ಮಂಡ್ಯ(ಸೆ.28): ರೇವಣ್ಣ ಅವರು ದೇವೇಗೌಡರ ಮಗ ಎಂದು ಸುಮ್ಮನಿದ್ದೇನೆ ಎಂದು ಮಾಜಿ ಸಂಸದ ಶಿವರಾಮೇಗೌಡ ಹೇಳಿದ್ದಾರೆ. ರೇವಣ್ಣ ಅವರು ಶಿವರಾಮೇಗೌಡ ಅವರ ಬಗ್ಗೆ ನೀಡಿದ ಹೇಳಿಕೆಗೆ ಮಂಡ್ಯದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಶಿವರಾಮೇಗೌಡರನ್ನು ಡಸ್ಟ್‌ ಬಿನ್‌ ಎಂದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವರಾಮೇಗೌಡ, ರೇವಣ್ಣ ನಮ್ಮ ನಾಯಕ. ದೇವೇಗೌಡರ ಮಗ ಅಂತ ಸುಮ್ಮನಾಗಿದ್ದೀನಿ. ರೇವಣ್ಣ ಹಾಗೆ ಮಾತಾಡ್ತಾನೇ ಇರ್ತಾರೆ ಬಿಡಿ. ಈಗ ಕುಮಾರಸ್ವಾಮಿ ನನ್ನ ಬಗ್ಗೆ ಏನೂ ಬೇಕಾದರೂ ಮಾತನಾಡಲಿ. ಆದರೆ, ನಾನು ಕಾಂಗ್ರೆಸ್‌ ಪಕ್ಷ ಸೇರುವುದಿಲ್ಲ ಎಂದಿದ್ದಾರೆ.

ಮೇಲಾಧಿಕಾರಿ ಲಂಚಕ್ಕೆ ಬೇಡಿಕೆ: ಬಸ್‌ ಚಾಲಕ ಆತ್ಮಹತ್ಯೆಗೆ ಯತ್ನ

ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರೇ ನಮ್ಮ ನಾಯಕರು, ಪಕ್ಷದ ವರಿಷ್ಠರು. ತಮ್ಮ ನಡುವೆ ಸಣ್ಣ ಪುಟ್ಟವ್ಯತ್ಯಾಸಗಳಿದ್ದರೆ ಅದನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ. ಆದರೆ ನಾನು ಜೆಡಿಎಸ್‌ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ