ಹಾಸನ(ಸೆ.28): ನಗರದ ಹೈಟೆಕ್‌ ಬಸ್‌ ನಿಲ್ದಾಣದ ಸಮೀಪ ಇರುವ ನೂತನ ನ್ಯಾಯಾಲಯ ಕಟ್ಟಡ ಉದ್ಘಾಟನೆ ಅಷ್ಜೊಂದು ನಿರಾಳವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ ಮಾತು ವಕೀಲರ ನಡುವೆ ವಾಗ್ವಾದಕ್ಕೆ ಕಾರಣವಾಯಿತು.

ಶುಕ್ರವಾರ ವಕೀಲರ ಸಂಘದಲ್ಲಿ ವಕೀಲರ ಸಮಸ್ಯೆ ಬಗ್ಗೆ ಆಲಿಸಿದ ನಂತರ ಮಾತನಾಡಿದ ಸಚಿವರು, ವಕೀಲರು ಹೇಳಿರುವ ಸಮಸ್ಯೆ ಬಗ್ಗೆ ನನಗೆ ತಿಳಿದಿದೆ. ಹೊಸ ಕಟ್ಟಡದ ನ್ಯಾಯಾಲಯದ ಉದ್ಘಾಟನೆಯಾಗುವಲ್ಲಿ ಅಷ್ಟೊಂದು ನಿರಾಳವಾಗಿಲ್ಲ ಎಂದು ಹೇಳಿದ್ದಾರೆ.

ಮಂಡ್ಯ: 'ರೇವಣ್ಣ ದೇವೇಗೌಡರ ಮಗ ಎಂದು ಸುಮ್ನಿದ್ದೀನಿ’..!...

ಸಚಿವರ ಈ ಮಾತಿನಿಂದ ಅಸಮಾಧಾನಗೊಂಡ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ್‌ ನಿರಾಳ ಎಂದರೇ ಯಾವ ತರ ಎಂದು ಪ್ರಶ್ನಿಸಿದರು. ಆಗ ವಕೀಲರ ಸಂಘದ ಅಧ್ಯಕ್ಷ ಜೆ.ಪಿ.ಶೇಖರ್‌ ಸಮಾಧಾನ ಪಡಿಸಲು ಮುಂದಾದರೂ ಲಕ್ಷ್ಮೇನಾರಾಯಣ ತೀವ್ರ ವಿರೋಧ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ವೇಳೆ ವಕೀಲರ ನಡುವೆಯೇ ವಾಗ್ವಾದ ನಡೆಯಿತು. ಸಚಿವ ಮಾಧುಸ್ವಾಮಿ ಮಧ್ಯ ಪ್ರವೇಶಿಸಿ, ನನಗೆ ಯಾರ ಸಹಾಯದ ಅಗತ್ಯವಿಲ್ಲ. ನಾನು ಏಕೆ ನಿರಾಳವಾಗಿಲ್ಲ ಎಂದು ಹೇಳಿದೆ ಅಂದರೆ, ಹೊಸ ಕಟ್ಟಡದ ಬಗ್ಗೆ ಈಗಾಗಲೇ ಪಿಡಬ್ಲ್ಯೂಡಿ ಎಂಜಿನಿಯರ್‌ಗಳ ಜೊತೆ ಮಾತನಾಡಿದ್ದೇನೆ. ಏನಪ್ಪ ಹಾಸನ್‌ ಕೋರ್ಟ್‌ ಇಷ್ಟುತಡವಾಗಿದೆ ಎಂದು ಕೇಳಿದೆ. ಇನ್ನು ಎಂಟತ್ತು ದಿವಸದೊಳಗೆ ಹೊಸ ನ್ಯಾಯಾಲಯದ ಕಟ್ಟಡವನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡುವ ಬಗ್ಗೆ ಕಾರ್ಯಪ್ರವೃತ್ತರಾಗುವುದಾಗಿ ಹೇಳಿದರು. ಹೀಗೆ ಹೇಳಿದ್ದರಿಂದ ನಿರಾಳವಾಗಿಲ್ಲ ಎಂದು ಹೇಳಿದ್ದೇನೆ. ನಾನು ಯಾರಿಗೂ ಹೆದರಿಕೊಂಡು ಬಂದು ಇಲ್ಲಿ ಮಂತ್ರಿಗಿರಿ ಮಾಡುವುದಕ್ಕೆ ಬಂದಿಲ್ಲ ಎಂದಿದ್ದಾರೆ.

ಇನ್ನು 8 ದಿವಸದಲ್ಲಿ ಕೋರ್ಟ್‌ ಕಟ್ಟಡ ಪೂರ್ಣವಾಗಿ ಉದ್ಘಾಟನೆ ಆಗುತ್ತದೆ. ನ್ಯಾಯಾಲಯ ನಿರ್ಮಾಣವಾಗುತ್ತಿರುವುದು ಕಕ್ಷಿದಾರರು ಮತ್ತು ವಕೀಲರ ಅನುಕೂಲಕ್ಕೆ. ವಕೀಲರ ಸಂಘದ ಕಟ್ಟಡವಾಗುವ ಬಗ್ಗೆ ಮತ್ತು ಕಿರಿಯ ವಕೀಲರಿಗೆ ನೀಡುತ್ತಿರುವ ಶಿಷ್ಯವೇತನವನ್ನು 2 ಸಾವಿರದಿಂದ 5 ಸಾವಿರ ರು.ಗೆ ಹೆಚ್ಚಿಸಲು ಪರಿಶೀಲಿಸಿ ಕ್ರಮ ವಹಿಸಲಾಗುವುದು. ನಗರದ ಮೇಲ್ಸೇತುವೆ ಕಾಮಗಾರಿ ತುರ್ತಾಗಿ ಪೂರ್ಣಗೊಳಿಸಲು ಸೂಚಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ಮೇಲಾಧಿಕಾರಿ ಲಂಚಕ್ಕೆ ಬೇಡಿಕೆ: ಬಸ್‌ ಚಾಲಕ ಆತ್ಮಹತ್ಯೆಗೆ ಯತ್ನ

ಹಿರಿಯ ವಕೀಲ ಎಸ್‌.ದ್ಯಾವೇಗೌಡ ಮಾತನಾಡಿ, ಹೊಸ ನ್ಯಾಯಾಲಯದ ಕಟ್ಟಡ ಚಾಲನೆಗೆ ನಮ್ಮ ಅಡ್ಡಿಯಿಲ್ಲ. ಆದರೇ ಮೊದಲು ರೈಲ್ವೆ ಮೇಲ್‌ ಸೇತುವೆ ಪೂರ್ಣವಾಗಬೇಕಿದೆ ಎಂದರು. ಹಿರಿಯ ವಕೀಲ ಎಚ್‌.ಕೆ.ಜವರೇಗೌಡ, ನವಿಲೆ ಅಣ್ಣಪ್ಪ ಇತರರು ಇದ್ದರು.

ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ