ನೈತಿಕತೆ ಪ್ರಶ್ನೆಯನ್ನೊಳಗೊಂಡ ಚುನಾವಣೆ: ಉಮಾಶ್ರೀ
ಪ್ರಜಾಪ್ರಭುತ್ವ ಮತ್ತು ನೈತಿಕತೆಯ ಪ್ರಶ್ನೆಯನ್ನೊಳಗೊಂಡ ಚುನಾವಣೆ ಇದಾಗಿದ್ದು, ತಾಲೂಕಿನ ಜನತೆ ಪ್ರಜಾತಂತ್ರದ ಉಳಿವಿಗೆ ಕಾಂಗ್ರಸ್ ಪಕ್ಷದ ಅಭ್ಯರ್ಥಿಗೆ ಮತಚಲಾಯಿಸಬೇಕು ಎಂದು ಮಾಜಿ ಸಚಿವ ಉಮಾಶ್ರೀ ಕೋರಿದ್ದಾರೆ.
ಮೈಸೂರು(ನ.29): ಪ್ರಜಾಪ್ರಭುತ್ವ ಮತ್ತು ನೈತಿಕತೆಯ ಪ್ರಶ್ನೆಯನ್ನೊಳಗೊಂಡ ಚುನಾವಣೆ ಇದಾಗಿದ್ದು, ತಾಲೂಕಿನ ಜನತೆ ಪ್ರಜಾತಂತ್ರದ ಉಳಿವಿಗೆ ಕಾಂಗ್ರಸ್ ಪಕ್ಷದ ಅಭ್ಯರ್ಥಿಗೆ ಮತಚಲಾಯಿಸಬೇಕು ಎಂದು ಮಾಜಿ ಸಚಿವ ಉಮಾಶ್ರೀ ಕೋರಿದ್ದಾರೆ.
ಗುರುವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, 17 ಮಂದಿ ಶಾಸಕರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಸರ್ವೋಚ್ಚ ನ್ಯಾಯಲಯದಿಂದ ಅನರ್ಹರೆಂದು ಹಣೆಪಟ್ಟಿಕಟ್ಟಿಕೊಂಡು ಮತ್ತೆ ಜನತಾ ನ್ಯಾಯಾಲಯದ ಮುಂದೆ ಬಂದಿದ್ದಾರೆ. ಅವರಿಗೆ ಬಿಜೆಪಿ ಪಕ್ಷ ಮಣೆಹಾಕಿ ಸ್ವಾಗತಿಸಿದೆ. ಇಲ್ಲಿ ಪ್ರಜಾತಂತ್ರದ ಹರಣದ ಜೊತೆಗೆ ರಾಜಕೀಯ ಕ್ಷೇತ್ರದ ನೈತಿಕತೆಯ ಪ್ರಶ್ನೆಯೂ ಅಡಗಿದೆ. ಇದನ್ನು ಮತದಾರರಿಗೆ ತಿಳಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದಿದ್ದಾರೆ.
ಪ್ರಚಾರದ ವೇಳೆ ಉಪಚುನಾವಣೆ ಪಕ್ಷೇತರ ಅಭ್ಯರ್ಥಿಗೆ ಹಾರ್ಟ್ ಅಟ್ಯಾಕ್
ತಾಲೂಕಿನಲ್ಲಿ ಕಳೆದ 10ವರ್ಷಗಳಲ್ಲಿ ಪಕ್ಷದ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಅದ್ಭುತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅಭಿವೃದ್ಧಿ ಪರ ಶಾಸಕರನ್ನು ಜನತೆ ಆರಿಸಿ ವಿಧಾನಸಭೆಗೆ ಕಳುಹಿಸಬೇಕೆ ಹೊರತು ಮತದಾರರಿಗೆ ಅಪಮಾನ ಮಾಡುವ ವ್ಯಕ್ತಿ ಮತ್ತು ಪಕ್ಷವನ್ನಲ್ಲ ಎನ್ನುವುದನ್ನು ಮತದಾರರು ಅರಿಯಬೇಕು ಎಂದು ಕೋರಿದ್ದಾರೆ.
ಕಣ್ಣೀರು ನಮ್ಮ ಪೇಟೆಂಟ್, ಎಲ್ಲದಕ್ಕೂ ಹಲ್ಲು ಬಿಡೋದಲ್ಲ: ಎಚ್‌ಡಿಕೆ ಟಾಂಗ್
ಸಭೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್, ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಪುಟ್ಟಮಾದಯ್ಯ ಇದ್ದರು. ಸಭೆಯ ನಂತರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಪಕ್ಷದ ಅಭ್ಯರ್ಥಿ ಎಚ್.ಪಿ. ಮಂಜುನಾಥ್ ಪರ ಮತಯಾಚಿಸಿದ್ದಾರೆ.
'ಎದೆ ಬಗೆದು ದೇವೇಗೌಡರ ತೋರಿಸಲು ನಾನು ಹನುಮಂತ ಅಲ್ಲ'..!