ಬೀದರ್(ಸೆ.28): ಕಾಂಗ್ರೆಸ್ ಬಿಟ್ಟು ಹೋಗಿರುವ ನಮ್ಮ ಸ್ನೇಹಿತರಿಗೆ ನಿದ್ದೆ ಬರ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೀದರ್‌ನಲ್ಲಿ ಹೇಳಿದ್ದಾರೆ. ಖಾತೆ ಕೊಡ್ತಾರೆ ಎಂದು ಬಿಜೆಪಿ ಸೇರಿದ್ದ ನಾಯಕರೆಲ್ಲ ಈಗ ನಿದ್ದೆ ಇಲ್ಲದೆ ಟೆನ್ಶನ್‌ಗೊಳಗಾಗಿದ್ದಾರೆ.

ಬೀದರ್‌ನಲ್ಲಿ ಮಾತನಾಡಿದ ಈಶ್ವರ್ ಖಂಡ್ರೆ ಅವರು, ಕಾಂಗ್ರೆಸ್ ಬಿಟ್ಟು ಕಂಗಾಲಾಗಿರುವ ನಮ್ಮ ಸ್ನೇಹಿತರು ಫೋನ್ ಮೇಲೆ ಪೋನ್ ಮಾಡುತ್ತಿದ್ದಾರೆ. ಕಾಂಗ್ರೆಸ್ ಬಿಟ್ಟ ನಮ್ಮ ಸ್ನೇಹಿತರಿಗೆ ರಾತ್ರಿ ನಿದ್ದೆ ಬರುತ್ತಿಲ್ಲ. ಒಂದು ಪೆಗ್ ಕುಡಿದರೂ ಅವರಿಗೆ ನಿದ್ದೆ ಬರುತ್ತಿಲ್ಲ. ತಡರಾತ್ರಿ ಎದ್ದು ಮತ್ತೊಂದು ಪೆಗ್ ಕುಡಿದು ಮಲಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಚಿವರ ಮಾತಿಗೆ ವಕೀಲರ ಮಧ್ಯೆಯೇ ವಾಗ್ವಾದ..! ಅಷ್ಟಕ್ಕೂ ಮಾಧುಸ್ವಾಮಿ ಹೇಳಿದ್ದೇನು..?

ಖಾತೆಯ ಕನಸು ಕಂಡಿದ್ದರು:

ಕಾಂಗ್ರೆಸ್ ಪಕ್ಷ ಬಿಟ್ಟ ನಮ್ಮ ಸ್ನೇಹಿತರಿ ಖಾತೆಗಳು ಕೊಡುವ ಆಮೀಷ ಕೊಟ್ಟಿದರು. ಕಾಂಗ್ರೆಸ್ ಬಿಟ್ಟ ಶಾಸಕರೆಲ್ಲರೂ ಆ ಖಾತೆ ಸಿಗುತ್ತೆ ಈ ಖಾತೆ ಸಿಗುತ್ತೆ ಎಂಬ ಕನಸು ಕಾಣುತ್ತಿದ್ದರು. ಇವತ್ತು ಕಂಗಾಲಾಗಿ ನಮಗೆ ಫೋನ್ ಮಾಡುತ್ತಿದ್ದಾರೆ ಎಂದಿದ್ದಾರೆ.

ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ:

ದೇಶದಲ್ಲಿ ಸಾಂವಿಧಾನಿಕ ಸಂಸ್ಥೆಗಳು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಬೀದರ್‌ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ. ಚುನಾವಣಾ ಆಯೋಗ ಪಕ್ಷಾತೀತವಾಗಿ‌ ಕೆಲಸ ‌ಮಾಡಬೇಕು. ಆದರೆ ಚುನಾವಣೆ ಆಯೋಗ ಕೂಡ ಕೇಂದ್ರ ಹೇಳಿದಂತೆ ಕೇಳುತ್ತಿದೆ. ಅನರ್ಹ ಶಾಸಕರು ಚುನಾವಣೆ ನಿಲ್ಲಬಹುದು ಎಂದು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಮಂಡ್ಯ: 'ರೇವಣ್ಣ ದೇವೇಗೌಡರ ಮಗ ಎಂದು ಸುಮ್ನಿದ್ದೀನಿ’..!

ಅವರೇ ಚುನಾವಣೆ ಘೋಷಣೆ ಮಾಡುತ್ತಾರೆ, ಅವರೇ ಮುಂದುವರೆಸುತ್ತಾರೆ. ಚುನಾವಣೆ ಆಯೋಗ ಈ ವರ್ತನೆ ಎಷ್ಟು ಸರಿ, ಎಲ್ಲವನ್ನೂ ಜನರು ಗಮನಿಸುತ್ತಿದ್ದಾರೆ ಎಂದು ಅವರು ಹೇಳೀದ್ದಾರೆ.