ಅಂಕೋಲಾ(ಮೇ.21): ಅನಾರೋಗ್ಯದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರದ ಅಂತಿಮ ವಿಧಿ ವಿಧಾನವನ್ನು ಮಗಳೇ ನೆರವೇರಿಸಿರುವ ಮನಕಲಕುವ ಘಟನೆ ಅಂಕೋಲಾ ಪಟ್ಟಣದ ಕೇಣೆಯಲ್ಲಿ ನಿನ್ನೆ(ಗುರುವಾರ) ನಡೆದಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕೇಣಿಯ ರಾಮಚಂದ್ರ ಬಂಟ ಅವರು ಗುರುವಾರ ನಿಧನರಾಗಿದ್ದರು. ಮೃತ ರಾಮಚಂದ್ರ ಅವರಿಗೆ ಇಬ್ಬರು ಹೆಣ್ಣು ಮಕ್ಕಳೆ ಇದ್ದು, ತುಂಬಾ ಅಕ್ಕರೆಯಿಂದ ಈ ಮಕ್ಕಳನ್ನು ನೋಡಿಕೊಂಡಿದ್ದರು. ತೀರಾ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಇವರು ತಂದೆ ತೀರಿಕೊಂಡಾಗ ಶವ ಸಂಸ್ಕಾರಕ್ಕೂ ತತ್ವಾರ ಪಡುವಂಥ ಸಂದರ್ಭ ಎದುರಾಗಿತ್ತು.

ಅಂಕೋಲಾದ ಕಲ್ಲುಜೆಂಜಿ ಏಡಿಗೆ ವಿದೇಶದಲ್ಲಿ ಭಾರೀ ಡಿಮ್ಯಾಂಡ್‌..!

ವಿಷಯ ತಿಳಿದ ಕೂಡಲೇ ಕೇಣಿಯ ಗ್ರಾಮಸ್ಥರೆ ಒಂದಾಗಿ ಶವ ಸಂಸ್ಕಾರಕ್ಕೆ ಬೇಕಾಗುವ ಅಗತ್ಯ ವಸ್ತು ಹಾಗೂ ಕಟ್ಟಿಗೆಯನ್ನು ಸಂಗ್ರಹಿಸಿ ಮಾನವೀಯತೆ ಮೆರೆದರು. ಹಾಗೆ ಕಿರಿಯ ಮಗಳಾದ ಲಕ್ಷ್ಮೀ ರಾಮಚಂದ್ರ ಬಂಟ ಅಪ್ಪನ ಶವಕ್ಕೆ ಬೆಂಕಿ ಇಟ್ಟಳು. ಮೃತ ರಾಮಚಂದ್ರನ ಕುಟುಂಬ ತೀರಾ ಬಡ ಕುಟುಂಬವಾಗಿರುವದರಿಂದ ಮುಂದಿನ ಧಾರ್ಮಿಕ ಕಾರ್ಯಕ್ರಮಗಳನ್ನು ಗ್ರಾಮಸ್ಥರ ಕೊಡುಗೆಯಲ್ಲೇ ನಡೆಸಲು ತಿರ್ಮಾನಿಸಲಾಗಿದೆ ಎಂದು ಊರಿನ ಪ್ರಮುಖರು ತಿಳಿಸಿದ್ದಾರೆ.