ಮಂಡ್ಯ(ನ.28): ಕೆ.ಆರ್‌.ಪೇಟೆ ಉಪ ಚುನಾವಣೆಗಳು ಕೇವಲ ಶಾಸಕರ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲ. ಮಂತ್ರಿ ಸ್ಥಾನದ ಚುನಾವಣೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

ಕೆ.ಆರ್‌.ಪೇಟೆ ಪಟ್ಟಣದಲ್ಲಿ ರೋಡ್‌ ಶೋ ಮೂಲಕ ಪ್ರಚಾರ ನಡೆಸಿದ ಸದಾನಂದಗೌಡರು, ಯಡಿಯೂರಪ್ಪನವರು 3 ವರ್ಷ ಮುಖ್ಯಮಂತ್ರಿಗಳಾಗಿ ಮುಂದುವರಿಯಬೇಕಾದರೇ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನು ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ.

‘ತಂದೆ ವಿರೋಧವಿದ್ರು ಟಿಕೆಟ್ ಕೊಟ್ಟೆ : ಆದ್ರೆ ಇವ್ನು ಬಿಜೆಪಿ ಹಣ ಪಡೆದು ನಾಟಕವಾಡಿದ’

ಈಗ ರಾಜ್ಯ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆ ಶಾಸಕರ ಚುನಾವಣೆಯಲ್ಲ. ಮಂತ್ರಿ ಚುನಾವಣೆ. ತಾಲೂಕಿಗೆ ಮಂತ್ರಿ ಭಾಗ್ಯ ಬರಲಿದೆ. ಯಡಿಯೂರಪ್ಪ ಮತ್ತು ನಾರಾಯಣಗೌಡ ಇಬ್ಬರು ಸೇರಿ ಕ್ಷೇತ್ರವನ್ನು ಮಾದರಿ ಮಾಡುತ್ತಾರೆ ಎಂದಿದ್ದಾರೆ.

ಕಳೆದ ಆರು ವರ್ಷಗಳಿಂದ ಜಿಲ್ಲೆಯಲ್ಲಿ ಭೀಕರ ಬರಗಾಲವಿತ್ತು. ಜಿಲ್ಲೆಯ ಜನ ನೊಂದಿದ್ದಾರೆ. ಈಗ ಮಳೆ ಬಂದು ಜಿಲ್ಲೆಯ ಕೆರೆ ತುಂಬಿರುವುದು ಜನರು ಸಮೃದ್ಧರಾಗಿದ್ದಾರೆ. ಇದು ನಾರಾಯಣಗೌಡ ಗೆಲ್ಲಲು ಶುಭ ಸಂಕೇತದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

'5 ಸ್ಥಾನದಲ್ಲಿ ಜೆಡಿಎಸ್ ಗೆಲ್ಲೋದು ಪಕ್ಕಾ'

ಜನಾದೇಶದ ಸರ್ಕಾರ ರಚನೆ ಆಗಬೇಕು. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಬಂತು. ಜನಾದೇಶವಿಲ್ಲದ ಜೆಡಿಎಸ್‌ ಕಾಂಗ್ರೆಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿತ್ತು. ತಮ್ಮ ಶಾಸಕರನ್ನು ಗೌರವದಿಂದ ನೋಡಿಕೊಳ್ಳದೆ ಸರ್ಕಾರವನ್ನೇ ಕೆಡವಿಕೊಂಡಿದೆ. ಬಿಜೆಪಿ ಜನಾದೇಶವನ್ನು ಸ್ವೀಕರಿಸಿ ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದೆ ಎಂದಿದ್ದಾರೆ.

ಜಿಲ್ಲೆಯ ಜನರ ಮುಗ್ದತೆಯನ್ನು ಜೆಡಿಎಸ್‌ ಬಂಡವಾಳ ಮಾಡಿಕೊಂಡಿದ್ದಾರೆ. ಜೆಡಿಎಸ್‌ ಅವರಿಗೆ ಏನೇನು ಕೊಟ್ಟಿದೆ ಎಂಬುದು ಬಹಿರಂಗ ಚರ್ಚೆಯಾಗಲಿ. ಮಂಡ್ಯ, ಹಾಸನವನ್ನು ದೇವೇಗೌಡರು ನನ್ನ ಎರಡು ಕಣ್ಣು ಅಂತಾರೆ. ಎರಡು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಜೆಡಿಎಸ್‌ಗೆ ಪಂಥ ಅಹ್ವಾನ ನೀಡಿದ್ದಾರೆ.

ಮಂಡ್ಯಕ್ಕೆ ಬಂದು ಮತ ಹಾಕ್ತೀವಿ : ಬಾಂಬೆ ಯುವಕರ ವಿಡಿಯೋ ವೈರಲ್

ಈ ವೇಳೆ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬೂಕಹಳ್ಳಿ ಮಂಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜೆ.ವಿಜಯಕುಮಾರ್‌, ಮುಖಂಡರಾದ ಸಿದ್ದರಾಮಯ್ಯ, ಎಚ್‌.ಎನ್‌.ಮಂಜುನಾಥ್‌ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.