Asianet Suvarna News Asianet Suvarna News

ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಬರ್ಬರ ಕೊಲೆ: ಮಗ, ಅಳಿಯ ಸೇರಿ ಮೂವರು ಅರೆಸ್ಟ್‌

ಮಹಿಳೆ ಕೊಲೆ ಮಾಡಿದ ಆರೋಪದ| ಆರೋಪಿಗಳನ್ನ ಬಂಧಿಸಿದ ತಿಕೋಟಾ ಪೊಲೀಸರು| ಕೊಲೆಗೆ ಯತ್ನಿಸಿದ್ದ 9 ಮಂದಿ ಆರೋಪಿಗಳು| ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ, ವಾಹನ ವಶ|
 

Three Accused Arrest for Murder Case in Vijayapura
Author
Bengaluru, First Published Apr 26, 2020, 11:40 AM IST
  • Facebook
  • Twitter
  • Whatsapp

ವಿಜಯಪುರ(ಏ.26): ಮಹಿಳೆ ಕೊಲೆ ಮಾಡಿದ ಆರೋಪದ ಮೇರೆಗೆ ಮಗ, ಅಳಿಯ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರ ಹಾಗೂ ಶವ ಸಾಗಣೆಗೆ ಬಳಸಿದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಿಕೋಟಾದ ರೇಣುಕಾ ಸಾಬು ಅವಟಿ (45) ಕೊಲೆಗೀಡಾದ ಮಹಿಳೆ. ಮಮದಾಪುರದ ಸಿದ್ದಪ್ಪ ಉರ್ಫ್‌ ಸಿದ್ದು ಈರಪ್ಪ ಅವಟಿ ಪ್ರಮುಖ ಆರೋಪಿಯಾಗಿದ್ದು, ಈತ ಕೊಲೆಗೀಡಾದ ರೇಣುಕಾ ಸಾಬು ಅವಟಿಯ ಅಳಿಯ. ಈತನು ತನ್ನ ಅಕ್ಕ ಮತ್ತು ತನ್ನ ಪತ್ನಿಯ ಶೀಲ ಶಂಕಿಸಿದ್ದ. ಹೀಗಾಗಿ ಅಕ್ಕನ ಮಗ ಬಸವರಾಜ ಸೇರಿದಂತೆ ಇತರೇ 9 ಜನರೊಂದಿಗೆ ಸೇರಿ ಅಕ್ಕ ಮತ್ತು ತನ್ನ ಪತ್ನಿಯ ಕೊಲೆಗೆ ಯತ್ನಿಸಿದ್ದರು.

ಹಣದ ವಿಷಯಕ್ಕೆ ಜಗಳ: ದನದ ವ್ಯಾಪಾರಿಯ ಬರ್ಬರ ಕೊಲೆ

ಈ ವೇಳೆ ಆತನ ಪತ್ನಿ ಪಾರಾಗಿದ್ದಳು. ಆದರೆ ಕೈಗೆ ಸಿಕ್ಕ ಅಕ್ಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಶವವನ್ನು 407 ನಲ್ಲಿ ಸಾಗಿಸಿ ಪರಾರಿಯಾಗಿದ್ದರು. ಬದುಕುಳಿದ ಸಂಗೀತಾ ನೀಡಿದ ದೂರಿನ ಮೇರೆಗೆ ತಿಕೋಟಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ ತಿಳಿಸಿದ್ದಾರೆ.
 

Follow Us:
Download App:
  • android
  • ios