ಯಲ್ಲಾಪುರ(ನ.02): ಯಾವುದೇ ಪರವಾನಗಿ ಇಲ್ಲದೇ, ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸಲಾಗುತ್ತಿದ್ದ 9 ಜಾನುವಾರುಗಳನ್ನು ಭಾನುವಾರ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ರಕ್ಷಿಸಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಂಗಳೂರಿನ ಮಹಮ್ಮದ್‌ ಹುಸೇನ್‌ ಮೊವಾರಿ ಅಬ್ಬಾ, ಸಾದಿಕ್‌ ಇದಿನಬ್ಬಾ, ಬಾತೀಶ ಅಬ್ದುಲ್‌ ರಜಾಕ್‌, ಮಹಮ್ಮದ್‌ ಅರಫಾತ್‌ ಅಬ್ದುಲ್‌ ಖಾದರ್‌ ಹಾಗೂ ಮಹಮ್ಮದ್‌ ಹನೀಫ್‌ ಗುಡೆಮನೆ ಖಾದರಸಾಬ್‌ ಎಂದು ಗುರುತಿಸಲಾಗಿದೆ. 

ಕಸಾಯಿಖಾನೆಗೆ ಹಸುಗಳ ಸಾಗಾಟ: ಆಹಾರವಿಲ್ಲದೆ ಲಾರಿಯಲ್ಲೇ ಸತ್ತ ಎಮ್ಮೆಗಳು..!

ಇವರು ಬಲಿ ಕೊಡುವ ಉದ್ದೇಶದಿಂದ ರಾಣಿಬೆನ್ನೂರಿನಿಂದ ಮಂಗಳೂರು ಕಡೆಗೆ ಲಾರಿಯಲ್ಲಿ ಏಳು ಎತ್ತುಗಳು ಹಾಗೂ ಎರಡು ಎಮ್ಮೆಗಳನ್ನು ಹಿಂಸಾತ್ಮಕವಾಗಿ ತುಂಬಿಕೊಂಡು, ನೀರು, ಆಹಾರ ನೀಡದೇ ಸಾಗಿಸುತ್ತಿದ್ದ ವೇಳೆ ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾರೆ. ಲಾರಿಯಲ್ಲಿ ಹಿಂಸಾತ್ಮಕವಾಗಿ ತುಂಬಿದ ಪರಿಣಾಮ ಒಂದು ಎತ್ತು ಮೃತಪಟ್ಟಿದೆ. ಈ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.