Asianet Suvarna News Asianet Suvarna News

ದರ್ಶನ್‌ ಪ್ರಕರಣ: ರೇಣುಕಾಸ್ವಾಮಿ ಕೊಂದವರಿಗೆ ಶಿಕ್ಷೆ ಅಲ್ಲ, ದೊಡ್ಡ ಶಿಕ್ಷೆ ಆಗಬೇಕು, ಇಂದ್ರಜಿತ್ ಲಂಕೇಶ್

ಇಂದ್ರಜಿತ್ ಲಂಕೇಶ್ ಅವರು, ರೇಣುಕಾಸ್ವಾಮಿ‌ ಕೊಲೆ ಕೇಸ್ ಹೊರಗಡೆ ಬಂದಿದ್ದೇ ಪತ್ರಕರ್ತರಿಂದ. ಮಾಧ್ಯಮವದರ ಹಲ್ಲೆ ಮಾಡೋದು ಸರಿ‌ ಅಲ್ಲ. ಪತ್ರಕರ್ತರ ಮೇಲೆ ಯಾಕೆ ಹಲ್ಲೆ ಮಾಡ್ತಾರೆ. ಪತ್ರಕರ್ತರು ಇರದೆ ಹೋದ್ರೆ ಈ ಕೇಸ್ ಕೂಡಾ ಕಸದ ಬುಟ್ಟಿಗೆ ಹೋಗ್ತಿತ್ತು, ಪತ್ರಕರ್ತರಿಗೆ ಸರ್ಕಾರ ಸೇಫ್ಟಿ ಒದಗಿಸಬೇಕು ಎಂದ ಆಗ್ರಹಿಸಿದ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ 

Those who killed Renukaswamy should be punished Says Film Director Indrajit Lankesh grg
Author
First Published Jun 13, 2024, 2:36 PM IST

ಹುಬ್ಬಳ್ಳಿ(ಜೂ.13):  ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನ ಇಡೀ ಚಿತ್ರರಂಗ ಖಂಡಿಸಬೇಕು‌. ಯಾರು ಕೊಲೆ ಮಾಡಿದ್ದಾರೋ ಅವರಿಗೆ ಶಿಕ್ಷೆ ಅಲ್ಲ, ದೊಡ್ಡ ಶಿಕ್ಷೆ ಆಗಬೇಕು. ನಾನು ಚಿತ್ರರಂಗದ ದ್ವನಿಯಾಗಿ ಹೇಳತೀದಿನಿ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಅಂತ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ರೇಣುಕಾಸ್ವಾಮಿ‌ ಕೊಲೆ ಕೇಸ್ ಹೊರಗಡೆ ಬಂದಿದ್ದೇ ಪತ್ರಕರ್ತರಿಂದ. ಮಾಧ್ಯಮವದರ ಹಲ್ಲೆ ಮಾಡೋದು ಸರಿ‌ ಅಲ್ಲ. ಪತ್ರಕರ್ತರ ಮೇಲೆ ಯಾಕೆ ಹಲ್ಲೆ ಮಾಡ್ತಾರೆ. ಪತ್ರಕರ್ತರು ಇರದೆ ಹೋದ್ರೆ ಈ ಕೇಸ್ ಕೂಡಾ ಕಸದ ಬುಟ್ಟಿಗೆ ಹೋಗ್ತಿತ್ತು, ಪತ್ರಕರ್ತರಿಗೆ ಸರ್ಕಾರ ಸೇಫ್ಟಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. 

ರೇಣುಕಾಸ್ವಾಮಿ ಕೊಲೆ ಕೇಸ್‌: ಪ್ರತಿಭಟನೆ ಮಾಡಿದ್ದಕ್ಕೆ ಮಾಜಿ ಶಾಸಕ ತಿಪ್ಪಾರೆಡ್ಡಿಗೆ ದರ್ಶನ್‌ ಅಭಿಮಾನಿಯಿಂದ ಆಕ್ಷೇಪ ಕರೆ?

ಕೆಲವರಿಗೆ ಪ್ರಾಣ ಬೆದರಿಕೆ ಹಾಕ್ತಾರೆ, ಸರ್ಕಾರ ಏನ್ ಮಾಡ್ತಿದೆ. ಸೈಬರ್ ಕ್ರೈಮ್ ಗೆ ಇನ್ನಷ್ಟು ಶಕ್ತಿ ಕೊಡಬೇಕು. ಯಾರೇ ಆಗಲಿ ರಾಜ ಮರ್ಯಾದೆ ಕೊಡಬಾರದು. ನಟ ಆಗಲಿ ರಾಜಕಾರಣ ಆಗಲಿ ರಾಜ ಮರ್ಯಾದೆ ಕೊಡಬಾರದು ಎಂದು ಹೇಳಿದ್ದಾರೆ. 

ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಸ್ವಲ್ಪ ಸಮಯ ಕೊಡಿ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಒದಿಗಸಬೇಕು. ಗೌರಿ ಕಳೆದುಕೊಂಡರೂ ನನಗೆ ನ್ಯಾಯ ಸಿಕ್ಕಿಲ್ಲ. ಸರ್ಕಾರ ಅವರಿಗೆ ನ್ಯಾಯ ಕೊಡಬೇಕು. ಯಾರು ಕೊಲೆ ಮಾಡಿದಾರೆ ಅನ್ನೋದನ್ನ ಕಮಿಷನರ್ ಹೇಳಿದ ಕೂಡಲೇ ಪ್ರತಿಭಟನೆ ಮಾಡೋಣ. ನಾನು ಕೂಡ ಪ್ರತಿಭಟನೆ ಮಾಡ್ತೀನಿ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios