Asianet Suvarna News Asianet Suvarna News

ಸ್ಮಾರ್ಟ್​ ಸಿಟಿ ಯೋಜನೆಯಡಿ ನಿರ್ಮಾಣವಾಗಿರುವ ರಸ್ತೆಗಳಲ್ಲಿ ಕಳ್ಳರ ಕಾಟ, ಕಂಬಗಳ ಕಳ್ಳತನ!

ಫುಟ್ಪಾತ್​ನ್ನು ಬಿಡದೆ ಕೆಲ ಟೂವೀಲರ್​ಗಳು ಫುಟ್​ ಪಾತ್​ ಸವಾರಿ ಮಾಡ್ತಾರೆ. ಇದನ್ನ ತಪ್ಪಿಸೋಕೆ ಫುಟ್​ ಪಾತ್​ ನಡುವಿಗೆ ಕಪ್ಪು ಕಂಬಗಳನ್ನ ಅಳವಡಿಕೆ ಮಾಡಿದ್ರು. ಈಗ ಅದಕ್ಕೂ ಕಳ್ಳರ ಕಾಟ ಶುರುವಾಗಿದೆ.

thieves decamp with equipment meant for bengaluru smart city gow
Author
First Published Sep 18, 2022, 10:16 PM IST

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಸೆ.18): ದುಡ್ಡು ಮನುಷ್ಯನ ತಲೆಯನ್ನ ಹೇಗೆಲ್ಲ ಓಡಿಸುತ್ತೆ ಎಂಬುದಕ್ಕೆ ಈ ಹಿಂದೆ ನಡೆದ ಅನೇಕ ಕೃತ್ಯಗಳೇ ಸಾಕ್ಷಿ. ಈಗ ಅದಕ್ಕೆ ಮತ್ತೊಂದು ಹೊಸ ಕೃತ್ಯ ಸೇರ್ಪಡೆಯಾಗಿದೆ. ಇದೊಂದು ಕೃತ್ಯದ ಬಗ್ಗೆ ಬಿಬಿಎಂಪಿ ಹಾಗು ಪೊಲೀಸ್​ ಇಲಾಖೆ ಇಬ್ಬರೂ ತಲೆಕೆಡಿಸಿಕೊಳ್ಳಬೇಕಿದೆ.  ನಗರದಲ್ಲಿ ಕೆಲವೆಡೆ  ಪಾದಚಾರಿಗಳಿಗೆ ಸುಗಮವಾಗಲಿ ಎಂದು  ಫುಟ್ಪಾತ್​ ಅಚ್ಚುಕಟ್ಟಾಗಿ ನಿರ್ಮಿಸಿ  ನಡೆದಾಡಲು ಅನುವು ಮಾಡಿಕೊಡಲಾಗಿದೆ. ಆದ್ರೆ ಆ ಫುಟ್ಪಾತ್​ನ್ನು ಬಿಡದೆ ಕೆಲ ಟೂವೀಲರ್​ಗಳು ಫುಟ್​ ಪಾತ್​ ಸವಾರಿ ಮಾಡ್ತಾರೆ. ಇದನ್ನ ತಪ್ಪಿಸೋಕೆ ಫುಟ್​ ಪಾತ್​ ನಡುವಿಗೆ ಕಪ್ಪು ಕಂಬಗಳನ್ನ ಅಳವಡಿಕೆ ಮಾಡಿದ್ರು. ಈಗ ಅದಕ್ಕೂ ಕಳ್ಳರ ಕಾಟ ಶುರುವಾಗಿದೆ. ಈಗಾಗಲೇ ನಗರದಾದ್ಯಂತ ಸ್ಮಾರ್ಟ್​ ಸಿಟಿ ಪ್ರಾಜೆಕ್ಟ್​ನಡಿ ಫುಟ್​ ಪಾತ್​ಗಳನ್ನ ನಿರ್ಮಾಣ ಮಾಡಿ ಅದಕ್ಕೆ ನಡುಗಂಬಗಳನ್ನ ನೆಡಲಾಗ್ತಿದೆ. ಅದನ್ನೇ ಟಾರ್ಗೆ್ಟ್​ ಮಾಡಿರುವ ಕಳ್ಳರು ದಿನವಿಡಿ ತಿರುಗಾಡಿ ಜಾಗವನ್ನ ಗುರುತಿಟ್ಟುಕೊಂಡು ರಾತ್ರಿ ವೇಳೆ ಫುಟ್​ ಪಾಥ್​ನ್ನ  ಧ್ವಂಸಗೊಳಿಸಿ ನಿರ್ಮಾಣ ಮಾಡಲಾದ ಕಂಬಗಳನ್ನ ಕದಿಯುತ್ತಾರೆ. ಯಸ್​ ರಾತ್ರಿ ವೇಳೆ ಆಟೋದಲ್ಲಿ ಬರುವ ಆಗಂತುಕರು ಕಂಬಗಳನ್ನ ಕಿತ್ತು ಪರಾರಿಯಾಗಿದ್ದಾರೆ. ಬಹುತೇಕ ನಗರದ ಸಿಸಿಟಿಗಳನ್ನ ಪರಿಶೀಲಿಸಿದರೆ ​ ಮಾಡಿದರೆ ಇದೇ ರೀತಿಯ ಕಿಡಿಗೇಡಿ ಕೃತ್ಯಗಳು ಬಯಲಿಗೆ ಬರುವ ಸಾಧ್ಯತೆ ಇದೆ.

Bengaluru: ಡ್ಯಾಗರ್, ಚಾಕು ಹಿಡಿದು ಸೆಲಬ್ರೇಷನ್: ಸ್ಥಳೀಯರು ಪ್ರಶ್ನಿಸಿದ್ರೆ ಬೀಳುತ್ತೆ ಗೂಸಾ..!

ಇನ್ನು ಇವರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆಟೋದ ನಂಬರ್​ ಕೂಡಸೆರೆಯಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಕಬ್ಬಣಕ್ಕೆ ಹೆಚ್ಚು ಬೆಲೆ ಇದೆ. ಇದೇ ಇಂಟನ್ಷನ್​ನಲ್ಲಿ ಕಳ್ಳರು ಹಣದಾಸೆಗೆ  ಕಬ್ಬಿಣವನ್ನ ಕದಿಯುವ ಕೆಲಸವನ್ನ ಮಾಡ್ತಿದ್ದಾರೆ. ಇನ್ನು ಕೇ ಆರ್​ ರಸ್ತೆಯ ಎರಡ್ಮೂರು ಕಡೆಯಲ್ಲಿ ಇಂತಹದ್ದೆ ಕೃತ್ಯ ನಡೆದಿದೆ ಎನ್ನಲಾಗಿದೆ.

ಬೆಂಗಳೂರಿನ ಗೆಳತಿಯ ಮನೆಯಿಂದಲೇ ಚಿನ್ನ ಕದ್ದ ಮಹಿಳೆ ಮೈಸೂರಿನಲ್ಲಿ ಸೆರೆ!

ಇನ್ನು ಬಹುತೇಕ ಇಂತಹ ಘಟನೆಗಳು ಸಂಬಂಧಪಟ್ಟ ಇಲಾಕೆಗೆ ಗಮನಕ್ಕೆ ಬರೋದಿಲ್ಲ. ಒಂದು ಬಾರಿ ಕೆಲಸ ಮುಗಿದರೆ  ಅತ್ತ ಸುಳಿಯದ ಅಧಿಕಾರಿಗಳು ಮತ್ತೊಂದಷ್ಟು ಏರಿಯಾಗಳಲ್ಲಿ ಸರ್ವೆ ಮಾಡಿ ಕೃತ್ಯದ ಬಗ್ಗೆ ಗಮನ ಹರಿಸಬೇಕಿದೆ. ಸದ್ಯ ಈ ಸಂಬಂಧ ಬನಶಂಕರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

Follow Us:
Download App:
  • android
  • ios