ಹಾನಗಲ್ಲ(ಏ.20): ಹಣದ ವಿಷಯದಲ್ಲಿ ದನಗಳ ವ್ಯಾಪಾರಿಗಳ (ದಲಾಲರು) ನಡುವೆ ನಡೆದ ಜಗಳದಲ್ಲಿ ಒಬ್ಬನನ್ನು ಕೊಲೆ ಮಾಡಿ, ತಪ್ಪಿಸಿಕೊಳ್ಳಲು ಅಪಘಾತದಲ್ಲಿ ಮೃತಪಟ್ಟಂತೆ ಸೃಷ್ಟಿಮಾಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಮಾವಕೊಪ್ಪದ ಕಾಲುವೆ ಬಳಿ ನಡೆದಿದೆ.

ತಾಲೂಕಿನ ಹಾವಣಗಿ ಗ್ರಾಮದ ಸೋಮಶೇಖರ ಮಹದೇವಪ್ಪ ಆಡೂರು ಹಲಸೂರು (40) ಎಂಬಾತನೆ ಕೊಲೆಯಾದ ವ್ಯಕ್ತಿಯಾಗಿದ್ದು, ಈತ ದ್ಯಾಮನಕೊಪ್ಪದ ಪರಮೇಶಿ ಅಡಿವೆಪ್ಪ ಯತ್ನಳ್ಳಿ ಹಾಗೂ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಶಿವಪ್ಪ ಎಂಬುವವರ ಜತೆ ದನಗಳ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ. 

ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಮಹಿಳೆಯ ಮೈದುನನ ರುಂಡ ತುಂಡರಿಸಿದ ಕೀಚಕ...!

ಮೂವರಲ್ಲಿ ಹಣಕಾಸಿನ ವ್ಯವಹಾರದಲ್ಲಿ ಜಗಳವುಂಟಾದೆ.ಗಿ ಕಟ್ಟಿಗೆಯ ಆಯುಧ (ಹೆಂಡಗೊಡತಿ) ದಿಂದ ಹೊಡೆದು ಕೊಲೆ ಮಾಡಿದ್ದಾರೆ. ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಪರಮೇಶಿ ಹಾಗೂ ಶಿವಪ್ಪ ತಾಲೂಕಿನ ಮಾವಕೊಪ್ಪ ಗ್ರಾಮದ ಹತ್ತಿರದ ಕಾಲುವೆಯ ಹತ್ತಿರ ದ್ವಿಚಕ್ರ ವಾಹನವನ್ನು ಬೀಳಿಸಿ ಅಲ್ಲೇ ಶವವನ್ನು ಎಸೆದು ಪರಾರಿಯಾಗಿದ್ದಾರೆ ಎಂದು ಮೃತನ ಸಹೋದರ ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಹಾನಗಲ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಒಬ್ಬ ಆರೋಪಿ ಪರಮೇಶಿ ಯತ್ನಳ್ಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಶಿವಪ್ಪ ತಲೆ ಮರೆಸಿಕೊಂಡಿದ್ದಾನೆ.