ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ಜಾನುವಾರು ರಕ್ಷಣೆ| ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಪಟ್ಟಣ| ಆರೋಪಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು| 

ಯಲ್ಲಾಪುರ(ನ.04): ಮಿನಿ ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 6 ಜಾನುವಾರುಗಳನ್ನು ಪಟ್ಟಣದ ಜೋಡುಕೆರೆ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಪೊಲೀಸರು ವಶಕ್ಕೆ ಪಡೆದು, ಈ ಸಂಬಂಧ 3 ಜನರನ್ನು ಬಂಧಿಸಿದ ಘಟನೆ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಧಿತರನ್ನು ಹರಿಯಾಣದ ಬಿವಾಣಿಯ ಮನಪೂಲ್‌ಸಿಂಗ್‌ ಜಗನ್ನಾಥ, ಈಶ್ವರ ಸಿಂಗ್‌ ವಿಜಯ ಸಿಂಗ್‌ ಹಾಗೂ ಕೇರಳದ ರಿಜಿ ಫಿಲೀಫ್‌ ಎಂದು ಗುರುತಿಸಲಾಗಿದೆ. ಇವರು ಹರಿಯಾಣದಿಂದ ಕೇರಳದ ಕಡೆಗೆ ಮಿನಿ ಲಾರಿಯಲ್ಲಿ 5 ಎಮ್ಮೆಗಳು ಹಾಗೂ ಒಂದು ಹಸುವನ್ನು ಹಿಂಸಾತ್ಮಕವಾಗಿ ತುಂಬಿಕೊಂಡು, ಬಲಿಕೊಡುವ ಉದ್ದೇಶದಿಂದ ಸಾಗಿಸುತ್ತಿದ್ದರು. 

ಯಲ್ಲಾಪುರ: ಅಕ್ರಮವಾಗಿ ಜಾನುವಾರು ಸಾಗಣೆ, ಐವರ ಬಂಧನ

ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ಲಾರಿಯನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟದ ಸಂಗತಿ ಬಯಲಾಗಿದೆ. 6 ಜಾನುವಾರುಗಳನ್ನು ರಕ್ಷಿಸಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.