ಬೆಂಗಳೂರಿನ ಗೆಳತಿಯ ಮನೆಯಿಂದಲೇ ಚಿನ್ನ ಕದ್ದ ಮಹಿಳೆ ಮೈಸೂರಿನಲ್ಲಿ ಸೆರೆ!
ಗೆಳತಿಯ ಮನೆಯಲ್ಲೇ ಕಳ್ಳತನ ಮಾಡಿ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಂತ ಆರೋಪಿ ಮಹಿಳೆಯೊಬ್ಬಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಗೀತಾಳನ್ನ ಒಂಭತ್ತುವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳ ಸಮೇತ ಬಂಧಿಸಿದ್ದಾರೆ.
ಬೆಂಗಳೂರು (ಸೆ.18): ಕಷ್ಟ ಅಂತಾ ಬಂದಾಗ ಜೊತೆಯಾಗೋರೆ ಫ್ರೆಂಡ್ಸ್ ಕಷ್ಟ ಅಂತಾ ಗೆಳೆಯರ ಬಳಿ ಕೇಳಿದ್ರೆ ಅವ್ರಿಗೆ ಕಷ್ಟ ಆದ್ರೂ ಸಹಾಯ ಮಾಡ್ತಾರೆ. ಹೀಗೆ ತಾನು ಫೈನಾನ್ಸಿಯಲೀ ಕಷ್ಟದಲ್ಲಿದ್ದ ಮಹಿಳೆ ಕಷ್ಟ ಅಂತಾ ಕೇಳೋದು ಬಿಟ್ಟು ಗೆಳತಿಯ ಮನೆಯಲ್ಲೇ ಕಳ್ಳತನ ಮಾಡಿದ್ದಾಳೆ. ಗೆಳತಿಯ ಮನೆಯಲ್ಲೇ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದಂತ ಆರೋಪಿ ಮಹಿಳೆಯೊಬ್ಬಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಮೈಸೂರು ಮೂಲದ ಗೀತಾಳನ್ನ ಒಂಭತ್ತುವರೆ ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳ ಸಮೇತ ಬಂಧಿಸಿದ್ದಾರೆ. ಅಂದ ಹಾಗೆ ಮೈಸೂರು ನಿವಾಸಿ ಗೀತಾ ರಿಲೇಷನ್ಸ್ ಫಂಕ್ಷನ್ ಅಂತಾ ಬೆಂಗ್ಳೂರಿಗೆ ಬಂದಿದ್ಳು. ಹಲವು ದಿನಗಳಿಂದ ಆರ್ಥಿಕವಾಗಿ ಸಮಸ್ಯೆ ಎದುರಿಸ್ತಿದ್ದಾಕೆ ಹಣಕ್ಕಾಗಿ ಹುಡುಕಾಟ ಮಾಡ್ತಿದ್ದಳು. ಈ ಟೈಮಲ್ಲಿ ಆಕೆ ಫ್ರೆಂಡ್ ಲಕ್ಷ್ಮಿನ ಮೀಟ್ ಮಾಡೋಕೆ ಹೋಗಿದ್ದಾಳೆ. ವಿದ್ಯಾರಣ್ಯಪುರದ ತಿಂಡ್ಲು ಬಳಿ ಮಾತನಾಡಿಸೋಕೆ ಹೋದಾಗ ಚಿನ್ನಾಭರಣಗಳ ಬಗ್ಗೆ ಮಾತುಕತೆ ಬಂದಿದೆ. ಈ ವೇಳೆ ಚಿನ್ನದ ಡಿಸೈನ್ ನೋಡ್ತೀನೆಂದು ಲಕ್ಷ್ಮೀ ಅನ್ನೋರ ಕೈಯಿಂದ ಚಿನ್ನ ಈಸ್ಕೊಂಡಿದ್ದಾಕೆ ಸಮಯ ನೋಡಿಕೊಂಡು ಚಿನ್ನಾಭರಣ ಸಮೇತ ಎಸ್ಕೇಪ್ ಆಗಿದ್ದಳು.
ಈ ಸಂಬಂಧ ವಿದ್ಯಾರಣ್ಯಪರ ಪೊಲೀಸರಿಗೆ ಲಕ್ಷ್ಮೀ ದೂರು ನೀಡಿದ್ರು. ತನಿಖೆ ಶುರು ಮಾಡಿದ್ದ ಪೊಲೀಸರಿಗೆ ಆರೋಪಿತೆ ಗೀತಾ ಕದ್ದ ಚಿನ್ನವನ್ನ ಮೈಸೂರಿನಲ್ಲಿ ಅಡವಿಟ್ಟಿರೋದು ಗೊತ್ತಾಗಿದೆ. ಕನ್ಫರ್ಮ್ ಆಗಿದ್ದೆರ ತಡ ಆರೋಪಿತೆಯನ್ನ ಅರೆಸ್ಟ್ ಮಾಡಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಅದೇನೆ ಕಷ್ಟ ಇದ್ರೂ ಫ್ರೆಂಡ್ಸ್ ಹತ್ರ ಹೇಳ್ಕೊಂಡ್ರೆ ಅವ್ರೇ ಹೆಲ್ಪ್ ಮಾಡ್ತಾರೆ.. ಆದ್ರೆ ಅದನ್ನ ಹೇಳದೆ ಕಳ್ಳತನ ಮಾಡಿ ಈ ಮಹಿಳೆ ಈಗ ಜೈಲುಪಾಲಾಗಿದ್ದಾಳೆ.
ನಕಲಿ ಇಟ್ಟು ಅಸಲಿ ಚಿನ್ನ ಕದ್ದ ಮಹಿಳೆಯರು
ಶಿವಮೊಗ್ಗ: ಬುರ್ಖಾ ಧರಿಸಿ ಬಂದಿದ್ದ ಇಬ್ಬರು ಮಹಿಳೆಯರು ಆಭರಣದ ಅಂಗಡಿಯಲ್ಲಿ ಮಾಲೀಕನ ಗಮನ ಬೇರೆಡೆ ಸೆಳೆದು ನಕಲಿ ಬಂಗಾರ ಇರಿಸಿ, ಅಸಲಿ ಬಂಗಾರದ ಒಡವೆ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ಚಾಲಕ ಲಾರಿಯಲ್ಲಿ ಮಲಗಿದ್ದಾಗಲೇ ಟೈಯರ್ ಕದಿಯುತ್ತಿದ್ದ ಖತರ್ನಾಕ್ ಗ್ಯಾಂ
ಗಾಂಧಿ ಬಜಾರ್ ಆಭರಣದ ಮಳಿಗೆಯೊಂದರಲ್ಲಿ ಘಟನೆ ಸಂಭವಿಸಿದ್ದು, ಅಂಗಡಿಯಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಟ್ರೇನಲ್ಲಿ ನಕಲಿ ಬಂಗಾರದ ಒಡವೆಗಳು ಇರುವುದು ಗೊತ್ತಾಗಿದೆ. ಸಿಸಿಟಿವಿಯನ್ನು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಆಭರಣ ಕದ್ದ ಮಹಿಳೆಯರೊಂದಿಗೆ ಬಂದಿದ್ದ ಓರ್ವ ಪುರುಷ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
BENGALURU: ಡ್ಯಾಗರ್, ಚಾಕು ಹಿಡಿದು ಸೆಲಬ್ರೇಷನ್: ಸ್ಥಳೀಯರು ಪ್ರಶ್ನಿಸಿದ್ರೆ ಬೀಳುತ್ತೆ ಗೂಸಾ..!
ಏನಿತ್ತು ಸಿಸಿಟಿವಿಯಲ್ಲಿ?:
ಆಗಸ್ಟ್ 20ರ ಮಧ್ಯಾಹ್ನ ಘಟನೆ ಸಂಭವಿಸಿದೆ. ಬುರ್ಖಾ ಧರಿಸಿದ್ದ ಇಬ್ಬರು ಮಹಿಳೆಯರು ಮತ್ತು ಓರ್ವ ಪುರುಷ ಅಂಗಡಿಗೆ ಬಂದಿದ್ದರು. ಒಂದು ಚಿನ್ನದ ಉಂಗುರ ಮತ್ತು ಒಂದು ಜೊತೆ ಕವಿಯೋಲೆ ಖರೀದಿಸಿದ್ದರು. ಈ ವೇಳೆ ಮಾಲೀಕನ ಗಮನವನ್ನು ಬೇರೆಡೆ ಸೆಳೆದು ಟ್ರೇನಲ್ಲಿದ್ದ ಒಂದು ಚಿನ್ನದ ಉಂಗುರ ಮತ್ತು ಎರಡು ಜೊತೆ ಕಿವಿಯೋಲೆಗಳನ್ನು ಕದ್ದಿದ್ದಾರೆ. ಆ ಜಾಗಕ್ಕೆ ತಾವು ತಂದಿದ್ದ ನಕಲಿ ಬಂಗಾರದ ಉಂಗುರ ಮತ್ತು ಕಿವಿಯೋಲೆಗಳನ್ನು ಇಟ್ಟು ತೆರಳಿದ್ದಾರೆ. ಕಳ್ಳರು 11 ಸಾವಿರ ರು. ಮೌಲ್ಯದ ಬಂಗಾರ ಖರೀದಿಸಿ, ಸುಮಾರು 85 ಸಾವಿರ ಮೌಲ್ಯದ ಚಿನ್ನಾಭರಣ ಕದ್ದೊಯ್ದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.