ವಿಜಯಪುರ(ಫೆ.09): ಖದೀಮರು ದೇವಸ್ಥಾನದಲ್ಲಿನ ಹುಂಡಿ ಒಡೆದು ಹಣ ಕಳ್ಳತನ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶ್ರೀ ಮುದ್ಧೇಶ್ವರ ದೇವಸ್ಥಾನದಲ್ಲಿ ಕಳ್ಳತನವಾಗಿದೆ. 

ಪ್ರತಿ ವರ್ಷ ಮಾರ್ಚ್‌ನಲ್ಲಿ ಶ್ರೀ ಮುದ್ಧೇಶ್ವರ ಸ್ವಾಮಿಯ ಜಾತ್ರೆ ನಡೆಯುತ್ತದೆ.  ಜಾತ್ರಾ ಸಮೀತಿ ಈ ವೇಳೆ ಹುಂಡಿಯ ಹಣ ತೆಗೆಯುತ್ತಿದ್ದರು. ಆದರೆ ಜಾತ್ರೆಗೆ ಇನ್ನೂ ಒಂದು ತಿಂಗಳು ಬಾಕಿ ಇದೆ. ಅಷ್ಟರಲ್ಲೇ ಕಳ್ಳರು ತಮ್ಮ ಕೈಚೆಳಕ ಮೆರೆದು ಕಳ್ಳತನ ಮಾಡಿದ್ದಾರೆ.

ಶ್ರೀ ಮುದ್ಧೇಶ್ವರ ದೇವಸ್ಥಾನದ ಹುಂಡಿಯಲ್ಲಿ ಪ್ರತಿ ವರ್ಷ ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗುತ್ತಿತ್ತು. ದೇವರ ಹುಂದಿಯಲ್ಲಿನ ದುಡ್ಡು ಕದ್ದ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.