ಮೈಕ್ರೋ ಫೈನಾನ್ಸ್ ಕಿರುಕುಳದಿಂದ ತನ್ನ ವಿಶೇಷ ಚೇತನ ಮಕ್ಕಳ ಜೊತೆ ಮನೆಬಿಟ್ಟಿದ್ದ ಕುರಂಕೋಟೆಯ ಬಡಕಾರ್ಮಿಕ ಮಾರುತಿ ಮತ್ತು ವಿನುತಳನ್ನು ತುಮಕೂರು ಜಿಲ್ಲಾಧಿಕಾರಿ ಆದೇಶದಂತೆ ಬೆಂಗಳೂರಿನಿಂದ ಕರೆಯಿಸಿ ಹಳೆಯ ಮನೆಗೆ ಸುಣ್ಣ ಬಣ್ಣ ಹೊಡೆಸಿ ಕೊರಟಗೆರೆ ತಹಸೀಲ್ದಾರ್ ಮಂಜುನಾಥ, ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ನೇತೃತ್ವದ ತಂಡ ಮತ್ತೆ ಮನೆಗೆ ಸೇರಿಸಿದರು.
ಕೊರಟಗೆರೆ(ಫೆ.01): ಮೈಕ್ರೋ ಫೈನಾನ್ಸ್ ಕಿರುಕುಳದಿಂದ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕು ಕುರಂಕೋಟೆ ಗ್ರಾಮದಲ್ಲಿ ಮನೆ ತೊರೆದಿದ್ದ ಬಡ ಕಾರ್ಮಿಕ ಕುಟುಂಬವೊಂದನ್ನು ಮತ್ತೆ ಮನೆಗೆ ಜಿಲ್ಲಾಧಿಕಾರಿ ಕರೆತಂದಿದ್ದಾರೆ. ಅಲ್ಲದೇ ಫೈವ್‌ಸ್ಟಾರ್ ಫೈನಾನ್ಸ್ ಸಿಬ್ಬಂದಿ ಬಡ ಕಾರ್ಮಿಕ ಕುಟುಂಬದ ಮನೆ ಗೋಡೆ ಮೇಲೆ ಬರೆದಿದ್ದ ಬರಹವನ್ನು ಅಳಿಸಿ ಸುಣ್ಣ ಬಣ್ಣ ಹೊಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಫೈವ್ ಸ್ಟಾರ್‌ಫೈನಾನ್ಸ್ ಕುರಂಕೋಟೆ ಗ್ರಾಮದ ಮಾರುತಿಗೆ 5.50 ಲಕ್ಷ ಸಾಲ ನೀಡಿ ಆತನಿಂದ ಕ 4.50 ಲಕ್ಷ ವಸೂಲಿ ಮಾಡಿದೆ. ಬಳಿಕ ಕಿರುಕುಳ ನೀಡಿ ಮನೆಯ ಗೋಡೆಯ ಮೇಲೆ ಬರೆದ ಪರಿಣಾಮ ಅವರು ಊರು ಬಿಟ್ಟಿದ್ದರು.
ಮೈಕ್ರೋ ಫೈನಾನ್ಸ್‌ಗೆ ಹೆದರಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಸಿದ್ದರಾಮಯ್ಯ
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ತನ್ನ ವಿಶೇಷ ಚೇತನ ಮಕ್ಕಳ ಜೊತೆ ಮನೆಬಿಟ್ಟಿದ್ದ ಕುರಂಕೋಟೆಯ ಬಡಕಾರ್ಮಿಕ ಮಾರುತಿ ಮತ್ತು ವಿನುತಳನ್ನು ತುಮಕೂರು ಜಿಲ್ಲಾಧಿಕಾರಿ ಆದೇಶದಂತೆ ಬೆಂಗಳೂರಿನಿಂದ ಕರೆಯಿಸಿ ಹಳೆಯ ಮನೆಗೆ ಸುಣ್ಣ ಬಣ್ಣ ಹೊಡೆಸಿ ಕೊರಟಗೆರೆ ತಹಸೀಲ್ದಾರ್ ಮಂಜುನಾಥ, ಸಿಪಿಐ ಅನಿಲ್ ಮತ್ತು ಪಿಎಸೈ ಚೇತನ್ ನೇತೃತ್ವದ ತಂಡ ಮತ್ತೆ ಮನೆಗೆ ಸೇರಿಸಿದರು.
ಹನುಮಂತಪುರದ ಮಹಿಳೆ ಮಂಗಳಮ್ಮ ಸಾಲ ದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಎರಡು ಸಂಸ್ಥೆಗಳ ಮೇಲೆ ಕ್ರಮ ಜರುಗಿಸಲಾಗುವುದು. ಫೈವ್ ಸ್ಟಾರ್ ಕಂಪನಿಯ ವ್ಯವಸ್ಥಾಪಕ, ಮೇಲ್ವಿಚಾರಕ ಮತ್ತು ಗ್ರಾಮೀಣ ಕೂಟ ಬ್ಯಾಂಕಿನ ವ್ಯವಸ್ಥಾಪಕ ಹಾಗೂ ಮೇಲ್ವಿಚಾರಕಿ ಮೇಲೆ ಸುಮೋಟೋ ಕೇಸ್ ಪ್ರಕರಣ ದಾಖಲಾಗಿದೆ.ನಾಲ್ವರನ್ನು ವಿಚಾರಣೆನಡೆಸಲಾಗುತ್ತಿದೆ.
ತುಮಕೂರು: ಮೈಕ್ರೋ ಫೈನಾನ್ಸ್, ಕಿರುಕುಳ ಕೊಟ್ಟವರ ಮೇಲೆ ಬಿತ್ತು ಕೇಸ್
ವಸೂಲಿ ಹಣ ಮಿಸ್: ನೌಕರ ಆತ್ಮಹತ್ಯೆ ಯತ್ನ
ಅಂಕೋಲಾ: ಮೈಕ್ರೋ ಫೈನಾನ್ಸ್ ಸಿಬ್ಬಂದಿಯೋರ್ವ ವಸೂಲಿ ಮಾಡಿದ ಹಣ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅಂಕೋಲಾದಲ್ಲಿ ನಡೆದಿದೆ. ಹಾನಗಲ್ಲ ಮೂಲದ ಗುರುರಾಜ್ ಸೋಮಲಿಂಗ್ ಬಂಡಿವರ್ಡ್ಗ(24) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಸೋಮಲಿಂಗ್ ಅಂಕೋಲಾದ ಭಾರತ್ ಮೈಕ್ರೋ ಫೈನಾನ್ಸ್‌ನಲ್ಲಿ ಫೀಲ್ಡ್ ಕಲೆಕ್ಷನ್ ಕೆಲಸ ಮಾಡುತ್ತಿದ್ದರು. ಶುಕ್ರವಾರ ಸುಂಕಸಾಳ ಸುತ್ತಮುತ್ತಲಿನ ಪ್ರದೇಶದಿಂದ ಸಾಲದ ಬಾಕಿ ಹಣ ವಸೂಲಿ ಮಾಡಿ ಬರವಾಗ ₹40 ಸಾವಿರ ಹಣ ಕಳೆದುಕೊಂಡಿದರು. ಈ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಸಹೋದ್ಯೋಗಿಗಳು ಆತನನ್ನು ಕೂಡಲೇ ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
