Asianet Suvarna News

ಮಂಡ್ಯಕ್ಕೆ ಬಂದು ಮತ ಹಾಕ್ತೀವಿ : ಬಾಂಬೆ ಯುವಕರ ವಿಡಿಯೋ ವೈರಲ್

ನಾವು ಬಾಂಬೆಯಲ್ಲಿ ಇದ್ದು ಮಂಡ್ಯಕ್ಕೆ ಬಂದು ಮತ ಹಾಕ್ತೀವಿ ಎಂದು ಹೇಳಿರುವ ಯುವಕರ ವಿಡಿಯೋ ಈಗ ವೈರಲ್ ಆಗಿದೆ. 

Our Vote For Narayana Gowda Bomby youths Video Viral
Author
Bengaluru, First Published Nov 27, 2019, 10:39 AM IST
  • Facebook
  • Twitter
  • Whatsapp

ಮಂಡ್ಯ/ಕೆಆರ್ ಪೇಟೆ [ನ.27] : ಬಾಂಬೆ ನಾವು ಬಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಪರ ಮತ ಹಾಕುತ್ತೇವೆ ಎಂದು ಇಬ್ಬರು ಯುವಕರು ಮಾಡಿರುವ ವಿಡಿಯೋ ಕ್ಷೇತ್ರದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಕೆಆರ್ ಪೇಟೆ ತಾಲೂಕಿನ ಹೆಚ್ಚು ಜನ ಮುಂಬೈನಲ್ಲಿ ವಿವಿಧ ಕೆಲಸ ಮಾಡಿಕೊಂಡಿದ್ದಾರೆ. ಕಳೆದ ಎರಡು ಚುನಾವಣೆಯಲ್ಲೂ ನಾರಾಯಣಗೌಡ ಪರ ಮತ ಹಾತಿದ್ದಾರಂತೆ. 

ಅದೇ ರೀತಿ ಈಗಲೂ ಮತ ಹಾಕಲು ಬರ್ತಾರಂತೆ. ತಾಲೂಕಿನ ಹರಿಹರ ಪುರ ಹಾಗೂ ಬಸ್ಸಾಪುರದ ಗ್ರಾಮದ ಇಬ್ಬರು ಯುವಕರು
ತಾವು ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದೇವೆ. 

ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆ ; ಸುಮಲತಾ ಯಾರ ಪರ ಮತಬೇಟೆ?..

ಮುಂಬೈನಲ್ಲಿ ಸುಮಾರು 2 ಸಾವಿರ ಜನ ಕೆಆರ್ ಪೇಟೆ ತಾಲೂಕಿನವರೇ ಇದ್ದಾರೆ. ಎಲ್ಲರೂ ಚುನಾವಣೆ ವೇಳೆ ಕೆ ಆರ್ ಪೇಟೆಗೆ ಬಂದು ನಾರಾಯಣಗೌಡರ ಪರವಾಗಿ ಮತ ಚಲಾಯಿಸುತ್ತೇವೆ ಎಂದು ಹೇಳಿರುವ ವಿಡಿಯೊ ಕೂಡ ವೈರಲ್ ಆಗಿದೆ.

ರಾಜ್ಯದಲ್ಲಿ ಡಿಸೆಂಬರ್ 5 ರಂದು 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 

Follow Us:
Download App:
  • android
  • ios