಇದು ನಮಗೆ ರೋಮಾಂಚನವಾಗುತ್ತೆ. ಅಲ್ಲಿಯ ಮಾಜಿ ಮಂತ್ರಿಗಳು ಹೇಳಿದ್ರು 370 ತೆಗೆದ್ರೆ ರಕ್ತದ ಓಕುಳಿ ಹರಿಯುತ್ತೆ ಎಂದು.

ಒಂದೇ ಒಂದು ರಕ್ತದ ಹನಿ ಹೊರಗೆ ಬರಲಿಲ್ಲ,ಎದುರಿಸಲು ಯಾರು ರಸ್ತೆಗೆ ಬರಲಿಲ್ಲ. ಅಂದ್ರೆ ತಾಕತ್ ಇರುವ ಪ್ರಧಾನಿ ಇರುವ ಕಡೆ ಇಂತಾ ಕೆಲಸಗಳು ಆಗ್ತಾವೆ ಅನ್ನೋದು ಗಮನಿಸಬೇಕು ಎಂದಿದ್ದಾರೆ.

Follow Us:
Download App:
  • android
  • ios